ವಿಜಯಪುರ 24: ದಿ. 23 ರಂದು ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯ ಸದಸ್ಯರ ಅನುಕೂಲಕ್ಕಾಗಿ ವಿವಿಧ ಪ್ರಕಾರದ ಡಿಜಿಟಲ್ ಸೇವಾ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐಸಿಐಸಿಐ ಬ್ಯಾಂಕಿನ ರಿಜನಲ್ ಮ್ಯಾನೇಜರ ವಿಜಯ ಕಿತ್ತಲಿ ಹಾಗೂ ವಿಜಯಪುರದ ಶಾಖಾ ವ್ಯವಸ್ಥಾಪಕರಾದ ತವನ ಲಕ್ಕನ್ನವರ ಹಾಗೂ ಸಿ-ಟೆಕ್ ಸರ್ವಿಸಸ್ ಪ್ರಬಂಧಕರಾದ ಕುಮಾರಿ ನಾಗವೇಣಿ ಹಿರೇಮಠ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾ. ಸದಾಶಿವ ಪವಾರ ವಹಿಸಿದ್ದರು. ಡಿಜಿಟಲ್ ಸೇವಾ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯ ಕಿತ್ತಲಿ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಪ್ರಗತಿ ಪಥದಲ್ಲಿ ಮುಂದುವರೆದಿದ್ದು, ತನ್ನ ಸದಸ್ಯರಿಗೆ ವಿವಿಧ ಪ್ರಕಾರದ ಡಿಜಿಟಲ್ ಸೇವಾ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ನಮ್ಮ ಐಸಿಐಸಿಐ ಬ್ಯಾಂಕಿನ ಸಹಯೋಗದೊಂದಿಗೆ ತನ್ನ ಸದಸ್ಯರಿಗೆ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ. ಹೋಸ್ಟ್ ಟು ಹೋಸ್ಟ್ ಸೇವಾ ಸೌಲಭ್ಯ ಹಾಗೂ ತನ್ನ ಸದಸ್ಯರುಗಳಿಗೆ ಪ್ರಿಪೇಡ್ ಎ.ಟಿ.ಎಂ. ಕಾರ್ಡಗಳ ಸೌಲಭ್ಯವನ್ನು ನೀಡುತ್ತಲಿದೆ ಎಂದು ಹೇಳಿದರು. ಸಂಘದ ಸದಸ್ಯರು ಈ ಡಿಜಿಟಲ್ ಸೇವಾ ಸೌಲಭ್ಯಗಳ ಉಪಯೋಗ ಪಡೆಯಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅಶೋಕ ಪವಾರ ಇವರಿಗೆ ಪ್ರಿಪೇಡ್ ಎ.ಟಿ.ಎಂ. ಕಾರ್ಡ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ. ಸದಾಶಿವ ಪವಾರ ಸಂಘದ ಸದಸ್ಯರಿಗೆ ಡಿಜಿಟಲ್ ಸೇವಾ ಸೌಲಭ್ಯ ನೀಡುವ ಉದ್ಧೇಶದಿಂಧ ಸಂಘದ ಪಿಗ್ಮಿ ಸಂಗ್ರಹಕಾರರಿಗೆ ಸಿ-ಟೆಕ್ ಸರ್ವಿಸಸ್ ಇವರ ಸಹಯೋಗದಿಂದ ಪಿಗ್ಮಿ ಮೊಬೈಲ್ ಆ್ಯಪ್ ಸೇವೆಯನ್ನು ಪ್ರಾರಂಭ ಮಾಡುತ್ತಿದ್ದು ಇದರಿಂದ ಸದಸ್ಯರಿಗೆ ತಮ್ಮ ಮೊಬೈಲ್ ಮುಖಾಂತರ ತಮ್ಮ ಖಾತೆಯ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ. ಹಾಗೂ ತಮ್ಮ ದಿನನಿತ್ಯದ ವ್ಯವಹಾರದ ಕುರಿತು ತಮ್ಮ ವಾಟ್ಸಪ್ ಆ್ಯಪ್ ಅಥವಾ ಟೆಕ್ಸ್-್ಟ ಮೇಸೆಜ್ ಮುಖಾಂತರ ತಾವು ಮಾಡಿದ ವ್ಯವಹಾರದ ಕುರಿತು ನಿಖರವಾದ ಮಾಹಿತಿಯನ್ನು ಪಡೆಬಹುದಾಗಿದೆ ಎಂದು ಹೇಳಿದರು. ಈ ಮೊಬೈಲ್ ಆ್ಯಪ್ ಬಗ್ಗೆ ವಿವರವಾದ ಮಾಹಿತಿಯನ್ನು ಸಿ-ಟೆಕ್ ಸರ್ವಿಸಸ್ ಪ್ರಬಂಧಕರಾದ ಕುಮಾರಿ ನಾಗವೇಣಿ ಹಿರೇಮಠ ಹಾಗೂ ಸಹಾಯಕ ತಂತ್ರಜ್ಞಾನರಾದ ಶ್ರೀ ಗೀರೀಶ ಮಠ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಪಿಗ್ಮಿ ಏಜೆಂಟರುಗಳಿಗೆ ಮೊಬೈಲ್ ಆ್ಯಪ್ ಪ್ರಿಂಟರ್‌ಗಳನ್ನು ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಂಕರ ಕನಸೆ, ಸಂಜಯ ಜಂಬೂರೆ, ಮಹಾದೇವ ಪವಾರ, ರವಿ ಮದಭಾವಿ, ಭಾರತ ದೇವಕುಳೆ, ಪ್ರಧಾನ ವ್ಯವಸ್ಥಾಪಕರಾದ ಸಂಜಯ ಜಾಧವ, ವ್ಯವಸ್ಥಾಪಕರುಗಳಾದ ಚಂದ್ರಕಾಂತ ಜಾಧವ, ಅಂಬಾದಾಸ ಚವ್ಹಾಣ, ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳಾದ ವೆಂಕಟೇಶ ಉಪಾಳೆ, ಜಹಾಂಗೀರ ದಳವಾಯಿ, ಇರ್ಫಾನ ಬಾಗವಾನ, ಸಂಘದ ಸಿಬ್ಬಂದಿ ವರ್ಗದವರು, ಪಿಗ್ಮಿ ಏಜೆಂಟರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.