ಕಬ್ಬಿನ ಕೊರತೆ: ಸಕ್ಕರೆ ಕಾರ್ಖಾನೆಗಳು ಬೇಗ ಸ್ಥಗಿತಗೊಳ್ಳುವ ಸಾಧ್ಯತೆ

Shortage of sugarcane: Sugar mills likely to shut down soon

ಸಂಬರಗಿ 29: ಗಡಿ ಭಾಗದಲ್ಲಿ ಸನ್ 2024-25 ಕಬ್ಬು ನುರಿಸುವ ಹಂಗಾಮನ್ನು ಕಬ್ಬಿನ ಕೊರತೆಯಿಂದ ಯಾವುದೇ ಸಕ್ಕರೆ ಕಾರಖಾನೆಗಳು ತಮ್ಮ ಗುರಿ ಮುಟ್ಟಲು ಅಸಾಧ್ಯವಾದ ನಂತರ ಎಳೆ ಕಬ್ಬು ಸಾಗಾಣಿಕೆ ಮಾಡುವದರಿಂದ ಕಾರಖಾನೆ ಹಾನಿಯಲ್ಲಿ ಬರತಾ ಇದ್ದು ಆ ಕಾರಣ ಮಾರ್ಚ ಕೊನೆಯ ವರೆಗೆ ನಡೆಯುವ ಕಾರಖಾನೆಗಳು ಫೇಬ್ರುವರಿ 1 ನೇ ವಾರದಲ್ಲಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಕಬ್ಬು ಕಟಾವು ಮಾಡುವ ಕೂಲಿಗಾರಿಗೆ ಕಬ್ಬುಗಾಗಿ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.  

ಗಡಿ ಭಾಗದ ಅಥಣಿ ತಾಲೂಕಾ ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕಾ ಒಟ್ಟು 70 ಲಕ್ಷ ಟನ್ ಕಬ್ಬು ಇದ್ದು ಒಟ್ಟು ಆರು ಸಕ್ಕರೆ ಕಾರರ್ಖಾನೆಗಳು ಇದ್ದು ಅವರ ಗುರಿ ಮುಟ್ಟಲು 90 ಲಕ್ಷ ಟನ್ ಬೇಕಾಗಿದ್ದು ಆದರೆ ಕಬ್ಬಿನ ದರ ಯಾವ ಕಾರರ್ಖಾನೆ ಕೊಡುತ್ತಿದೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಿಗುತ್ತಿದೆ. ಎಲ್ಲ ಸ್ಥಳಿಯ ಕಾರರ್ಖಾನೆಗಳು ಕಬ್ಬು ಕೊರತೆಯನ್ನು ಎದುರಿಸಬೇಕಾಗಿದೆ. ತಾಲೂಕಿನ ಸುತ್ತ ಮುತ್ತಲಿರುವ ಮಹಾರಾಷ್ಟ್ರದ ಶಿರೋಳ, ಜತ್ತ, ಮೀರಜ, ಸಾಂಗಲಿ ತಾಲೂಕಿನಲ್ಲಿ ಇರುವ ಕಾರರ್ಖಾನೆಗಳು ಅತಿ ಹೆಚ್ಚು ಕಬ್ಬು ಸಾಗಾಣಿಕೆ ಮಾಡಿದ್ದಾರೆ ಆ ಕಾರಣ ಕಬ್ಬಿನ ಕೊರತೆಯಾಗಿದೆ. ಈಗಾಗಲೇ ಗಡಿ ಭಾಗದ ಹಲವಾರು ಕಾರರ್ಖಾನೆಗಳು ಸಾಂಗಲಿ ಮತ್ತು ಕೋಲ್ಹಾಪೂರ ಜಿಲ್ಲೆಯಲ್ಲಿ ಹೋಗಿ ಕಬ್ಬು ಸಾಗಾಣಿಕೆ ಮಾಡತಾ ಇದ್ದಾರೆ. ಇದರಿಂದ ಸ್ಥಳಿಯ ಕಾರರ್ಖಾನೆಗಳಿಗೆ ಕಬ್ಬಿನ ಕೊರತೆ ಎದ್ದು ಕಾಣತಾ ಇದೆ.  

ಕಬ್ಬಿನ ಕೊರತೆಯಿಂದ ಕಬ್ಬು ಕಟಾವು ಆಗುವ ಸಾಗಾಣಿಕೆ ಮಾಡುವ ವಾಹನಗಳು ಹಾಗೂ ಕೂಲಿ ಕಾರ್ಮಿಕರು ಮರಳಲು ಸಿದ್ದರಾಗಿದ್ದಾರೆ. ಆದರೆ ಕಾರರ್ಖಾನೆಗಳು ನೀಡಿರುವ ಮುಂಗಡ ಹಣ ಎಲ್ಲ ಮರುಪಾವತಿ ಮಾಡಲು ಅಸಾಧ್ಯವಾಗಿದೆ.ಮುಂಬರುವ ಹಂಗಾಮಿನಲ್ಲಿ ಮುಟ್ಟುವ ಸಾದ್ಯತೆ ಇದೆ.  

ಈ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ನಿಂಗಪ್ಪಾ ಬಿರಾದಾರ ಇವರನ್ನು ಸಂಪರ್ಕ ಸಾಧಿಸಿದಾಗ ಕೃಷ್ಣಾ ತೀರದ ಹಾಗೂ ಗಡಿ ಭಾಗದಲ್ಲಿ ಕಬ್ಬಿನ ಇಳುವರಿ ಕಡಿಮೆ ಬಿದ್ದ ಕಾರಣ ಕಬ್ಬಿನ ಕೊರತೆ ಉಂಟಾಗಿದೆ. ಪ್ರತಿ ಎಕರೆಗೆ 60-70 ಟನ್ ಇಳುವರಿ ಇದ್ದು ಆದರೆ ಈ ವರ್ಷ ನೀರಿನ ಕೊರತೆಯಿಂದ 30-40 ಟನ್ ಇಳುವರಿ ಬಿದ್ದಿದೆ ಇದರಿಂದ ಕಬ್ಬಿನ ಇಳುವರಿ ಕಡಿಮೆಯಾಗಿ ಕಾರರ್ಖಾನೆಗಳು ಗುರಿ ಮುಟ್ಟಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ.