ಎ ಮತ್ತು ಬಿ ಹುದ್ದೆಗಳಿಗೆ ಶೇ. 4 ರಷ್ಟು ಬಡ್ತಿ ಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ
ಕೊಪ್ಪಳ 12: ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುರಿಸಿ ಎ ಮತ್ತು ಬಿ ವೃಂದ ಹುದ್ದೆಗಳಿಗೆ ಶೇಕಡಾ 4 ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರದ ಕುರಿತು ಮೇ.9 ರಂದು ಜರುಗಿದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದ್ದು,ಅದರಲ್ಲೂ ಕೂಡಾ ಸರಕಾರ ಕಿರಿಯ ಶ್ರೇಣಿಯ ಹುದ್ದೆಗಳಿಗೆ ಮಾತ್ರ ಎನ್ನುವ ಮೂಲಕ ಸರಕಾರ ಮತ್ತೆ ತಾರತಮ್ಯ ಮಾಡುತ್ತಿದೆ. ಕೂಡಲೇ ಸರಕಾರ ಇಂತಹ ದೋರಣೆಯನ್ನು ನಿಟ್ಟು ಹಿರಿಯ ಶ್ರೇಣಿಯಲ್ಲಿ ಕೆಲಸ ಮಾಡುವ ವಿಕಲಚೇತನ ನೌಕರರಿಗೂ ಕೂಡಾ ಅನ್ವಯವಾಗುವಂತೆ ಆದೇಶ ಮಾಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ವಿಚಾರದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ದೇಶದ ಎಲ್ಲಾ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ 2014ರಲ್ಲೇ ನಿರ್ದೇಶನ ನೀಡಿತ್ತು.ಆದರೆ 11 ವರ್ಷ ಕಲೆದರೂ ಕೂಡಾ ರಾಜ್ಯ ಸರಕಾರಗಳು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲಾ.ಈ ವಿಚಾರವಾಗಿ ವಿಕಲಚೇತನ ನೌಕರರ ಸಂಘವು ಸರಕಾರಕ್ಕೆ ಹಲವು ಬಾರಿಯ ಮನವಿ ಮಾಡಿದರೂ ಸರಕಾರ ಜಾರಿ ಮಾಡದ ಹಿನ್ನಲೆಯಲ್ಲಿ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು.
ಇದರ ಅನ್ವಯ ಹಿಂದಿನ ಸರಕಾರ ತರಾತುರಿಯಲ್ಲಿ ಎಲ್ಲಾ ಹುದ್ದೆಗಳಿ ಬಡ್ತಿ ಮೀಸಲಾತಿ ಆದೇಶ ಜಾರಿಗೆ ಮಾಡುವುದನ್ನು ಬಿಟ್ಟು ಕೇವಲ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಮಾತ್ರ ಆದೇಶ ಜಾರಿಗೆ ಮಾಡಿತ್ತು. ಪುನಹ: ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ ನಲ್ಲಿ ದಾವೆ ಹೂಡಿದ ಪರಿಣಾಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು 6 ತಿಂಗಳ ಒಳಗಡೆಯಲ್ಲಿ ಸೌಲಭ್ಯ ನೀಡುವುದಾಗಿ ಹೈಕೋರ್ಟಗೆ ಉತ್ತರ ನೀಡಿತ್ತು. ಅದರನ್ವಯ ಮೇ 9 ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಎ ಮತ್ತು ಬಿ ವೃಂದದ ಹುದ್ದೆಗಳ ಬಡ್ತಿ ಮೀಸಲಾತಿ ವಿಚಾರದ ಕುರಿತು ಒಪ್ಪಿಗೆ ನೀಡಿದೆ. ಆದರೆ ಸರಕಾರವು ಇದರಲ್ಲೂ ಕೂಡಾ ತಾರತಮ್ಯ ಉಂಟು ಮಾಡುವ ಕಾರ್ಯ ಮಾಡಿದೆ. ಎ ಮತ್ತು ಬಿ ವೃಂದದಲ್ಲಿ ಕೆಲಸ ಮಾಡುವ ಕಿರಿಯ ಶ್ರೇಣಿ ವಿಕಲಚೇತನ ನೌಕರರಿಗೆ ಮಾತ್ರ ಬಡ್ತಿ ಸೌಲಭ್ಯ ನೀಡುವ ಕುರಿತು ವಿಚಾರ ಪ್ರಸ್ತಾಪಿಸಲಾಗಿದ್ದು, ಸರಕಾರವು ಕೂಡಲೇ ಎಲ್ಲಾ ಹಿರಿಯ ಶ್ರೇಣಿಯಲ್ಲಿ ಕೂಡಾ ಶೇಕಡಾ 4 ರರಷ್ಟು ಬಡ್ತಿ ಮೀಸಲಾತಿ ಸೌಲಭ್ಯ ನೀಡಬೇಕು ಹಾಗೂ ಸುಪ್ರೀಂಕೋರ್ಟ 2014ರಲ್ಲೇ ನಿರ್ದೇಶನ ನೀಡಿರುವುದರಿಂದ ಆ ವರ್ಷದಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.