ಮಾಂಜರಿ 09: ಭೌತಿಕ ಸಿರಿ ಸಂಪತ್ತಿನಿಂದ ಮನುಷ್ಯನಿಗೆ ಶಾಂತಿ ಸಿಗದು. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳಲು ಸಾಧ್ಯವಿದೆ. ಶಾಂತಿ, ಸುಖದ ಬದುಕಿಗೆ ಅಧ್ಯಾತ್ಮವೊಂದೇ ಆಶಾಕಿರಣವಾಗಿದೆ ಅದರ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮನುಷ್ಯ ತಮ್ಮ ಆರೋಗ್ಯ ಕಡೆ ಹೆಚ್ಚಿನ ಗಮನವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಸಬೇಕೆಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಹೇಳಿದರು.
ಅವರು ಶುಕ್ರವಾರರಂದು ಸಮೀಪದ ಮೊಳವಾಡ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ನೂತನ ಮಂದಿರ ಕಟ್ಟಡ ವಾಸ್ತು ಪೂಜೆ ಮೂರ್ತಿ ಪ್ರಾಣ ಪ್ರತಿಷ್ಠೆ ಹಾಗೂ ಕಳಸಾರೋಹನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟಕರಾಗಿ ಡಾ ಪ್ರಭಾಕರ್ ಕೋರೆ ಮಾತನಾಡುತ್ತಿದ್ದರು.
ಈ ಸಮಾರಂಭದ ದಿವ್ಯ ಸಾನಿಧ್ಯ ಜ್ಞಾನ ಯೋಗಶ್ರಮ ಬಿಜಾಪುರದ ಅಧ್ಯಕ್ಷರಾದ ಬಸವಲಿಂಗ ಮಹಾ ಸ್ವಾಮೀಜಿಗಳು ವಹಿಸಿದ್ದರು ಪಾವನ ಸಾನಿಧ್ಯ ಕವಲಗುಡ್ಡ ಸಿದ್ದಾಶ್ರಮದ ಪರಮಪೂಜ್ಯ ಸಿದ್ಧಯೋಗ ಅಮರೇಶ್ವರ ಮಹಾರಾಜರು ಮತ್ತು ನೇತೃತ್ವವನ್ನು ಶಿವಗೊಂಡೇಶ್ವರ ಆಶ್ರಮ ಹನಗಂಡಿಯ ಸಿದ್ದೇಶ್ವರ ಸ್ವಾಮೀಜಿಗಳು ಪರಮಪೂಜ್ಯ ಚಿದಾನಂದ ಸ್ವಾಮೀಜಿಗಳು ಮಹಾರಾಜರು ಇಂಗಳಿಯ ಜ್ಞಾನ ದೇವ ಮಹಾರಾಜರು ಕಾಗವಾಡ ಮಾಜಿ ಶಾಸಕ ಮೋಹನ್ ಶಹಾ ಚಿದಾನಂದ ಬಸ ಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ನಿರ್ದೇಶಕರಾದ ಅನ್ನ ಸಾಹೇಬ್ ಪಾಟೀಲ್ ಹಾಗೂ ವೇದಾಚಾರ್ಯ ಗೋವಿಂದ ಜೋಶಿ ಹಾಜರಿದ್ದರು
ಈ ವೇಳೆ ಸಿದ್ದ ಯೋಗ ಅಮರೇಶ್ವರ ಸ್ವಾಮೀಜಿ ಮಾತನಾಡಿ ಮಾನವ ಜೀವನಕ್ಕೆ ದೇವರು ನೀಡಿದ ಜನ್ಮ ಸಾರ್ಥಕವಾಗಬೇಕಾದರೆ ಧನ, ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ, ಶಾಂತಿಗಳು ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ, ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಡೆಯುವ ದಾರಿಯಲ್ಲಿ ಐನೂರು ರುಪಾಯಿ ನೋಟು ಬಿದ್ದಿದೆ. ಅದು ನನ್ನದು. ನಿನ್ನದು ಎನ್ನದೇ ಸುಮ್ಮನೇ ನಡೆದರೇ ನಾವು ಸುರಕ್ಷಿತರು. ಹಾಗೆಯೇ ಸಂಸಾರದಲ್ಲಿ ಮನೆ, ಮಠ, ಧನ ಕನಕಾದಿಮೊದಲಾದವು ನನ್ನದು ತನ್ನದು ಎನ್ನದೇ ಭಗವಂತ ಕರುಣಿಸಿದ ಕೊಡುಗೆ ಎಂದು ನಡೆದರೆ ಸುಖ ಶಾಂತಿ ಬದುಕಿಗೆ ಕಾರಣವಾಗುತ್ತದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ ವಿಜಾಪುರ ಜ್ಞಾನ ಯೋಗ ಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮಿಜಿಗಳ ಮಾತನಾಡಿ ಭಗವಂತ ನೀಡಿದ ಸಂಪತ್ತು ಅಮೂಲ್ಯ, ನೆಲ, ಜಲ, ಬೆಂಕಿ ಗಾಳಿ ಬಯಲು ಕೊಟ್ಟ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ. ಆದ್ದರಿಂದ ಮಾನವ ಜನುಮಕ್ಕಾಗಿ ಆಧ್ಯಾತ್ಮಿಯ ಮುಖ್ಯ ಕಾರಣವಾಗಿದೆ ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯ ದಿನಾಲೂ 2 ಗಂಟೆಗೆ ಕೂಡ ದೇವರ ಧ್ಯಾನ ಮತ್ತು ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು
ಈ ವೇಳೆ ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳು ಸಿದ್ದೇಶ್ವರ ಮಹಾರಾಜರು ಮಾಜಿ ಶಾಸಕ ಮೋಹನ್ ಶಾಹಾ ಚಿದಾನಂದ ಮಹಾ ಸ್ವಾಮೀಜಿಗಳು ಜ್ಞಾನದೇವ ಮಹಾರಾಜರು ಹಾಗೂ ಇನ್ನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಇದೆ ವೇಳೆ ಮಂದಿರ ನಿರ್ಮಾಣಕ್ಕಾಗಿ ಎಲ್ಲ ಸಹಕಾರ ನೀಡಿದ ಅಭಿಯಂತರದ ಎಎಸ್ ಪಾಟೀಲ್ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮಕ್ಕೆ ಊರಿನ ಎಲ್ಲ ನಾಗರಿಕರು ಹಿರಿಯರು ತಾಯಂದಿರು ಮತ್ತು ಮಕ್ಕಳು ಮತ್ತು ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು ಕಾರ್ಯಕ್ರಮದ ನಿರೂಪಣೆ ಸ್ವಾಗತ ಹಾಗೂ ವಂದನಾರೆ್ಣ ಶಿಕ್ಷಕ ಶುಭಾಶ್ ಶೇವಾಳೆ ಮಾಡಿದರು.