ಲೋಕದರ್ಶನ ವರದಿ
ಹುಬ್ಬಳ್ಳಿ21 : ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನತಾ ಪರಿವಾರದ ಕಾಲದಿಂದ ಇಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವರೆಗಿನ ಜೆಡಿಎಸ್ ಸಭೆ, ಸಮಾರಂಭಗಳಿಗೆ ಹಾಗೂ ಹೋರಾಟಗಳಿಗೆ ಬೆಂಗಳೂರಿಗೆ ಬಂದಾಗ ಎಲ್ಲ ಹೋರಾಟಗಳ ಉತ್ತರ ಕನರ್ಾಟಕದ ಲಕ್ಷಾಂತರ ಹೋರಾಟಗಾರರಿಗೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶ್ರೀಮಠದಲ್ಲಿ ಸ್ನಾನ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಕಂಬನಿ ಮಿಡಿದಿದ್ದಾರೆ.
ನಾನು ಯುವ ಜನತಾ ದಳದ ಕಾಲದಿಂದ ಹಿಡಿದು ಈವರೆಗೆ ಪಕ್ಷ ಸಂಘಟನೆಯಿಂದ ಹಿಡಿದು ಇತ್ತೀಚಿನ ವರೆಗೆ ಬೆಂಗಳೂರಿನಲ್ಲಿ ನಡೆದ ನೂರಾರು ಹೋರಾಟ, ಸಭೆ, ಸಮಾರಂಭಗಳಿಗೆ ನಮ್ಮ ನವಲಗುಂದ ವಿಧಾನ ಸಭಾ ಕ್ಷೇತ್ರದ ಜನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ತುಮಕೂರಿನಲ್ಲಿ ಇಳಿದು ಸ್ನಾನ ಮಾಡಿ ಪ್ರಸಾದ ಸ್ವೀಕರಿಸಿ, ಶ್ರೀಗಳ ಆಶರ್ೀವಾದ ಪಡೆದು ಬೆಂಗಳೂರಿಗೆ ತೆರಳುತ್ತಿದ್ದೇವು ಎಂದು ಸ್ಮರಿಸಿದ್ದಾರೆ.
ಹಲವಾರು ಬಾರಿ ಶ್ರೀಗಳ ದರ್ಶನ ಮಾಡಿದ್ದೇನೆ. ಹತ್ತು ಜನರಿಂದ ಹಿಡಿದು ಲಕ್ಷಾಂತರ ವರೆಗೆ ನಮ್ಮ ಜನರಿಗೆ ಊಟ, ವಸತಿ, ಸ್ನಾನಕ್ಕೆ ವ್ಯವಸ್ಥೆ ಮಾಡಿ ಆಗಿನ ಕಾಲದಿಂದಲೂ ಉತ್ತರ ಕನರ್ಾಟಕದ ಜನತೆಯ ಹೋರಾಟದ ಹೆಬ್ಬಾಗಿಲಾಗಿದ್ದರು. ಹೋರಾಟ ಮುಗಿಸಿಕೊಂಡು ಬರುವಾಗಲೂ ಕೂಡ ಶ್ರೀಮಠಕ್ಕೆ ತೆರಳಿ, ಪ್ರಸಾದ ಸ್ವೀಕರಿಸಿ ಬಂದಿದ್ದು ಇದೆ ಎಂದು ಮೆಲಕು ಹಾಕಿದ್ದಾರೆ.
ತೀರಾ ಇತ್ತೀಚೆಗೆ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ನವಲಗುಂದದಿಂದ 80 ಬಸ್ ಜನ ರನ್ನು ಕರೆದುಕೊಂಡು ಹೋದಾಗ ನಮ್ಮ ಕ್ಷೇತ್ರದ ಜನರು ಅಲ್ಲಿಯೇ ಸ್ನಾನ ಮಾಡಿ ಪ್ರಸಾದ ಸ್ವೀಕರಿಸಿ ಹೋಗಿದ್ದೆವು. ಹೆಣ್ಣು ಮಕ್ಕಳಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರು.
ಮಹದಾಯಿ, ಕಳಸಾ-ಬಂಡೂರಿ ಹೋರಾಟದ ಸಂದರ್ಭದಲ್ಲೂ ಶ್ರೀಗಳ ಆಶರ್ೀವಾದ ಪಡೆದು ನಮ್ಮ ಉತ್ತರ ಕನರ್ಾಟಕ ಭಾಗದ ಹೋರಾಟಗಾರರು ಮಠದಲ್ಲಿ ಪ್ರಸಾದ ಸ್ವೀಕರಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಿ ಬಂದಿದ್ದಾರೆ. ಶ್ರೀಮಠ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಯಾವುದೇ ಬೇಧ ಭಾವವಿಲ್ಲದೆ ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅದರಲ್ಲೂ ವಿಶೇಷವಾಗಿ ಹೋರಾಟಗಾರರಿಗೆ ಪಕ್ಷಬೇಧ ಮರೆತು ಪ್ರಸಾದ ನೀಡಿದ ಹಿರಿಮೆ ಹೊಂದಿದೆ. ಅನೇಕ ಹೋರಾಟಗಾರರು ಶ್ರೀಮಠಕ್ಕೆ ಹೋಗದೆ ಬೆಂಗಳೂರಿನಿಂದ ಮರಳುತ್ತಿರಲಿಲ್ಲ.
ಹೋಗುವಾಗ ಆಗದಿದ್ದರೆ ಬರುವಾಗಲಾದರೂ ಹೋಗಿ ಬರುವ ಸಂಪ್ರದಾಯವಾಗಿತ್ತು. ಅಂತಹ ಒಂದು ಒಡನಾಟ, ಬಾಂಧವ್ಯವನ್ನು ನಮ್ಮ ಭಾಗದ ಜನತೆ, ಹೋರಾಟಗಾರರು ಹೊಂದಿದ್ದರು. ಅಂತಹ ಶ್ರೀಗಳು ನಮ್ಮಗೆಲ್ಲಾ ಚೈತನ್ಯದ ಚಿಲುಮೆಯಾಗಿದ್ದರು. ಅವರ ಜೊತೆಗಿನ ಅನೇಕ ಕ್ಷಣಗಳು ಇಂದಿಗೂ ನಮ್ಮಲ್ಲಿ ಹಚ್ಚಹಸಿರಾಗಿವೆ.
ಅವರ ಅದಮ್ಯ ಚೇತನ ನಮ್ಮೊಂದಿಗೆ ಸದಾ ಕಾಲ ಇರಲಿದೆ. ಅವರ ಅಗಲಿಕೆ ಕರುನಾಡಿಗೆ ದೊಡ್ಡ ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಕಂಬನಿ ಮಿಡಿದಿದ್ದಾರೆ.