ಲೋಕದರ್ಶನ ವರದಿ
ಸಿಂದಗಿ 26: ಪಟ್ಟಣದ ಇಂಡಸ್ಟ್ರಿಯಲ್ ಹತ್ತಿರದಲ್ಲಿರುವ ಆಶ್ರಯ ಮನೆಗಳಿಗೆ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಿದೆ ಶಿಘ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ನಿವಾಸಿಗಳು ಮಂಗಳವಾರ ಪಟ್ಟಣದ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ಇಂಡಸ್ಟ್ರಿಯಲ್ ಹತ್ತಿರದಲ್ಲಿರುವ ಆಶ್ರಯ ಮನೆಗಳಿಗೆ 250 ಕುಟುಂಬಗಳು ವಾಸವಾಗಿವೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕಳೆದ 3 ತಿಂಗಳಿನಿಂದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಳಕೆಗೂ ನೀರಿಲ್ಲ. ಹೀಗಾಗಿ ಇಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವೆ ನಮಗೆ ಕುಡಿಯಲು ವಿಷ ನೀಡಿ. ಒಂದು ವೇಳೆ ಕುಡಿಯಲು ನೀರು ನೀಡದ ಪಕ್ಷದಲ್ಲಿ ಪುರಸಭೆಗೆ ಬೀಗ ಜಡೆದು ಉಗ್ರವಾದ ಹೋರಾಟ ಮಾಡ ಬೇಕಾಗತ್ತದೆ ಎಂದು ಅಲ್ಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಆಶ್ರಯ ಕಾಲನಿಯ ನಿವಾಸಿಗಳಾದ ರೇಣುಕಾ ಎಮ್ಮಿ, ಶೋಭಾ ಗೌಡಗಾವ, ಲಕ್ಷ್ಮಿ ಚಾಂದಕವಠೆ, ಗೌರಬಾಯಿ ತಳವರ, ಸುಭದ್ರಾ ತಿಳಗೂಳ, ಮಂಗಳಾ ಎಮ್ಮಿ, ಜಯಶ್ರೀ ನಾವಿ, ದೌಲಬಿ ಮುಲ್ಲಾ, ರೇಣುಕಾ ಕೋರಿ, ಶಾಂತಾ ದೊಡಮನಿ, ಯಮುನಾಬಾಯಿ ಇಂಗಳಗಿ, ಸೀತಮ್ಮ ಸಾಸನೂರ, ಸುಗಲಾಬಾಯಿ ಇಂಗಳಗಿ, ಶೈಲಾ ಬಡಿಗೇರ, ಶ್ರೀದೇವಿ ತಿಳಗುಳ, ಲಕ್ಷ್ಮಿ ಕುಂಬಾರ, ಮಾಣಿಕಮ್ಮ ಬಡಿಗೇರ, ಜಗದೇವಿ ನಾವಿ, ಈರಮ್ಮ ತಳವಾರ, ಸುದರ್ಶನ ಜಿಂಗಾಣಿ, ಮಲ್ಲು ನಾಟಿಕಾರ, ಹರ್ಷವರ್ಧನ ಪೂಜಾರಿ, ಶ್ರೀರಾಮ ಎಮ್ಮಿ, ಸಂತೋಷ ನಾಟಿಕಾರ, ಸಂಗಪ್ಪ ಎಮ್ಮಿ ಸೇರಿದಂತೆ ಇತರರು ಪ್ರತಿಣಭಟನೆಯಲ್ಲಿ ಭಾಗವಹಿಸಿದ್ದರು.