ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸ್ನೇಹಲ ಅಂಗಡಿ ನೇಮಕ

Snehal Angadi appointed as Mahila Morcha president

ಮಹಾಲಿಂಗಪುರ 09: ಭಾರತೀಯ ಜನತಾ ಪಾರ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚ ನೂತನ ಅಧ್ಯಕ್ಷರಾಗಿ ಸ್ನೇಹಲ್ ಶಿವಾನಂದ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ.  

ತಾವು ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸಿ, ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ​‍್ಕವಾಗಿ ನಿಭಾಯಿಸಿ, ಪಕ್ಷಕ್ಕಾಗಿ ಅವಿರತವಾದ ಸೇವೆಯನ್ನು ಸಲ್ಲಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ, ಗ್ರಾಮೀಣ ಮಂಡಳ ತೇರದಾಳ ಮತ ಕ್ಷೇತ್ರದ ಅಧ್ಯಕ್ಷರಾದ ಸುರೇಶ ಅಕ್ಕಿವಾಟ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.