ಮಾದರಿ ತಂತ್ರಜ್ಞಾನ ಸಂಶೋಧನೆಯಲ್ಲಿ ಸಮಾಜ ವಿಜ್ಞಾನ

ಲೋಕದರ್ಶನ ವರದಿ

ಬೆಳಗಾವಿ, 22: ಕೆಎಲ್ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಒಂದು ದಿನದ ಕಾರ್ಯಗಾರವನ್ನು " ಮಾದರಿ ತಂತ್ರಜ್ಞಾನ ಸಂಶೋಧನೆಯಲ್ಲಿ ಸಮಾಜ ವಿಜ್ಞಾನ" ಎಂಬ ವಿಷಯದ ಬಗ್ಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಮೇಶ. ಆರ್. ಕುಲಕಣರ್ಿ ಕೌಶಾಲಿ ಸಂಸ್ಥೆ ಕೆ. ಯು, ಧಾರವಾಡದಿಂದ ಆಗಮಿಸಿದ್ದರು.

ಡಾ. ರಮೇಶ ಕುಲಕಣರ್ಿಯವರು ತಮ್ಮ ಭಾಷಣದಲ್ಲಿ ಮಾದರಿ ತಂತ್ರಜ್ಞಾನದ ವಿಧಾನಗಳ ಬಗ್ಗೆ ವಿವರಿಸಿ ಹೇಳಿದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಚ್. ಎಚ್. ವೀರಾಪೂರವರು ವಹಿಸಿದ್ದರು.  ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಶೋಧಕರಿಗೆ ಮಾದರಿ ತಂತ್ರಜ್ಞಾನ ಎನ್ನುವುದು ತುಂಬಾ ಕಠಿಣವಾದ ಕಾರ್ಯವೆಂದು ಹೇಳಿದರು.  ಹಾಗೂ ಸಂಶೋಧನೆಯ ಫಲಿತಾಂಶವು ಅದರ ಗಾತ್ರದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ. ಎಸ್. ಜಿ. ಕುಲಕಣರ್ಿ ಹಾಗೂ ಡಾ. ಮಂಗಲಾ ನಾಯಕರವರನ್ನು ಸನ್ಮಾನಿಸಲಾಯಿತು. ಡಾ. ಮಂಗಲಾ ನಾಯಕರವರು ಸಂಶೋಧನಾ ಕೇಂದ್ರವಾದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಿಂದ  ವಾಣಿಜ್ಯ ವಿಭಾಗದಲ್ಲಿ ಡಾ. ಎಸ್. ಜಿ. ಕುಲಕಣರ್ಿಯವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿ ಪಿ. ಎಚ್. ಡಿ. ಪದವಿಯನ್ನು ಪಡೆದಿದ್ದಾರೆ. 

ಈ ಕಾರ್ಯಕ್ರಮವನ್ನು ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ. ದತ್ತಾ ಕಾಮಕರವರು ಸಂಘಟಿಸಿದ್ದರು.

ಈ ಕಾರ್ಯಕ್ರಮಕ್ಕೆ ಪ್ರೋ. ಗ್ಯಾಮನಾಯಿಕ ಎಚ್. , ಪ್ರೋ. ಸರೀತಾ ಪಾಟೀಲ ಹಾಗೂ ಹಲವಾರು ಸಂಶೋಧನಾ ವಿದ್ಯಾಥರ್ಿಗಳು ಮತ್ತು ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.  ಪ್ರೋ. ಪೂಜಾ ಶಿರಸಂಗಿ ಹಾಗೂ ಪ್ರೋ. ಪ್ರೀಯಾ ಜಮುನಾನಿ ಕಾರ್ಯಕ್ರಮ ನಿರೂಪಿಸಿದರು.  ಹಾಗೂ ಪ್ರೋ. ನಮೀತಾ ಶೆಟಿಯವರು ವಂದಿಸಿದರು.