ಬಳ್ಳಾರಿಯಲ್ಲಿ ಶೀಘ್ರದಲ್ಲೇ ಕ್ಷಿಪ್ರ ಕೊರೊನಾ ಸೋಂಕು ಪರೀಕ್ಷಾ ಯಂತ್ರ

ಬಳ್ಳಾರಿ, ಏ 9,ಕೊರೊನಾ ವೈರಾಣು ಸೋಂಕು ಪರೀಕ್ಷಿಸುವ ಕ್ಷಿಪ್ರ ಪರೀಕ್ಷಾ ಯಂತ್ರಗಳು ಏಪ್ರಿಲ್ 12 ರಂದು ಬಳ್ಳಾರಿ ಜಿಲ್ಲೆಗೆ ಬರಲಿದ್ದು ಅವುಗಳ ಬಳಕೆ ಬಗೆಗೆ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.ಈ ಯಂತ್ರಗಳನ್ನು ಜಿಲ್ಲಾ ವಿಪತ್ತು ಪರಿಹಾರ ನಿಧಿ ಮೂಲಕ ಈ ಯಂತ್ರಗಳನ್ನು ಖರೀದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕ್ವಾರಂಟೈನ್ ನಲ್ಲಿರುವ 55 ವರ್ಷಕ್ಕಿಂತ ಮೇಲ್ಪಟ್ಟವರು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರ ಮಾಹಿತಿ ಪಡೆದು ವಿಶೇಷ ಚಿಕಿತ್ಸೆ ನೀಡುವಂತೆ ಅವರು ಸೂಚಿಸಿದ್ದಾರೆ.ದಾನಿಗಳ ನೆರವಿನಿಂದ ಪಡೆದ ಚಾದರ, ಸೋಪು, ಟೂತ್ ಪೇಸ್ಟ್ ಹೀಗೆ ಅಗತ್ಯವಸ್ತುಗಳುಳ್ಳ ಕಂಫರ್ಟ್ ಕಿಟ್ ಅನ್ನು ಕ್ವಾರಂಟೈನ್ ನಲ್ಲಿರುವವರಿಗೆ ಮತ್ತು ಐಸೊಲೇಷನ್ ವಾರ್ಡ್ ಗಳಲ್ಲಿರುವವರಿಗೆ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಕೆ.ನಿತೀಶ್ ತಿಳಿಸಿದ್ದಾರೆ.