ನವದೆಹಲಿ 2: ಅಪೌಷ್ಟಿಕತೆಯ ವಿರುದ್ಧ, ವಿಶೇಷವಾಗಿ, ನವಜಾತ ಶಿಶುಗಳ ಅಪೌಷ್ಟಿಕತೆಯ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಪಕ್ಷಾತೀತವಾಗಿ ಎಲ್ಲ ಸಂಸದರು ಕೈಜೋಡಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮನವಿ ಮಾಡಿದ್ದಾರೆ.
ಅವರು ಶೂನ್ಯವೇಳೆಯಲ್ಲಿ ಈ ಹೇಳಿಕೆ ನೀಡಿ , ಜನ ಭಾಗೀದಾರಿ ಕಾರ್ಯಕ್ರಮದಡಿ ಸದಸ್ಯರು ಕ್ರಮ ಕೈಗೊಂಡು ಅಭಿಯಾನದಲ್ಲಿ ಜೊತೆಯಾಗಬೇಕು ಎಂದರು. ಅಭಿಯಾನದಲ್ಲಿ ಸಂಸದರು ಭಾಗಿಯಾಗುವುದರಿಂದ ಆಂದೋಲನ ಯಶಸ್ವಿಯಾಗಿ ಇದರಿಂದ ಅಪೌಷ್ಟಿಕತೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ, ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಪೌಷ್ಠಿಕಾಂಶ ಸವಾಲು ಕುರಿತ ಬಗ್ಗೆ ಸ್ಪೀಕರ್ ಕಾಳಜಿಯನ್ನು ಶ್ಲಾಘಿಸಿದರು. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುತ್ತಿದೆ ಆದ್ದರಿಂದ ವಾರದಲ್ಲಿ ತಾಯಂದಿರು ಪೌಷ್ಠಿಕಾಂಶ ಮತ್ತು ಆರೋಗ್ಯದ ಬಗ್ಗೆ ಮಾತನಾಡುವುದು ಸೂಕ್ತವಾಗಿದೆ ಎಂದರು "ಮಕ್ಕಳ ಸ್ತನ್ಯಪಾನವನ್ನು ಉತ್ತೇಜಿಸಲು ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯು ಕೈಗೊಂಡ ಅಭಿಯಾನ ಪ್ರೋತ್ಸಾಹ ಸಹಕರಿಸಬೇಕು ಎಂದು ಸದದ್ಯರಿಗೆ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರವೇ ಆರೋಗ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಕಾಳಜಿ ವಹಿಸಿದ್ದಾರೆ ಎನ್ನುವುದು ಸರಿಯಲ್ಲ ಅವರು ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಯಾಗಿದ್ದಲೂ ಅವರು ಇದೆ ರೀತಿ ಕಾಳಜಿ ವಹಿಸಿದ್ದರು ಎಂದೂ ಸಚಿವೆ ಇರಾನಿ ಹೇಳಿದರು.