ಬೆಳಗಾವಿ 07: ಮಾರ್ಚ್ 7, 2025 ರಂದು, ಮುಂಬರುವ ಮೇಯರ್ ಮತ್ತು ಉಪಮೇಯರ್ ಚುನಾವಣೆಗಳಿಗಾಗಿ ಚವಟ್ ಗಲ್ಲಿಯಲ್ಲಿರುವ ಮಾಜಿ ಶಾಸಕರ ಕಚೇರಿಯಲ್ಲಿ ಬಿಜೆಪಿ ಬೆಳಗಾವಿ ಉತ್ತರದ ಎಲ್ಲಾ ಕಾರ್ಪೊರೇಟರ್ಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.
ಈ ನಿಟ್ಟಿನಲ್ಲಿ, ಎಲ್ಲಾ ಬಿಜೆಪಿ ಕಾರ್ಪೊರೇರೇಟರ್ಗಳು ಒಗ್ಗಟ್ಟಿನಿಂದ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ಅನಿಲ್ ಬೆನಕೆ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಕಾರ್ಪೊರೇರೇಟರ್ಗಳು ತಮ್ಮ ತಮ್ಮ ವಾರ್ಡ್ಗಳ ಬೂತ್ಗಳು, ಶಕ್ತಿ ಕೇಂದ್ರಗಳು ಮತ್ತು ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವಂತೆ ಸೂಚಿಸಲಾಯಿತು.
ಈ ಸಂಧರ್ಭದಲ್ಲಿ, ಮೇಯರ್ ಸವಿತಾ ಕಾಂಬ್ಳೆ, ಬಿಜೆಪಿ ಉತ್ತರ ಅಧ್ಯಕ್ಷ ವಿಜಯ್ ಕೊಡಗನೂರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಥೋರಟ್, ವಿನೋದ್ ಲಂಗೋಟಿ ಜೊತೆಗೆ ಬೆಳಗಾವಿ ಉತ್ತರದ ಎಲ್ಲಾಕಾರ್ಪೊರೇಟರ್ಗಳು ಉಪಸ್ಥಿತರಿದ್ದರು.