ಸಮಾಜದ ಪರಿವರ್ತನೆಗೆ ಆಧ್ಯಾತ್ಮ ಚಿಂತನೆ ಅವಶ್ಯ: ತಾಂವಶಿ

ಲೋಕದರ್ಶನ ವರದಿ

ಗೋಕಾಕ 11: ಸಮಾಜದಲ್ಲಿ ಶಾಂತಿ ನೆಲೆಸಲು ಜೀವನದ ಕಷ್ಟ-ನಷ್ಟಗಳನ್ನು ಸಹಿಸಿ ಬದುಕು ಸಾಗಿಸಲು, ಜನರ ಮನಸ್ಸು ಹಾಗೂ ಸಮಾಜದ ಪರಿವರ್ತನೆಗೆ ಆಧ್ಯಾತ್ಮ ಚಿಂತನೆಯ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ ತಾಂವಶಿ ಹೇಳಿದರು.

                ಅವರು ನಗರದ ಹೊರವಲಯದ ಪ್ರಭಾ ಶುಗರ್ಸ್ ಬಯಲು ಮಂಟಪದಲ್ಲಿ ಶ್ರೀದೇವಿ ಪಾರಾಯಣ ಹಾಗೂ ಒಂಬತ್ತು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

                ಧುಪದಾಳದ ಸಿದ್ಧಾರೂಢ ಚಿದಂಬರಾಶ್ರಮದ ಭೀಮಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿ ದೇವಿಯ ಗ್ರಂಥ ಪಾರಾಯಣ ಮಾಡುವ ಮೂಲಕ ಜನರು ದುಶ್ಚಟಗಳನ್ನು ತ್ಯಜಿಸಿ ಧರ್ಮಕಾರ್ಯಗಳಲ್ಲಿ ತೊಡಗಿಕೊಂಡು ನಾಡಿನ ಏಳ್ಗೆಗಾಗಿ ಶ್ರಮಿಸಬೇಕು. ಆಧ್ಯಾತ್ಮ ಚಿಂತನೆಯಿಂದ ಜೀವನ್ಮುಕ್ತಿ ಸಾಧ್ಯವಿದೆ. ಸುಗುಣ ಹಾಗೂ ಸಾಕಾರ ರೂಪದ ಶ್ರೀದೇವಿಯು ಸರ್ವರನ್ನು ಅನುಗ್ರಹಿಸಿ ಉದ್ಧರಿಸಲು ಯುಗಯುಗಳಲ್ಲಿ ಅವತರಿಸುತ್ತಾಳೆಂದು ಆಶೀರ್ವಚನ ನೀಡಿದರು.

ಕೊಟಬಾಗಿಯ ಸಿದ್ಧಾರೂಢ ಕಲ್ಮಠದ ಮಾತೋಶ್ರೀ ರೇಖಾದೇವಿ ನವರಾತ್ರಿಯ ಶ್ರೀದೇವಿ ಮಹಾತ್ಮೆಯ ಪ್ರವಚನಕ್ಕೆ ಚಾಲನೆ ನೀಡಿದರು. ಶಿಂಗಳಾಪೂರದ ಶಿವಾನಂದ ಸ್ವಾಮಿಗಳು ಹಾಗೂ ಹಿರಿಯರಾದ ಶಿವಾಜಿ ಜಾಧವ, ಸಿದ್ದಪ್ಪ ಚಳ್ಳಾಯಿ, ಸುರೇಶ ಹಿರೇಹೊಳಿ, ಮಾಲೋಜಿ ಸೂರ್ಯವಂಶಿ, ಗೋಪಾಲ ಜಾಧವ, ವಿಠ್ಠಲ ನಾಯಿಕ, ಶ್ರೀಕಾಂತ ಬಡಿಗೇರ, ಕೆಂಪಣ್ಣ ಕಡಕೋಳ ಉಪಸ್ಥಿತರಿದ್ದರು.

                ಕಲಾವಿದ ನಾರಾಯಣ ಜಾಧವ ಸ್ವಾಗತಿಸಿದರು. ಸಾಹಿತಿ, ಕಲಾವಿದ ಜಯಾನಂದ ಮಾದರ ನಿರೂಪಿಸಿದರು. ಮಲ್ಲಿಕಾಜರ್ುನ ಈಳಿಗೇರ ವಂದಿಸಿದರು