ವರದಿ ಎಂ.ಬಿ.ಘಸ್ತಿ
ಕನರ್ಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗ್ರಾಮೀಣ ಮತ್ತು ಬಡ ವಿದ್ಯಾಥರ್ಿಗಳಿಗೆ ಉನ್ನತ ಮತ್ತು ವೃತ್ತಿಪರ ಶಿಕ್ಷಣ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಶ್ರೀ ದುರದುಂಡೀಶ್ವರನ ಹೆಸರಿನಲ್ಲಿ ಶ್ರೀ ಆದ್ಯ ನಿಜಲಿಂಗೇಶ್ವರ ಮಹಾಸ್ವಾಮಿಗಳ ಆಶೀವರ್ಾದದೊಂದಿಗೆ ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆಯು 1991 ರಲ್ಲಿ ಕನರ್ಾಟಕ ಸಕರ್ಾರದ ಮಾಜಿ ನೀರಾವರಿ ಸಚಿವರಾದ ಮಲ್ಹಾರಿಗೌಡ ಎಸ್ ಪಾಟೀಲ್ಇವರ ಆದ್ಯಕ್ಷತೆ ಹಾಗೂ ಮುಂದಾಳತ್ವದಲ್ಲಿ ಸ್ಥಾಪಿತಗೊಂಡಿತು.
ಮೊದಲು 1991-12 ರಲ್ಲಿ ಎ.ವಿ.ಮುರಗುಡೆ ಬಾಲಮಂದಿರ ಮತ್ತು ಪಿ.ಕೆ.ಕುರಬೇಟಕನ್ನಡ ಪ್ರಾಥಮಿಕ ಶಾಲೆಯನ್ನು ಸಂಕೇಶ್ವರ ನಗರದ ಮಧ್ಯಭಾಗದಲ್ಲಿ ಪ್ರಾರಂಭಿಸಲಾಯಿತು. ಅದೇ ವರ್ಷ ಈ ಭಾಗದಲ್ಲಿ ವೃತ್ತಿಪರ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ಅನಂತ ವಿದ್ಯಾನಗರ ಇಲ್ಲಿ ಫಾರ್ಮಸಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಯಿತು ಮುಂದೆ ಇದಕ್ಕೆ ಸಂಜಯ ಪಾಟೀಲ ಫಾರ್ಮಸಿ ಕಾಲೇಜುಎಂದು ನಾಮಕರಣ ಮಾಡಲಾಯಿತು. ನಂತರ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣವನ್ನು ನೀಡುವ ಸಲುವಾಗಿ ಅನಂತ ವಿದ್ಯಾನಗರದಲ್ಲಿ ಸುಮಾರು 6 ಎಕರೆ 26 ಗುಂಟೆಯಷ್ಟು ನಿವೇಶನವನ್ನು ಡಾ.ಅನಂತ ಭಿಡೆ ದಂಪತಿಗಳು ಶಿಕ್ಷಣ ಸಂಸ್ಥೆಗೆ ದಾನವಾಗಿ ನೀಡಿ ಸಂಸ್ಥೆ ಬೆಳೆಯಲು ಸಹಾಯ ಮಾಡಿದರು.ಇದರಿಂದಾಗಿ 1993-94 ರಲ್ಲಿ ಎಸ್.ಬಿ.ಶಿರಕೋಳಿ ಹೊಮಿಯೋಪಥಿಕ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡಿತು. ಈ ರೀತಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ನಿದೇರ್ಶಕರ ಶೈಕ್ಷಣಿಕ ಕಾಳಜಿ ಮತ್ತು ಪ್ರೇರಣೆಗಳಿಂದಾಗಿ 1997-97 ರಲ್ಲಿ ಎ.ಬಿ.ಪರ್ವತರಾವಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು 2003-04 ರಲ್ಲಿ ಮಹಾತ್ಮಾ ಗಾಂಧಿಜೀ ಕಾನೂನು ಮಹಾವಿದ್ಯಾಲಯ ಹಾಗೂ 2005-06 ನೇ ಸಾಲಿನಲ್ಲಿ ಭಾರತರತ್ನಡಾ. ಎಸ್. ರಾಧಾಕೃಷ್ಣನ ಬಿ.ಇಡಿ.ಕಾಲೇಜುಗಳು ಸ್ಥಾಪನೆಗೊಂಡು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳ ಶೈಕ್ಷಣಿಕರಂಗದಲ್ಲಿಕ್ರಾಂತಿಯನ್ನುಂಟು ಮಾಡಿತು. ಈ ಎಲ್ಲ ಶಿಕ್ಷಣ ಸಂಸ್ಥೆಗಳು ಕೇಂದ್ರ ಮತ್ತುರಾಜ್ಯ ಸಕರ್ಾರಗಳ ಮಾನ್ಯತೆ ಪಡೆಯುವುದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್ಸಿಟಿಇ, ಇಐಸಿಟಿಇ, ಪಿಸಿಐ, ಸಿಸಿಹೆಚ್, ಡಿಎಸ್ಇಆರ್ಟಿ, ಮತ್ತು ಬಿಸಿಆಯ್ ಆಯುಷ ಮೊದಲಾದ ಸ್ವಯತ ಸಂಸ್ಥೆಗಳ ಅನುಮೋದನೆಯನ್ನು ಪಡೆದುಕೊಂಡು ಕನರ್ಾಟಕ ವಿಶ್ವ ವಿದ್ಯಾಲಯ, ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಕನಾಟಕ ರಾಜ್ಯ ಕಾನೂನು ವಿಶ್ವಿವಿದ್ಯಾಲಯ ಮತ್ತು ಬೆಳಗಾವಿಯ ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯ ಮೊದಲಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಂಯೋಜನೆಗೆ ಒಳಪಟ್ಟಿವೆ. ಕನರ್ಾಟಕರಾಜ್ಯ ಮತ್ತು ಮಹಾರಾಷ್ಟ ರಾಜ್ಯಗಳ ಸಹಸ್ರಾರು ವಿದ್ಯಾಥರ್ಿಗಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಶಾಲವಾದ ಹಾಗೂ ಪ್ರಶಾಂತವಾದ ವಾತಾವರಣದಲ್ಲಿರುವ ಈ ಸಂಸ್ಥೆಗಳು ಆಕರ್ಷಕವಾಗಿವೆ. ಭವ್ಯವಾದ ಕಟ್ಟಡ, ಪ್ರಯೋಗಾಲಯ, ಗಣಕಯಂತ್ರ ಕೊಠಡಿಗಳು, ಸಭಾಮಂಟಪ, ನುರಿತ ಸಿಬ್ಬಂದಿ ವರ್ಗಗಳು ಶಿಕ್ಷಣ ಸಂಸ್ಥೆಯನ್ನು ಕೀತರ್ಿಯನ್ನು ಹೆಚ್ಚಿಸಿವೆ. ಸಂಸ್ಥೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾಥರ್ಿಗಳು ವಿವಿಧ ರಂಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಸಂಸ್ಥೆಯ ಕೀತರ್ಿ ಪತಾಕೆಯನ್ನು ಹಾರಿಸುತ್ತಿದ್ದಾರೆ. ಹೊಮಿಯೋಪಥಿಕ ವಿಹಾವಿದ್ಯಾಲಯದ ವಿದ್ಯಾಥರ್ಿಯಾದ ಡಾ. ತುಕಾರಾಮ ಪಾಟೀಲ ಇವರು ರಾಜೀವಗಾಂಧಿ ವಿಶ್ವವಿದ್ಯಾಲಯ ಬೆಂಗಳೂರು ಮೆಟಿರಿಕಾ ಮೆಡಿಕಾ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಕಾನೂನು ಮಹಾವಿದ್ಯಾಲಯದ ವಿದ್ಯಾಥರ್ಿಯಾದ ಸಾಗರ ಪಾಟೀಲ ಈತನುಕನರ್ಾಟಕರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ 7ನೇ ರ್ಯಾಂಕ್ ಪಡೆದುಕೊಂಡಿರುತ್ತಾನೆ.
ಮಾಜಿ ನೀರಾವರಿ ಸಚಿವರಾಗಿರುವ ಮಲ್ಹಾರಿಗೌಡಾ ಎಸ್. ಪಾಟೀಲ ಇವರು ಸಂಸ್ಥಾಪಕ ಅಧ್ಯಕ್ಷರಾಗಿ ಈ ಸಂಸ್ಥೇಯ ಆಧಾರ ಸ್ತಂಭವಾಗಿಅವರ ಮಾರ್ಗದರ್ಶನದಲ್ಲಿ ಟಿ.ಬಿ.ಪಾಟೀಲ, ಡಾ.ಎಸ್.ಬಿ.ಮುರಗುಡೆ, ಪ್ರಕಾಶ ಜಿ ಕಣಗಲಿ, ಎಸ್.ಎಸ್.ಶಿರಕೋಳಿ. ಸುನೀಲ ಪರ್ವತರಾವ, ಕುನಾಲ ರಾಜೀವಗೌಡಾ, ಎಂ.ಎಂ.ಸಾರವಾಡಿ, ಎಸ್.ಆಯ್.ಹೆದ್ದುರಶೆಟ್ಟಿ, ಅಪ್ಪುತಂಬದ, ಎಲ್.ಎಂ.ಪಾಟೀಲ, ಡಾ.ಎ.ಕೆ.ಮರಿಗುದ್ದಿ, ಎಂ.ಎಸ್.ಭಾವಿಮನಿ, ಸಿ.ಎನ್.ನಡಗದಲ್ಲಿ. ಎಸ್.ಎಸ್.ಕಣಗಲಿ, ಶ್ರೀಮತಿ ಎಸ್.ಎಸ್.ಪಾಟೀಲ ಹಾಗೂ ಶ್ರೀಮತಿ ಎಸ್.ಆರ್.ಪಾಟೀಲ ಮುಂತಾದಅನುಭವಿ ಮತ್ತು ಕಾರ್ಯಶೀಲ ಆಡಳಿತ ಮಂಡಳಿಯವರ ಸಂಚಾಲಕರ ಸಹಕಾರದಲ್ಲಿ ಸಂಸ್ಥೇಯು ಅಭೂತಪೂರ್ವವಾಗಿ ಬೆಳೆದು ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯು ನಿಡಸೋಸಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ಸಂಕೇಶ್ವರದ ಶ್ರೀ ಶಂಕರಾಚಾರ್ಯ ಮಠದ ಶ್ರೀ ಸಚ್ಚಿದಾನಂದಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು ಇವರ ಆಶೀವರ್ಾದದಲ್ಲಿ ಸಂಸ್ಥೆಯು ಮುನ್ನಡೆ ಸಾಗುತ್ತಿದೆ.
ಸಂಸ್ಥೆಯು ರವಿವಾರ ದಿನಾಂಕ: 06-01-2019 ರಂದು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಲಿದ್ದು, ಈ ಸಮಾರಂಭದಲ್ಲಿ ನೂತನವಾಗಿ ನಿಮರ್ಾಣಗೊಂಡಿರುವ ಮಹಾತ್ಮಾಗಾಂಧೀಜಿ ಕಾನೂನು ಮಹಾವಿದ್ಯಾಲಯದ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ನಿಡಸೋಸಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ಸಂಕೇಶ್ವರದ ಶ್ರೀ ಶಂಕರಾಚಾರ್ಯ ಮಠದ ಶ್ರೀ ಸಚ್ಚಿದಾನಂದಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು, ಜಗದ್ಗುರುಡಾ. ಗುರುಸಿದ್ಧ ರಾಜಯೋಗಿ ಮಹಾಸ್ವಾಮಿಗಳು ಮೂರು ಸಾವಿರ ಮಠ ಹುಬ್ಬಳ್ಳಿ, ಶ್ರೀ ಷಟಸ್ಥಳ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಇವರ ದಿವ್ಯಸಾನಿಧ್ಯದಲ್ಲಿ ಹಾಗೂ ಕನರ್ಾಟಕ ಸಕರ್ಾರದ ಮಂತ್ರಿಗಳಾದ ಸತೀಶ ಲಕ್ಷ್ಮಣರಾವ ಜಾರಕಿಹೊಳಿ, ಹುಕ್ಕೇರಿ ಭಾಗದ ಶಾಸಕ ಉಮೇಶ ಕತ್ತಿ, ಮಾಜಿ ಮುಖ್ಯಮಂತ್ರಿ ಶ್ರೀ ಎಂ.ವೀರಪ್ಪ ಮೊಯ್ಲಿ, ವಿಧಾನ ಸಭೆಯ ಅಧ್ಯಕ ್ಷರಮೇಶಕುಮಾರ, ಸಚಿವರಾದ ಕೃಷ್ಣ ಬೈರೇಗೌಡ, ಆರ್.ವ್ಹಿ.ದೇಶಪಾಂಡೆ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪಿ.ಈಶ್ವರಭಟ್, ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಸಚಿವರಾದ ಶಿವಾನಂದ ಪಾಟೀಲ, ಮಜಿ ಸಚಿವೆ ಲೀಲಾದೇವಿ ಪ್ರಸಾದ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.