ರಾಣೆಬೆನ್ನೂರಲ್ಲಿ ಶ್ರೀರಾಮ ನವಮಿ, ಜಯಂತೋತ್ಸವ

Sri Rama Navami, Jayanthotsavam in Ranebennur

ರಾಣೆಬೆನ್ನೂರಲ್ಲಿ ಶ್ರೀರಾಮ ನವಮಿ, ಜಯಂತೋತ್ಸವ  

ರಾಣೇಬೆನ್ನೂರು 07:  ನಗರದ ಸ್ವಕುಳಸಾಳಿ ಸಮಾಜದ   ಜಿಹ್ವೇಶ್ವರ ಮಹಿಳಾ ಮಂಡಳಿಯವರು ಶುದ್ಧ ಚೈತ್ರ, ನವಮಿ ದಿನದಂದು ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಮ ನವಮಿ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಹಿಳಾ ಮಂಡಳಿಯಿಂದ ಆರಿಸಲಾಯಿತು.ತನ್ನ ಭವ್ಯತೆ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ರಾಮನವಮಿ ದಿನವನ್ನು ಭಜನೆ, ಮೆರವಣಿಗೆ ಮತ್ತು ಧಾರ್ಮಿಕ ಆಚರಣೆಗಳ ಮೂಲಕ ಭಕ್ತಿಯಿಂದಭಾರತದಾದ್ಯಂತ ಭಕ್ತರಿಂದ ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮ ವಾರ್ಷಿಕೋತ್ಸವವನ್ನುಆಚರಿಸಲಾಗುತ್ತಿದೆ. ಪ್ರತಿ ವರ್ಷ ನಾವು ನಮ್ಮ ಮಹಿಳಾ ಮಂಡಳಿವತಿಯಿಂದ ರಾಮ ನವಮಿ ಶ್ರೀರಾಮನ ಅನುಗ್ರಹಕ್ಕಾಗಿ ಆಚರಿಸಲಾಗುತ್ತದೆ. ರಾಮ ನವಮಿ ಧರ್ಮ ಮತ್ತು ನ್ಯಾಯದ ಸಂಕೇತವಾದ ಶ್ರೀರಾಮನ ಜನ್ಮ ದಿನವೆಂದು ಆಚರಿಸಲಾಗುತ್ತದೆ.  

ಇದೇ ಸಂದರ್ಭದಲ್ಲಿ ಶ್ರೀರಾಮನ "ಸತ್ಯ, ಪ್ರೀತಿ, ಕರುಣೆ ಮತ್ತು ಕರ್ತವ್ಯ" ಎಂಬ ಆದರ್ಶಗಳನ್ನು ನೆನಪಿಸಿಕೊಳ್ಳುವ ಮತ್ತು ನಾವೆಲ್ಲರೂ ಜೀವನದಲ್ಲಿ ಶ್ರೀರಾಮನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಾದ ಪ್ರತಿಜ್ಞೆ ಮಾಡಬೇಕಾದ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಎಲ್ಲರಿಗೂ ಶ್ರೀರಾಮನ ಅನುಗ್ರಹ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಭಕ್ತರಿಗಾಗಿ ಪಾನಕ ಮತ್ತು ಕೋಸಂಬರಿ ವಿತರಿಸಲಾಯಿತು.ವೇದಿಕೆಯಲ್ಲಿ ರಾಜೇಶ್ವರಿ ಏಕಬೋಟೆ,   ಸುನಂದಾ ಏಕಬೋಟೆ,  ಯಶೋದಾ ಪರಶುರಾಮ ಏಡಕೆ, ವಿಠ್ಠಲ ಏಡಕೆ ಸೇರಿದಂತೆ ಮತ್ತಿತರ ಮುಖಂಡರು ಸಮಾಜದ ಗಣ್ಯರು ಉಪಸ್ಥಿತರಿದ್ದರು.