ಶ್ರೀ ವಿದ್ಯಾನಿಧಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

Sri Vidyanidhi School Annual Friendship Conference

ಗುರ್ಲಾಪೂರ 24: ಮಕ್ಕಳು ಬಿಳಿ ಹಾಳಿ ಇದ್ದಂತೆ. ಅದನ್ನು ಗುರುಗಳು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಯಾವುದೇ ಹೆದರಿಕೆಯಿಲ್ಲದೆ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತಾರೆ ಎಂದರು. ಕಡಿಮೆ ಅವಧಿಯಲ್ಲಿ ಶಾಲೆ ಸಾಧಿಸಿದ ಸಾಧನೆೆ ಬಗ್ಗೆ ತಿಳಿಸುತ್ತಾ ಗುರುಮಾತೆಯರಲ್ಲಿ ತಾಳ್ಮೆ ಅತೀ ಮುಖ್ಯ ಎಂದು ಇಟ್ನಾಳದ ಶ್ರೀ ಸಿದ್ದೇಶ್ವರ ಶರಣರು ಹೇಳಿದರು. 

ಶ್ರೀ ವಿದ್ಯಾನಿಧಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ  ಸಾನಿಧ್ಯ ವಹಿಸಿದ ಶ್ರೀಗಳು ತಮ್ಮ ಕಾರ‌್ಯಮದಲ್ಲಿ ಆಶೀರ್ವಚನ ನೀಡಿದರು. 

 ಮುಖ್ಯ ಅಥಿತಿಗಳಾಗಿ ಆಗಮಸಿದಿ ನಿವೃತ್ತ್‌ ಶಿಕ್ಷಕರಾದ ಎ ಜಿ ಶರಣಾರ್ಥಿಯವರು ಶಿಕ್ಷಕರು ತಮ್ಮ ಮಕ್ಕಳಿಗೆ ನೀಡಿದ ಶಿಕ್ಷಣದ ಬಗ್ಗೆ ತಿಳಿದುಕೊಂಡು ಅವರು ಮನೆಯಲ್ಲಿ ಟಿ,ವಿ, ಹಾಗು ಮೂಬೈಲ್‌ನಿಂದ ಸ್ವಲ್ಪದೂರವಿದ್ದು ತಮ್ಮ ಮಕ್ಕಳಿಗೆ ಒಳ್ಳೆಯ ಜೀವನ ರೂಪಿಸುವಲ್ಲಿ ಮತ್ತು ಒಳ್ಳೆಯ ಸಂಸ್ಕಾರ ಕಲಿಸುವ ತಂದೆ ತಾಯಿ ಪಾತ್ರದ ಬಗ್ಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ಆಡಳಿಮಂಡಳಿಯವರು ಹಾಗೂ ಆನಂದ ಸುಳ್ಳನವರ ಮತ್ತು ಶಿಕ್ಷಕರು ಮತ್ತು ಗುರುಮಾತೆಯರು  ಸಾನಿಧ್ಯ ವಹಿಸಿದ ಇಟ್ನಾಳದ ಶ್ರೀ ಸಿದ್ದೇಶ್ವರ ಶರಣರನ್ನು ಮತ್ತು ಗ್ರಾಮದ ಪಿ ಕೆ ಪಿ ಎಸ್ ಅಧ್ಯಕ್ಷರಾದ ಎಸ್ ಜಿ ಹಂಚಿನಾಳ ಹಾಗೂ ಖಾನಟ್ಟಿಗ್ರಾಮ ಪಂಚಾಯಿತ ಅಧ್ಯಕ್ಷರಾದ ಬಸಲಿಂಗವ್ವಾ ಮುಗಳಖೋಡ ಮಹನೀಯರನ್ನು ಸತ್ಕರಿಸಲಾಯಿತು. 

ಸಾನಿಧ್ಯ ವಹಿಸಿದ ಇಟ್ನಾಳದ ಶ್ರೀ ಸಿದ್ದೇಶ್ವರ ಶರಣರು ಜನನಿ ಲಿಟಲ್ ನಿಂಜಾ ಲರ್ನಿಂಗ ಸೆಂಟರ ಮುಖ್ಯಸ್ಥರಾದ ಆನಂದು ಸುಳ್ಳನವರ ದಂಪತಿಗಳನ್ನು ಸನ್ಮಾನಿಸಿದರು. ಸ್ನೇಹ ಸಮ್ಮೇಳನದ ಆಧ್ಯಕ್ಷತೆಯನ್ನು ಶ್ರೀ ವಿಧ್ಯಾನಿದಿ ಶಾಲೆಯ ಅಧ್ಯಕ್ಷರಾದ ನಾಗೇಶ ನೇಮಗೌಡರ ವಹಿಸಿದ್ದರು. 

 ಮುಖ್ಯ ಅಥಿತಿಗಳಾಗಿ ಶಿವರುದ್ರಯ್ಯಾ ಹಿರೇಮಠ, ಶಿವಾನಂದ ಹಿರೇಮಠ, ನಿವ್ರತ್ತ್‌ ಶಿಕ್ಷಕರಾದ ಎ ಜಿ ಶರಣಾರ್ಥಿ, ಪಿ ಕೆ ಪಿ ಎಸ್ ಅಧ್ಯಕ್ಷರಾದ ಎಸ್ ಜಿ ಹಂಚಿನಾಳ ಹಾಗು ಖಾನಟ್ಟಿಗ್ರಾಮ ಪಂಚಾಯಿತ ಅಧ್ಯಕ್ಷರಾದ ಬಸಲಿಂಗವ್ವಾ ಮುಗಳಖೋಡ, ಸುರೇಶ ನೇಮಗೌಡರ, ಅನಿತಾ ಸುಳನವರ, ಪೂಜಾ ಮರಾಠೆದಾನೇಶ್ವರಿ ಸುಳ್ಳನವರ, ಸುಮಿತ್ರಾ ಅಂಬಿಗೇರ, ಶಿಕ್ಷಣ ಪ್ರೆಮಿಗಳು ಪಾಲಕರು ತಾಯಂದಿಯರು ಆಗಮಿಸಿದ್ದರು. 

ಕಾರ್ಯಕ್ರಮದ ಸ್ವಾಗತವನ್ನುವಿಷ್ಣು ದೂಡಮನಿ ನೇರವೇರಿಸಿದರು. ಗುರುಮಾತೆ ಸಂಗೀತಾ ಮುದೋಳ ನಿರುಪಿಸಿದರು. ಪವಿತ್ರಾ ಹಿರೇಮಠ ಇವರು ಶಾಲೆಯ ವಾರ್ಷಿಕ ವರದಿ ಮತ್ತು ಶಾಲೆಯಲ್ಲಿ ಮಕ್ಕಳು ಸಾಧಿಸಿದ ಸಾಧನೆೆ ಬಗ್ಗೆ ಹೇಳಿದರು. ಸುರೇಖಾ ಸಾಲಗುಡಿ ವಂದಿಸಿದರು. ನಂತರ ಮಕ್ಕಳಿಂದ ಮನರಂಜನೆಯನ್ನು ಶಾಲೆಯ ಎಲ್ಲ ಗುರುಮಾತೆಯರು ನಡೆಸಿದರು.