ಬೀದಿ ನಾಟಕ ಪ್ರದರ್ಶನ: ರಸ್ತೆ ಸುರಕ್ಷತೆಯ ಜಾಗೃತಿ

Street Drama Performance: Road Safety Awareness

ಬೀದಿ ನಾಟಕ ಪ್ರದರ್ಶನ: ರಸ್ತೆ ಸುರಕ್ಷತೆಯ ಜಾಗೃತಿ  

ಯಮಕನಮರಡಿ 30: ತಾಲೂಕಿನ ಹತ್ತರಗಿ ಟೋಲ್ ಮತ್ತು ನಿಪ್ಪಾಣಿ ಹತ್ತಿರದ ಕೊಗನ್ನೋಳಿ ಟೋಲ್  ಪ್ಲಾಜಾದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಓಊಋ ಘಣಜಡಿಟಿ ಕಡಿಠಜಛಿ ಠಿತಣ.ಐಣಜ.  ಹತ್ತರಗಿ ಟೋಲ್ ಪ್ಲಾಜಾ, ಕೋಗನ್ನೋಳಿ ಅಡಿಯಲ್ಲಿ ರಾಷ್ಟ್ರೀಯ  ಸುರಕ್ಷತಾ ಸಪ್ತಾಹ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಕಲ್ಯಾಣ ಸಂಸ್ಥೆಯವರು  ಸ್ಥಳೀಯ ಭಾಗಿದಾರರಾಗಿ  ಪಾಲ್ಗೊಂಡಿದ್ದರು.  ಈ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಓಊಋ ಯ ಉಪ ಪ್ರಧಾನ ವ್ಯವಸ್ಥಾಪಕರಾದ ಎಮ್ ರವೀಂದ್ರನ್ ಇವರು ರಸ್ತೆ ಸುರಕ್ಷತೆಯ ಬಗ್ಗೆ    ಪ್ರಾಸ್ತಾವಿಕವಾಗಿ ಮಾತನಾಡುತ್ತ  ಇದು ರಾಷ್ಟ್ರೀಯ ಸುರಕ್ಷತಾ ತಿಂಗಳಿನ  ಕಾರ್ಯಕ್ರಮವಾಗಿದ್ದು  ಬೀದಿ ನಾಟಕದ ಮೂಲಕ ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಹೆಚ್ಚು ತಿಳುವಳಿಕೆಯನ್ನು  ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.   ಹತ್ತರಗಿ ಟೋಲ್ ಪ್ಲಾಜಾದಲ್ಲಿ  ಸುರೇಖಾ ಪಾಟೀಲ ಅವರು ಎಲ್ಲ ಅತಿಥಿಗಳಿಗೆ ತಮ್ಮ ಭಾಷಣದ  ಮೂಲಕ ಸ್ವಾಗತವನ್ನು ಕೋರಿದರು. ಪೂರ್ವದಲ್ಲಿ ವಿಘ್ನೇಶ್ವರನ ಅಷ್ಟ ವಿಘ್ನ ಮಂತ್ರವನ್ನು ಪಠಿಸಿ ನಂತರ ತಮಟೆ ವಾದ್ಯವನ್ನು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶನವನ್ನು ಮಾಡಲಾಯಿತು. ಭರತ ಮರಾಠೆ  ರಂಗ ದರ್ಶನ ಕಲಾ ತಂಡವು ನಟನೆಯಲ್ಲಿ ನೆರೆದಿದ್ದ ಜನರ ಗಮನ ಸೆಳೆದರು.  “ನಮ್ಮ ಗಾಡಿ ನಮ್ಮ  ಸುರಕ್ಷತೆ ಮತ್ತು ನಿಮ್ಮ ಜೀವ ನಿಮ್ಮ ಕೈಯಲ್ಲಿದೆ ” ಎಂಬ ಘೋಷ ವಾಕ್ಯಗಳು ಮೊಳಗಿದವು. ಅನಂತರ ಕಾರ್ಯಕ್ರಮವನ್ನು ಕೊಗನ್ನೋಳಿ ಟೋಲನಲ್ಲಿ ಕೊಗನ್ನೋಳಿ ಪ್ಲಾಜಾದ ನರೇಂದ್ರ ಚೌದರಿಯವರ ಅಧ್ಯಕ್ಷತೆಯಲ್ಲಿ ಆರಂಭಿಸಲಾಯಿತು. ಕೊಗನ್ನೋಳಿ ಶಾಲಾ ಮಕ್ಕಳು ಭಾಗವಹಿಸಿದ್ದರು.  142 ಮಕ್ಕಳ ಚಿತ್ರಕಲೆಯಲ್ಲಿ ಭಾಗವಹಿಸಿದ್ದು ಇಲ್ಲೀಯೂ ಸಹ ರಸ್ತೆ ಸುರಕ್ಷತಾ ಬೀದಿ ನಾಟಕವನ್ನು ಭರತ ಮರಾಠೆ ರಂಗ ದರ್ಶನ  ಕಲಾ ತಂಡದವರು ಬಹಳ ರಮಣೀಯವಾಗಿ ನಟಿಸಿದರು. ನಂತರ ರಸ್ತೆ ಸುರಕ್ಷತೆಯ ಬಗ್ಗೆ  ಹಮ್ಮಿಕೊಂಡ ಚಿತ್ರ ಕಲಾ ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ  ವಿಜೇತರಾದವರಿಗೆ ಶೀಲ್ಡ್‌ ಹಾಗೂ  ಪ್ರಶಸ್ತಿಗಳನ್ನು ವಿತರಿಸಲಾಯಿತು. ಸುರಕ್ಷತೆಯ ಉಸ್ತುವಾರಿ ಇದರುಸ ಅಲಿ, ಮಾನವ ಸಂಪನ್ಮೂಲ ಅಧಿಕಾರಿ ಭೀಮಶೆಟ್ಟಿ ಪಾಟೀಲ ಹತ್ತರಗಿ ಟೋಲ ಪ್ಲಾಜಾ, ಬಿರ್ಜೆಶ ಟೋಲ್ ಪ್ಲಾಜಾ ಮ್ಯಾನೇಜರ್ ಹತ್ತರಗಿ, ಕೊಗನೊಳ್ಳೀ, ಕೊಗನ್ನೊಳಿಯ ಹೈಸ್ಕೂಲನ  ಮುಖ್ಯೋಪಾಧ್ಯಾಯ ಮಿ. ಸಿದ್ದಣ್ಣ ಅಲಗೂರೆ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರವೀಂದ್ರ ಪಾಟೀಲ, ಸುರೇಖಾ.ಡಿ.ಪಾಟೀಲ, ನರೇಂದ್ರ ಚೌಧರಿ, ಸಾರ್ವಜನಿಕರು, ಶಾಲಾ ಮಕ್ಕಳು, ಕಲಾವಿದರು, ಚಾಲಕರು, ಪಾದಚಾರಿಗಳು ಮಹಿಳಾ ಕಲ್ಯಾಣ ಸಂಸ್ಥೆಯ ಹಾಗೂ ಸಿಬ್ಬಂದಿಗಳು ಹೀಗೆ ಸುಮಾರು 150 ಕ್ಕಿಂತಲೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.