ವಿದ್ಯಾರ್ಥಿನಿ ಸಾವು: ನ್ಯಾಯಕ್ಕಾಗಿ ಎಸ್ಎಫ್ಐ ಪ್ರತಿಭಟನೆ

ಲೋಕದರ್ಶನವರದಿ

ರಾಣೇಬೆನ್ನೂರು:   ಇಲ್ಲಿನ ಈಶ್ವರ ನಗರದ ಹಳೆಯ ಅಂತರವಳ್ಳಿರಸ್ತೆಯ ಹೆಣ್ಣುಮಕ್ಕಳ ವಸತಿ ವಿದ್ಯಾಥರ್ಿ ನಿಲಯದಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ವಿದ್ಯಾಥರ್ಿನಿ ಕಾವ್ಯ ಬೆನ್ನೂರು ಇವಳ ಸಾವಿಗೆ ಸಂಬಂದಿಸಿದಂತೆ ಎಸ್ಎಫ್ಐ ಕಾರ್ಯಕರ್ತರು ತಹಶೀಲ್ದಾರ ಕೆಛೇರಿ ಎದುರುಗಡೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿದರು. 

    ಘಟನೆ ಮೇಲ್ನೋಟಕ್ಕೆ ಆಕಸ್ಮಿಕ ಆಯತಪ್ಪಿ ಬಿದ್ದು ಸಾವು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದೆ ಅನುಮಾನದ ಶಂಕೆ ವ್ಯಕ್ತವಾಗುತ್ತಲಿದೆ.  ಅದಕ್ಕಾಗಿ ಘಟನೆ ಕುರಿತಂತೆ ಕಾನೂನು ಕ್ರಮ ಕೈಗೊಂಡು ತನಿಖೆ ನಡೆಸಿ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಮತ್ತು ಕುಟುಂಬಸ್ತರಿಗೆ ಸಕರ್ಾರಿ ನೌಕರಿ ಒದಗಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು. 

     ಪ್ರತಿಭಟನೆ ಮುಂಚೂಣಿಯಲ್ಲಿ ಎಸ್ಎಫ್ಐ ತಾಲೂಕಾಧ್ಯಕ್ಷ ಬಸವರಾಜ ಭೋವಿ, ಮುಖಂಡರಾದ  ಜ್ಯೋತಿ ಪೋಲೀಸ್ಗೌಡ್ರ, ಕಾವ್ಯ ಎಂ., ವೈಎಸ್ಪೂಜಾ, ನಾಗರತ್ನಾ, ಶ್ರೀಕಾಂತ ಬಾಕರ್ಿ, ಎಂ.ಸಂಗಮೇಶ, ಶ್ರೀಧರ ಚಲವಾದಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.