ಲೋಕದರ್ಶನವರದಿ
ರಾಣೇಬೆನ್ನೂರು: ಮಾಕನೂರು ಗ್ರಾಮದಿಂದ ರಾಣೇಬೆನ್ನೂರಿಗೆ ಸಂಚರಿಸಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೇ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಸರಣಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾಥರ್ಿಗಳು ಮಾಕನೂರು ವೃತ್ತದ ಬಳಿ ಭಾರಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ಕುಮಾರಪಟ್ಟಣ-ಕೋಡಿಯಾಲ ಗ್ರಾಮದಲ್ಲಿ ಉಪ-ಚುನಾವಣೆ ಅಭ್ಯಥರ್ಿ ಪರ ಬಹಿರಂಗ ಸಭೆ ನಡೆಸಿ ರಾಣೇಬೆನ್ನೂರತ್ತ ಆರೋಗ್ಯ ಸಚಿವರ ಕಾರು ಮಾಕನೂರು ವೃತ್ತದ ಬಳಿ ಬರುತ್ತಿದ್ದಂತೆ ಧರಣಿ ಆರಂಭಿಸಿದ ನೂರಾರು ವಿದ್ಯಾಥರ್ಿಗಳು, ರೈತ ಮುಖಂಡರು, ಸಚಿವರ ಕಾರನ್ನು ನಡೆದು ನಡೆದಿರುವ ವಾಸ್ಥವಿಕ ಸ್ಥಿತಿಯನ್ನು ಮನವರಿಸಿದರು. ಇದರಿಂದ ಕೆಂಡಾಮಂಡಲರಾದ ಶ್ರೀರಾಮುಲು ಅವರು ವಿದ್ಯಾಥರ್ಿಗಳು ಮತ್ತು ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಸರಣಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾಥರ್ಿಗಳು ಸ್ಥಳಕ್ಕೆ ಘಟಕದ ವ್ಯವಸ್ಥಾಪಕರು ಮತ್ತು ಅವಹೇಳನಕಾರಿ ಶಬ್ದದಿಂದ ವತರ್ಿಸಿದ ಬಸ್ ಚಾಲಕ ಬರುವರೆಗೂ ಸ್ಥಳ ಬಿಟ್ಟಿ ಕದಲುವುದಿಲ್ಲವೆಂದು ಬಿಗಿಪಟ್ಟು ಸಡಿಲಿಸದೇ, ಧರಣಿ ಆರಂಭಿಸಿದ್ದರು. ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿದ್ದ ಶ್ರೀರಾಮುಲು ಅವರು ವಿದ್ಯಾಥರ್ಿಗಳೊಂದಿಗೆ ಶಾಂತ ಚಿಂತತೆಯಿಂದ ಅವರ ಪರಿಸ್ಥಿತಿಯನ್ನು ಆಲಿಸಿ ಘಟಕ ವ್ಯವಸ್ಥಾಪಕರಿಗೆ ಮುಂಜಾನೆ 7 ಗಂಟೆಯಿಂದ 10-30 ಅವಧಿಯಲ್ಲಿ ಕನಿಷ್ಠ 4 ಬಸ್ಗಳು ಸಂಚರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಶಿವಣ್ಣ ಬಾಕರ್ಿ, ರಾಮಣ್ಣ ಬಾಕರ್ಿ, ದಿನೇಶ ಪಾಟೀಲ, ಮೇಘರಾಜ ಕವಲೆತ್ತು ಸೇರಿದಂತೆ ಮಾಕನೂರ ಗ್ರಾಮದ ರೈತರು ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.