ವಿದ್ಯಾರ್ಥಿ ಯುವಜನರು ಅಂಬೇಡ್ಕರ್ ಅರಿವಿನ ಮೂಲಕ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮುನ್ನುಡೆಯಲ್ಲಿ - ಮಾರುತಿ ತಳವಾರ

Student youth are leading the way in education, organization, and struggle through awareness of Ambe

ವಿದ್ಯಾರ್ಥಿ ಯುವಜನರು ಅಂಬೇಡ್ಕರ್ ಅರಿವಿನ ಮೂಲಕ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮುನ್ನುಡೆಯಲ್ಲಿ - ಮಾರುತಿ ತಳವಾರ. 

ರಾಣೇಬೆನ್ನೂರ 15 : ಜಾತಿ ವಿನಾಶಕ್ಕಾಗಿ ಹೋರಾಟ ನಡೆಸಿದಾಗ ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾದರೂ ಧೃತಿಗೆಡದೆ ನಿರಂತರ ಹೋರಾಟ ನಡೆಸಿ ದೇಶದ ಪ್ರತಿಯೊಬ್ಬರಿಗೂ ಘನತೆಯ ಬದುಕನ್ನು ನೀಡಿ ಶೋಷಣೆ ಮುಕ್ತ ಸಮಾಜಕ್ಕೆ ದಾರಿ ತೋರಿದರು ಆದರಿಂದ ವಿದ್ಯಾರ್ಥಿ ಯುವಜನರು ಅಂಬೇಡ್ಕರ್ ಅರಿವಿನ ಮೂಲಕ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮುನ್ನುಡೆಯಲ್ಲಿ ಎಂದು ಕಸಾಪ ಗ್ರಾಮ ಘಟಕ ಅಧ್ಯಕ್ಷ ಮಾರುತಿ ತಳವಾರ ಹೇಳಿದರು.ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಗ್ರಾಮ ಘಟಕ ನೇತೃತ್ವದಲ್ಲಿ ಏರಿ​‍್ಡಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್‌. ಅಂಬೇಡ್ಕರ್ ಅವರ134ನೇ ಜಯಂತಿಯನ್ನು ಆಚರಣೆ ಸಂದರ್ಭದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಗೌರಸಲ್ಲಿಸಿ ಮಾತನಾಡಿದರು.ಮಂದ ಬೆಳಕಿನಲ್ಲಿದ್ದ ಅಸಂಖ್ಯಾತ ನೊಂದ ಜನರಿಗೆ ಸಮಾನತೆಯ ಬೆಳಕು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್‌. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ನಿಡಿದ ಕೊಡುಗೆ ಅಪಾರವಾದದ್ದು. ಜಯಂತಿ ಆಚರಣೆ ಅವರ ತತ್ವ ಆದರ್ಶಗಳನ್ನ ನೆನೆದು ಸ್ವತಃ ಪಾಲಿಸಿ ನಿಜವಾದ ಗೌರವ ಸಲ್ಲಿಸೋಣ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಎಸ್‌ಎಫ್‌ಐ ಮುಖಂಡರಾದ ಗುಡ್ಡಪ್ಪ ಮಡಿವಾಳರ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಸಾಂವಿಧಾನಿಕವಾಗಿ ಸಿಗಬೇಕಾದ ಹಕ್ಕು ಮತ್ತು ಸವಲತ್ತುಗಳನ್ನ ಸಮಾಜದ ಕಟ್ಟ ಕಡೆಯ ಜನರಿಗೂ ದಕ್ಕಿಸುವಲ್ಲಿ ಅಂಬೇಡ್ಕರ್ ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಅವರ ರಾಜಿ ರಹಿತ ಹೋರಾಟ ಮೌಲ್ಯಯುತ ಬದುಕನ್ನ ನಾವೆಲ್ಲ ಸದಾ ಸ್ಮರಿಸಿಬೇಕು, ಇಷ್ಟೆಲ್ಲ ಅನುಕೂಲಗಳನ್ನ ರಚನಾತ್ಮಕವಾಗಿ ಸಾಂವಿದಾನಿಕ ನೆಲೆಗಟ್ಟಿನಲ್ಲಿ ಪ್ರತಿಷ್ಠಾಪಿಸಿಯೂ ದೊಡ್ಡ ಮಟ್ಟದ ಬದಲಾವಣೆ ಕಾಣಬೇಕಾದರೆ ಅವಕಾಶಗಳಿಂದ ವಂಚಿರಾದವರು ಆರ್ಥಿಕವಾಗಿ ಪ್ರಗತಿ ಸಾದಿಸಿದಾಗ ತಾನಾಗಿಯೇ ನಮ್ಮಗಳ ಮಧ್ಯದ ಅಂತರ ಕಡಿತವಾಗುವದು ಆ ನಿಟ್ಟಿನಲ್ಲಿ ನಾವುಗಳು ಬದುಕಲೇ ಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ  ಸಿರಿಗನ್ನಡ ಯುವ ಸಂಘದ ಅಧ್ಯಕ್ಷ ಗಣೇಶ ಕರ್ತಿಮಾಳರ, ಸಂದೀಪ ಅಂಬಿಗೇರ, ಗಣೇಶ ಬಾರ್ಕಿ, ರಾಜು ನಧಾಪ್, ಪ್ರದೀಪ ಕೋಟಿಮಠ, ಕಿರಣ ಮಡಿವಾಳರ, ಮಂಜುನಾಥ್ ಬಾರ್ಕಿ, ರವಿಕುಮಾರ್ ಅಂಬಿಗೇರ, ಮಾಲತೇಶ ಅರ್ಕಾಚಾರಿ, ಮುನ್ನಾ ನಧಾಪ್, ಅಮೀತಕುಮಾರ್ ಬಾರ್ಕಿ ವಿಧ್ಯಾರ್ಥಿ, ಯುವಜನರು ಪಾಲ್ಗೊಂಡಿದ್ದರು.