ವಿದ್ಯಾಥರ್ಿಗಳಿಗೆ ಮೌಲ್ಯಗಳ ಬೋಧನೆ ಅಗತ್ಯ : ಗೋಪಾಲ ಜಿನಗೌಡ

ಲೋಕದರ್ಶನ ವರದಿ

ಬೆಳಗಾವಿ.ಜ.20: ಇತ್ತಿಚಿನ ದಿನಗಳಲ್ಲಿ ವಿದ್ಯಾಥರ್ಿಗಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಪಾಲಕರು ವಿದ್ಯಾಥರ್ಿಗಳಿಗೆ ನೈತಿಕ ಮೌಲ್ಯಗಳ  ಬಗ್ಗೆ ಬೋಧನೆ ಮಾಡುವುದು ಇಂದಿನ ತುತರ್ು ಅಗತ್ಯವಾಗಿದೆ ಎಂದು ದೇವೇಂದ್ರ ಜಿನಗೌಡ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷ ಗೋಪಾಲ ಜಿನಗೌಡ ಅವರು  ಅಭಿಪ್ರಾಯಪಟ್ಟರು. 

ಇತ್ತಿಚಿಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾಲಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ , ನಡತೆ ಮತ್ತು ಮೌಲ್ಯಗಳನ್ನು  ಬೆಳೆಸುವುದು  ಪ್ರತಿಯೊಬ್ಬರ ಪಾಲಕರ ಕರ್ತವ್ಯವಾಗಿದೆ. ಪಾಲಕರು ತಮ್ಮ ಜೀವನದ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ಉದಾಹರಣೆಗಳೊಂದಿಗೆ ಮಕ್ಕಳಿಗೆ ತಿಳಿಸಬೇಕು. ಪಾಠದಲ್ಲಿ ಅಂಕಗಳ ಗಳಿಕೆಗಿಂತ ಜೀವನದಲ್ಲಿ ಮೌಲ್ಯಗಳನ್ನು ಗಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. 

ಸಂಸ್ಥೆಯ ಕಾರ್ಯದಶರ್ಿಗಳಾದ  ಶರದ ಬಾಳೀಕಾಯಿರವರು ಪಾಲಕರಿಗೆ ಪ್ರೊಜೆಕ್ಟರ ಮೂಲಕ ಕೆಲವು ಚಿತ್ರಗಳನ್ನು ಪ್ರದಶರ್ಿಸುತ್ತ ಪಾಲಕ ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ವಿನೂತನವಾಗಿ ತಿಳಿಸಿದರು. ಮಕ್ಕಳನ್ನು ಮೊಬೈಲ್ದಿಂದ ದೂರವಿಡುವಂತೆ ಹಾಗೂ ಪಾಲಕರು ನಿಜವಾಗಿಯೂ ಏನಾದರೂ ಉತ್ತಮ ಉಡುಗೊರೆಯನ್ನು ಮಕ್ಕಳಿಗೆ ನೀಡುವುದಾದರೆ ಅದು ಅವರ "ಸಮಯ" ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾ ಯಿನಿಯಾದ ವಿಜಯಲಕ್ಷೀ. ಬ. ಪಾಟೀಲರವರು ಸ್ವಾಮಿ ವಿವೇಕಾನಂದರ ಯುಕ್ತಿಯೊಂದಿಗೆ ಪಾಲಕರನ್ನು ಸ್ವಾಗತಿಸಿದರು. ಪಾಲಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ಸೂಚನೆಗಳನ್ನು ನೀಡಿದರು.ಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಭರಮಪ್ಪಾ ಜನಗೌಡಾ, ಸದಸ್ಯರಾದ ಸಂದೀಪ ಚಿಪ್ರೆ, ಇಂದಿರಾ ಶಂಕರಗೌಡ, ಪ್ರಮೋದ ಜಿನಗೌಡ ಉಪಸ್ಥಿತರಿದ್ದರು.