ಯಮಕನಮರಡಿ 14: ಇಂದಿನ ಆಧುನಿಕ ಯುಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪಠ್ಯೇತರ ಚಟುವಟಿಕೆ ಜೋತೆ ಉತ್ತಮ ಗುರಿ ಹೊಂದಿದವರಾಗಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವುದರ ಜೊತೆಗೆ ತಾವು ಕಲಿತ ಶಾಲೆ ಕಾಲೇಜುಗಳಿಗೆ ಕೀರ್ತಿತುವುದರೊಂದಿಗೆ ದೇಶ ಭಕ್ತಿ ಭಾಷ್ಯಾಭಿಮಾನ ಹೆತ್ತ ತಂದೆ ತಾಯಿ ತಮಗೆ ಉಜ್ವಲ ಬೆಳಕು ಮೂಡಿಸಿದ ಉಪನ್ಯಾಸಕರಿಗೆ ಕಿರ್ತಿ ತರಬೇಕೆಂದು ಬಿ.ಡಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಮಂಜುಳಾ ಸವದತ್ತಿ ಅವರು ಹೆಳಿದರು.
ಅವರು ದಿ. 14 ರಂದು ಸ್ಥಳೀಯ ಸಿ ಇ ಎಸ್ ವಾಣಿಜ್ಯ ಮಹಾವಿದ್ಯಾಲಯದ 2024 ನೇ ಸಾಲೀನ ಕಾಮರ್ಸ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಯು ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪಿ,ಬಿ ಅವಲಕ್ಕಿ ವಹಿಸಿದ್ದರು. ಪ್ರಾರಂಭದಲ್ಲಿ ಅಧಿಕಾರಿಗಳ ಸ್ವಾಗತ ಮತ್ತು ಪರಿಚಯ ಸನ್ಮಾನ ಜರುಗಿತು. ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣಾ ದುಗ್ಗಾಣಿ, ಪಿ ಯು ಕಾಲೇಜಿನ ಪ್ರಾಚಾರ್ಯರಾದ ವ್ಹಿ ಬಿ ನಾಶಿಪುಡಿ ಹಾಗೂ ಕಾಮರ್ಸ ಕಾಲೇಜಿನ ಪ್ರಾಚಾರ್ಯರಾದ ಕುಮಾರಿ ಅರುಣಾ ಸೂಜಿ ಅತಿಥಿಗಳ ಪರಿಚಯ ಹಾಗೂ ಪ್ರಾಸ್ಥಾವಿಕವಾಗಿ ಮಾತನಾಡಿದರು. ಪ್ರತಿಬಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಜರುಗಿತು ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕರಾದ ಕುಂಬಾರ ಉಪಸ್ಥಿತರಿದ್ದರು. ವಂದಾಳೆ ಉಪನ್ಯಾಸಕಿ ನಿರೂಪಿಸಿ ವಂದಿಸಿದರು.