ವಿದ್ಯಾರ್ಥಿಗಳ ಅವಿರತ ಪ್ರಯತ್ನದಿಂದ ಯಶಸ್ಸು ಸಾಧ್ಯ: ಬಾಬಾಸಾಹೇಬ ಪಾಟೀಲ

Success is possible through the tireless efforts of students: Babasaheb Patil

ನೇಸರಗಿ 14: ವಿದ್ಯಾರ್ಥಿಗಳಿಗೆ ವ್ಯಾಸಂಗ ಮತ್ತು ಉದ್ಯೋಗ ಪಡೆಯುವ ಸಮಯದಲ್ಲಿ ಸ್ವಯಂ ಪ್ರೇರಣೆ, ಸ್ಫೂರ್ತಿ, ವಿಶ್ವಾಸ ಮತ್ತು ತರಬೇತಿಯಲ್ಲಿ ಪಾಲ್ಗೊಳ್ಳುವದು, ಉದ್ಯೋಗ ಅರ್ಹತೆ ಪರೀಕ್ಷೆಯಲ್ಲಿ  ಪಾಲ್ಗೊಳ್ಳುವದು  ಬಹು ಮುಖ್ಯ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.     

ಅವರು ಬುಧವಾರದಂದು  ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೇಸರಗಿ ಇದರ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಛಲದಿಂದ ವ್ಯಾಸಂಗ ಮಾಡಿ ಹೆಚ್ಚು ಅಂಕ ಪಡೆದರು ಉದ್ಯೋಗ ಅರ್ಹತಾ ಪರೀಕ್ಷೆಯಲ್ಲಿ ಪ್ರವೇಶ ಪಡೆಯುವದಿಲ್ಲ, ಅದಕ್ಕಾಗಿ ತಾವುಗಳು ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ  ಉದ್ಯೋಗ ಪಡೆಯಲು ,ಸಾಮಾನ್ಯ ಜ್ಞಾನ, ಎಲ್ಲ ಬಾಷೆಗಳ ಕಲಿಕೆ ಮುಖ್ಯವಾಗಿದೆ. ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಕಂಪ್ಯೂಟರ್ ಜ್ಞಾನ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂದರು.   ಅಥಿತಿಗಳಾದ ನಾಗನೂರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಅಶೋಕ ಚಂದ್ರಗೌಡ ಶಿವನಾಯ್ಕರ ಮಾತನಾಡಿ  ಆ ಉದ್ಯೋಗ ಬೇಡ ಈ ಉದ್ಯೋಗ ಬೇಡ ಎನ್ನುವದನ್ನು ಬಿಟ್ಟು ಮೊದಲು ಹುದ್ದೆಯ ಪರೀಕ್ಷೆಯಲ್ಲಿ  ಪಾಲ್ಗೊಂಡು ಪಾಸಾಗಿ, ದೇವರಿಗಿಂತ ಹೆಚ್ಚಾಗಿ ತಂದೆ ತಾಯಿಗಳನ್ನು ಗೌರವಿಸಿ, ಪ್ರೀತಿಸಿ, ತಂದೆ ತಾಯಿಗಳ ಕೆಲಸ ಕಾರ್ಯದಲ್ಲಿ ಅವರಿಗೆ ಸಹಕಾರ ನೀಡಿ, ನಾನು  ಅನೇಕ ಉದ್ಯೋಗದ ಅನೇಕ ಕನಸುಗಳನ್ನು ಕಂಡಿದ್ದೆ ಸೇನೆಯಲ್ಲಿ ಕೆಲಸ ಮಾಡಿದೆ, ಕಾಲೇಜು ಸಂಚಾಲಕನಾದೆ, ಪ್ರಾದ್ಯಾಪಕನಾದೆ, ಬೆಳಿಗ್ಗೆ ಕೃಷಿಕನಾದೆ, ವೈದ್ಯನಾಗುವ ಕನಸಿತ್ತು ಅದು ಆಗಲಿಲ್ಲ ಮಗಳನ್ನು ವೈದ್ಯಯನ್ನಾಗಿ ಮಾಡಿದೆ ಎಂದರು.     

ಕಾಲೇಜು ಪ್ರಾಂಶುಪಾಲರಾದ ಡಾ. ಫಕೀರನಾಯ್ಕ ದುಂ ಗದ್ದಿಗೌಡರ ಮಾತನಾಡಿ  ವಿದ್ಯಾರ್ಥಿಗಳಿಗೆ ಈಗ ಸುದಿನ ತಾವು ಇಷ್ಟು ದಿನ ಮಾಡಿದ್ದು ಬೇರೆ ಇನ್ನೂ ನಿಮ್ಮ ಜೀವನದ ಬೆಳವಣಿಗೆಯ ಕಾಲ ಬಂದಿದೆ. ನಮ್ಮ ಕನ್ನಡ ಭಾಷೆ ಹೆಚ್ಚು ಒತ್ತು ಕೊಡೋಣ ಮತ್ತು ಇತರ ಭಾಷೆಗಳಿಗೆ ವಿರೋಧ ಬೇಡ, ಇಂಗ್ಲಿಷ್ ಮಾತನಾಡಲು ಚೆನ್ನಾಗಿ ಕಲಿಯಿರಿ. ನಿಮ್ಮ ಮುಂದಿನ ಜೀವನ ಯಶಸ್ವಿ ಆಗಲಿ ಎಂದರು.    

ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷರಾದ ಆಡಿವಪ್ಪ ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ, ಸದಸ್ಯರಾದ  ಚನ್ನಗೌಡ ಪಾಟೀಲ, ನಿಂಗಪ್ಪ ತಳವಾರ, ನಜೀರ ಅಹಮ್ಮದ ತಹಶೀಲ್ದಾರ್, ಸುರೇಶ ಲೆಂಕನಟ್ಟಿ, ಮಂಜುನಾಥ್ ಮದೇನ್ನವರ, ಉಷಾ ನವಲಗಟ್ಟಿ, ವಿನಾಯಕ ಮಾಸ್ತಮರಡಿ, ಅನ್ವರ ಮನಿಯಾರ, ಪುಂಡಲೀಕ ಹಮ್ಮಣ್ಣವರ,ಮತ್ತು  ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ರಮೇಶ ರಾಯಪ್ಪಗೋಳ, ಭೋಧಕ - ಭೋಧಕ್ಕೇತರ ಸಿಬ್ಬಂದಿ, ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿ- ವಿದ್ಯಾರ್ಥಿನೀಯರು ಭಾಗವಹಿಸಿದ್ದರು.  

ಪ್ರಾರ್ಥನೆ ಕುಮಾರಿ ಸುಧಾ ತುಬಾಕಿ,ಸ್ವಾಗತ  ಮಂಜುನಾಥ ಕಂಬಳಿ, ನಿರೂಪಣೆ ಕುಮಾರಿ ವಿಜಯಲಕ್ಷ್ಮೀ ಮಾಳನ್ನವರ, ತ್ರಿವೇಣಿ  ಹೊನ್ನಪ್ಪನವರ, ವಂದನಾರೆ​‍್ಣ ಹರೀಶ್  ಎಚ್‌. ಆರ್, ಪ್ರಾಸ್ತಾವಿಕ ಡಾ. ಮೀನಾಕ್ಷಿ  ಮಡಿವಾಳರ, ವರದಿ ವಾಚನ  ಸುಖದೇವಾನಂದ ಚವತ್ರಿಮಠ ನೆರವೇರಿಸಿದರು.