ಬಿಗಿ ಭದ್ರತೆಯಲ್ಲಿ ಸುಲ್ತಾನನ ಜಯಂತಿ ಆಚರಣೆ ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪು ಸುಲ್ತಾನ: ಜಿಲ್ಲಾಧಿಕಾರಿ ವರ್ಣನೆ

ಕಾರವಾರ 10: ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪುಸುಲ್ತಾನ್ ಎಂಬುದು ನಮ್ಮ ಹೆಗ್ಗಳಿಕೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬಣ್ಣಿಸಿದರು. ಟಿಪ್ಪು ಕುಶಲಮತಿ ರಾಜತಾಂತ್ರಿಕ. ಬ್ರಿಟಿಷರ ವಿರುದ್ಧ ರಾಜೀ ಮಾಡಿಕೊಳ್ಳದ ದೊರೆ ಟಿಪ್ಪು, ಅವರಿಗೆ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು, ಅವರ ವಸ್ತುಗಳನ್ನು ಕೊಳ್ಳಬಾರದು ಎಂಬ ಆಜ್ಞೆ ವಿಧಿಸುವ ಮೂಲಕ ಅಸಹಕಾರ ಚಳುವಳಿಯ ಬೀಜಗಳನ್ನು ತನ್ನ ಆಳ್ವಿಕೆಯ ರಾಜ್ಯದಲ್ಲಿ ಬಿತ್ತಿದ್ದ ಎಂದರು.  

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಏರ್ಪಟ್ಟ  ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಟಿಪ್ಪು ಸುಲ್ತಾನ್ ಅವರ ಯುದ್ಧನೀತಿ, ತಂತ್ರಗಾರಿಕೆ, ವಿಜ್ಞಾನ ಬಳಕೆ ಇದು ಬೇರೆ ಯಾವ ರಾಜರೂ ಬಳಸದ ನೈಪುಣ್ಯತೆ ಟಿಪ್ಪು ಅವರದ್ದಾಗಿತ್ತು. ಅಬ್ದುಲ್ ಕಲಾಂ ಅವರು ಕ್ಷಿಪಣಿಗಳ ಪಿತಾಮಹಾ ಎನ್ನುತ್ತೇವೆ. ಆದರೆ  ಟಿಪ್ಪು ಸುಲ್ದಾನ್ 18ನೇ ಶತಮಾನದಲ್ಲಿಯೇ ರಿವಸರ್್ ಎಂಜಿನಿಯರಿಂಗ್ ತಂತ್ರಜ್ಞಾನದ ರಾಕೆಟ್ಗಳನ್ನು ತಯಾರಿಸಿ ಯುದ್ಧದಲ್ಲಿ ಬಳಸಿದ್ದರು. ಯುದ್ಧದಲ್ಲಿ ಕಾದಾಡುತ್ತಲೇ ಮಡಿದ ಟಿಪ್ಪು ಸುಲ್ತಾನ್ ಅವರ ಮರಣಾನಂತರ ಬ್ರಿಟಿಷರಿಗೆ ಮೊದಲು ಆಸಕ್ತಿ ಕೆರಳಿಸಿದ್ದು, ಆತನ ಅರಮನೆಯ ಗ್ರಂಥಾಲಯ ಹಾಗೂ  ಟಿಪ್ಪುವಿನ ರಾಕೆಟ್ ಪ್ರಯೋಗಾಲಯ ಕೊಣೆ. ರಾಕೆಟ್ ತಂತ್ರಜ್ಞಾನವನ್ನು  ಮುಂದೆ ಬ್ರಿಟಿಷರು ಫ್ರೆಂಚ್ ವಿರುದ್ಧದ ವಾಟರ್ ಲೂ ಕದನದಲ್ಲಿ ಬಳಸಿದರು ಎಂದು ನಕುಲ್ ಹೇಳಿದರು. ಕೃಷಿ ಮತ್ತು ಕಂದಾಯ ಹಾಗೂ ಭೂಮಿ ಹಂಚಿಕೆ, ಕೆರೆ ನಿಮರ್ಾಣ, ಉದ್ಯಾನವನ ಅಭಿವೃದ್ಧಿಗಳಿಗೆ, ಸುಧಾರಣೆಗಳಿಗೆ ಟಿಪ್ಪು ಸುಲ್ತಾನ್ ಮಾದರಿಯಾಗಿದ್ದಾರೆ ಎಂದರು.

ಇತಿಹಾಸವನ್ನು ಧರ್ಮದ ನಿಶೆಯ ದುಬರ್ೀನಿನಲ್ಲಿ ನೋಡಬಾರದು:

ಇತಿಹಾಸವನ್ನು ಧರ್ಮದ ನಿಶೆಯ ದುಬರ್ೀನಿನಲ್ಲಿ ನೋಡಬಾರದು. ದೇಶಕ್ಕಾಗಿ ಕರುಳಕುಡಿಗಳನ್ನೇ ಒತ್ತೆ ಇಟ್ಟ ದೊರೆ  ಟಿಪ್ಪು ಸುಲ್ತಾನ ವಸಹಾತುಶಾಹಿ ವಿರುದ್ಧ ಹೋರಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ  ಎಂದು ಉಪನ್ಯಾಸಕಿ ಡಾ ವಿನಯಾ ವಕ್ಕುಂದ ಪ್ರತಿಪಾದಿಸಿದರು. ಟಿಪ್ಪು ಜಯಂತಿಯಲ್ಲಿ  ವಿಶೇಷ ಉಪನ್ಯಾಸ ನೀಡಿದ ಅವರು, ಬ್ರಿಟಿಷ್ ವಿರುದ್ಧದ ಯುದ್ಧದಲ್ಲಿ ಯುದ್ಧನಷ್ಟ ತುಂಬಿಗೊಡುವಂತೆ ಬ್ರಿಟಿಷರ ನಡುವೆ ಆದ ಒಪ್ಪಂದದ ಸಂದರ್ಭದಲ್ಲಿ ಟಿಪ್ಪು ದೇಶದ ಜನರ ಮೇಲೆ ತೆರಿಗೆ ಹೊರೆಯಾಗಬಾರದೆಂದು, ತನ್ನ ಕರುಳ ಕುಡಿಗಳನ್ನೆ ಒತ್ತೆ ಇಡುತ್ತಾನೆ. ಹೀಗಿರುವಾಗ ದ್ರೋಹಿ ಹೇಗಾಗುತ್ತಾನೆ ಎಂದು ಪ್ರತಿಪಾದಿಸಿದರು. ಜನರ ಪರ ಇರುವ ದೊರೆಯ ಬಗ್ಗೆ ಮಾತ್ರ ಲಾವಣಿಗಳು ಹುಟ್ಟಲು ಸಾಧ್ಯ, ಟಿಪ್ಪು ಸುಲ್ತಾನನ ಕುರಿತು ಜನಪದರು ಕಟ್ಟಿದ 8 ಲಾವಣಿಗಳು ನಮಗೆ ಲಭ್ಯವಾಗಿವೆ. ದೊರೆಯ ಕುರಿತು ಅತೀ ಹೆಚ್ಚು ಲಾವಣಿ ಬಂದಿರುವುದು ಟಿಪ್ಪು ಸುಲ್ತಾನನ ಬಗ್ಗೆ ಹಾಗೂ ಕಿತ್ತೂರು ಚೆನ್ನಮ್ಮಳ ಬಗ್ಗೆ. ಲಾವಣಿಗಳು ಸುಳ್ಳು ಹೇಳುವುದಿಲ್ಲ ಎಂದರು. 

ಟಿಪ್ಪು ಸುಲ್ತಾನ್ ಎಂದೂ ಅನ್ಯಧರ್ಮಗಳ ವಿರುದ್ಧವಾಗಿ ನಡೆದುಕೊಂಡವನಲ್ಲ ಎಂಬುದು ದಾಖಲೆಗಳಿಂದ ವ್ಯಕ್ತವಾಗುತ್ತದೆ. ಬ್ರಿಟಿಷ್ ಸೇನೆ ಮಲಬಾರ್ ಹಾಗೂ ಮಂಗಳೂರು ಭಾಗದಲ್ಲಿ ಪದೇ ಪದೇ ನಡೆಸುತ್ತಿದ್ದ ಕುತಂತ್ರಕ್ಕೆ ಪ್ರತಿಯಾಗಿ ಅನಿವಾರ್ಯ ಸಂದಭದಲ್ಲಿ ಆದ ಮತಾಂತರದ ಸಂಗತಿಯನ್ನು ಇತಿಹಾಸ ತಿರುಚುವಂತೆ ಮಾಡುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು. ಅದರ ಹೊರತಾಗಿ ಟಿಪ್ಪು ಸರ್ವಧರ್ಮ ಸಹಿಷ್ಣು, ಟಿಪ್ಪು ಒಬ್ಬ ಸೂಫಿ ಸಂತನಾಗಬೇಕಿದ್ದ ವ್ಯಕ್ತಿ. ಅವನ ಆಡಳಿತಾವಧಿಯಲ್ಲಿ ಸಾಕಷ್ಟು ದೇವಾಲಯಗಳ ಜೀಣರ್ೋದ್ಧಾರವಾಗಿವೆ. ಮರಾಠರಿಂದ ದಾಳಿಗೊಳಗಾದ ಶೃಂಗೇರಿ ದೇವಸ್ಥಾನ ಪುನರುತ್ಥಾನಕ್ಕೆ ಹಣ ನೀಡಿದೆ. ಶಾರದಾಂಬೆ ಮೂತರ್ಿ ನಿಮರ್ಿಸಿಕೊಟ್ಟ.ಬೆಳ್ಳಿಯ ಸಾಮಾಗ್ರಿಗಳನ್ನು ನೀಡಿದ್ದಕ್ಕೆ ಶೃಂಗೇರಿ ಗುರುಗಳಿಗೆ ಬರೆದ 31 ಪತ್ರಗಳು ಈಗಲೂ ದೊರೆಯುತ್ತವೆ ಎಂದರು.  ನಂಜನಗೂಡಿನ ಪಚ್ಚೆಲಿಂಗ ವಿಗ್ರಹ ಕೊಡುಗೆ ನೀಡಿದ. ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ತೀರ್ಥ ಕುಡಿದು ಯುದ್ಧಕ್ಕೆ ಹೊರಡುತ್ತಿದ್ದ ಎಂಬುದಕ್ಕೆ ದಾಖಲೆಗಳಿವೆ ಎಂದರು. ಜನರ ಪ್ರೀತಿ ಗಳಿಸುವುದು ಮುಖ್ಯ ಎಂಬ ತಂದೆ ಹೈದರಾಲಿ ಮಾತನ್ನು ಟಿಪ್ಪು ಸುಲ್ತಾನ ಕೊನೆಯ ಉಸಿರು ಇರುವವರೆಗೂ ಉಳಿಸಿಕೊಂಡ. ಬ್ರಿಟಿಷರ ಜೊತೆ ಚೆನ್ನಾಗಿದ್ದ ಹೈದರಾಬಾದ್ ನಿಜಾಮರನ್ನು ಕೊನೆಯ ತನಕ ಟಿಪ್ಪು ದ್ವೇಷಿಸಿದ. ನಿಜಾಮರ ಮನೆತನದ ಜೊತೆ ವೈವಾಹಿಕ ಸಂಬಂಧಗಳನ್ನು ನಿರಾಕರಿಸಿದ. ಬ್ರಿಟಿಷರು ಭಾರತೀಯ ಅರಸರ, ಸಾಮಂತರ ವೈರಿಗಳು ಎಂದು ಮರಾಠರಿಗೆ ಮನವರಿಕೆ ಮಾಡಿಕೊಡಲು ಎರಡನೇ ಆಂಗ್ಲೋ ಮೈಸೂರು ಯುದ್ಧದ ವೇಳೆ ಟಿಪ್ಪು ಯತ್ನಿಸಿದ್ದ. ಆದರೆ ಅದನ್ನು ಮರಾಠರು ನಂಬಲಿಲ್ಲ. ಟಿಪ್ಪು ಬ್ರಿಟಿಷರನ್ನು ಕುರಿತು ಹೇಳಿದ ಮಾತು 22 ವರ್ಷಗಳ ನಂತರ ಮರಾಠರ ಪಾಲಿಗೆ ನಿಜವಾಗಿತ್ತು. ಆಗ ಮರಾಠರು ಟಿಪ್ಪುವನ್ನು ಸ್ಮರಿಸಿಕೊಂಡರು.

ನಾಣ್ಯಗಳಲ್ಲಿ ಇದ್ದ ತ್ರಿಶೂಲ ಚಿತ್ರ ಹಾಗೂ ಲಕ್ಷ್ಮಿ ಚಿತ್ರಗಳನ್ನು ಟಿಪ್ಪು ಬದಲಿಸಲಿಲ್ಲ. ಆತ ಕನ್ನಡ ದ್ವೇಷಿಯಾಗಿರಲಿಲ್ಲ. ದ್ವಿಭಾಷ ಪದ್ಧತಿ ಆತನ ಆಡಳಿತದಲ್ಲಿತ್ತು. 18 ಇಲಾಖೆಗಳ ಆಡಳಿತ ಕನ್ನಡದಲ್ಲಿತ್ತು ಎಂಬುದಕ್ಕೆ ಸಾಕ್ಷಿಗಳಿವೆ. ಆತನ ಕೈ ಬೆರಳ ಉಂಗುರದಲ್ಲಿ ರಾಮ ಎಂದು ಬರೆಯಲಾಗಿತ್ತು. ಟಿಪ್ಪು ಬಳಸುತ್ತಿದ್ದ ಉಂಗುರವನ್ನು ಲಂಡನ್ ಮ್ಯೂಜಿಯಂನಲ್ಲಿತ್ತು. ಅದನ್ನು ಹರಾಜಿಗೆ ಹಾಕಿದ ಬಗ್ಗೆ ಈಗಲೂ ಲಂಡನ್ನಲ್ಲಿ ದಾಖಲೆಗಳಿವೆ ಎಂದರು. ಮೈಸೂರು ಅರಮನೆಗೆ ಮತ್ತು ಅರಸರ ಕುಟುಂಬಕ್ಕೆ  ಟಿಪ್ಪು ತೊಂದರೆ ನೀಡಿದ ಉದಾಹರಣೆಗಳಿಲ್ಲ. ದಿವಾನ್ ಪೂರ್ಣಯ್ಯ ಅವರ ಹೆಸರಲ್ಲಿ ಹಲವಾರು ಛತ್ರಗಳನ್ನು ತೆರೆದಿದ್ದ, ಇವು  ಆತ ಸಹಿಷ್ಣು ಎಂಬುದಕ್ಕೆ ಸಾಕ್ಷಿಗಳು. ಇದಕ್ಕೆ ಕಾರಣ ಆತನದು ಸೂಫಿ ಪರಂಪರೆಯಲ್ಲಿ ಬೆಳೆದದ್ದು ಕಾರಣ. ಟಿಪ್ಪು ಸಾಮ್ರಾಜ್ಯ ವಿಸ್ತರಣೆಯ, ಅಧಿಕಾರಿ ದಾಹಿ ಅರಸನಲ್ಲ. ಆತ ದುಡಿಯುವ ವರ್ಗದ ದೊರೆ ಎಂಬ ಕಾರಣದಿಂದಲೇ ಜನಪದರಿಂದ ಲಾವಣಿಗಳು ಹುಟ್ಟಿವೆ ಎಂದರು.

ಟಿಪ್ಪು ಜಯಂತಿ ಅಂಗವಾಗಿ ಕಾರವಾರ ತಾಲೂಕಿನ ಪ್ರೌಢಶಾಲೆಗಳಲ್ಲಿ ನಡೆಸಿದ ಪ್ರಬಂಧ ಸ್ಪಧರ್ೆದಲ್ಲಿ ವಿಜೇತರಾದ ವಿದ್ಯಾಥರ್ಿಗಳಾದ ಸೆಂಟ್ ಮೈಕೆಲ್ ಶಾಲೆಯ ಸಂಸ್ಕೃತಿ ಆರ್ ವಮರ್ಾ (ಪ್ರಥಮ), ಕಡವಾಡ ಜನತಾ ವಿದ್ಯಾಲಯದ ಅಕ್ಷಯ ಎ ರೇವಣಕರ (ದ್ವಿತೀಯ), ಕಾರವಾರ ಸಕರ್ಾರಿ ಪ್ರೌಢಶಾಲೆಯ ಭವಾನಿ ಬಿಹಾರಿ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ವಿ ಪಾಟೀಲ್, ನಗರಸಭೆ ಆಯುಕ್ತ ಎಸ್. ಯೋಗೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯ್ಕ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಹಿಮಂತರಾಜು ಜಿ. ಸ್ವಾಗತಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಕಳುಹಿಸಿ ಸಂದೇಶವನ್ನು ಓದಲಾಯಿತು.