ಅಪೌಷ್ಟಿಕತೆ ನಿವಾರಣೆಗಾಗಿಯೇ ಸುಪೋಷಿತ್ ಅಭಿಯಾನ- ಶರಣಪ್ಪ ವಡಿಗೇರಿ

Suposhit Abhiyan is to eliminate malnutrition - Sharanappa Vadigeri

ಲೋಕದರ್ಶನ ವರದಿ 

  

  


ಅಪೌಷ್ಟಿಕತೆ ನಿವಾರಣೆಗಾಗಿಯೇ ಸುಪೋಷಿತ್ ಅಭಿಯಾನ- ಶರಣಪ್ಪ ವಡಿಗೇರಿ 

ಕೊಪ್ಪಳ  25: ಕೇಂದ್ರ ಸಂವಹನ ಇಲಾಖೆ, ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಗ್ರಾಮ ಪಂಚಾಯತ್ ಕಿನ್ನಾಳ ಇವರ ಆಶ್ರಯದಲ್ಲಿ ಭಾರತ ಸರಕಾರದ ಪ್ರಧಾನ ಮಂತ್ರಿಯವರು ಘೋಷಣೆ ಮಾಡಿರುವ ನೂತನ ಯೋಜನೆ ಸುಪೋಷಿತ್ ಗ್ರಾಮ ಪಂಚಾಯತ್ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಿನ್ನಾಳ ಗ್ರಾಮದಲ್ಲಿ ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ(ರಿ) ಕಲಾತಂಡದವರಿಂದ ನಡೆಯಿತು. 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಿಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಭಾರತ ಸರಕಾರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ನೂತನ ಯೋಜನೆ ಸುಪೋಷಿತ್ ಗ್ರಾಮ ಪಂಚಾಯತ್ ಅಭಿಯಾನ ಮೂಲಕ ವಿಶೇಷವಾಗಿ ಮಹಿಳೆಯರು, ಮಕ್ಕಳು ಅಪೌಷ್ಠಿಕತೆಯಿಂದಾ ಬಳಲುವುದನ್ನು ಹೋಗಲಾಡಿಸಿ ಆರೋಗ್ಯವಂತರನ್ನಾಗಿಸುವ ದಿಶೆಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು. 

ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಲಕ್ಷ್ಮೀದೇವಿ ರೆಡ್ಡಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗ್ರಾಮ ಪಂಚಾಯತಿಗಳ ಮೂಲಕ ಕೇಂದ್ರ ಸರಕಾರವು ಜಾರಿಗೆ ತಂದಿರುವ ಈ ಯೋಜನೆಯು ಅಂಗನವಾಡಿಗಳ ಮೂಲಕ ಜಾರಿಗೆ ಮಾಡಲಾಗುತ್ತದೆ. ಇದರಿಂದ ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವವರು ತಮ್ಮ ತೂಕ ಮತ್ತು ಎತ್ತರವನ್ನು ಕಳೆದುಕೊಂಡು ಅಪೌಷ್ಠಿಕತೆಯಿಂದ ಬಳಲುತ್ತಾರೆ. ಅಂತಹವರಿಗೆ ವಿಶೇಷ ಆರೈಕೆ ಮತ್ತು ಗಮನಹರಿಸುವ ಮೂಲಕ ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ ಎಂದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಎಸ್‌.ಹುದ್ದಾರ, ಅಂಗನವಾಡಿ ಕಾರ್ಯಕರ್ತೆಯರಾದ ಸಂತೋಷಿಮಾತಾ, ರೇಣುಕಾ ಜಾಲಿಹಾಳ, ಭಾರತಿ ವಾಲ್ಮೀಕಿ, ಗೀತಾಲಕ್ಷ್ಮೀ ಚಿತ್ರಗಾರ, ಭಾಗಿರಥಿ ವಾಲ್ಮೀಕಿ, ರೇಣುಕಾ ಬಂಡಿ ಭಾಗವಹಿಸಿದ್ದರು. ನಂತರ ಜನಜಾಗೃತಿ ಕಲಾರಂಗ ಸಂಸ್ಥೆ (ರಿ) ಕುಷ್ಟಗಿ ಅವರಿಂದ ಬೀದಿನಾಟಕ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಗೀತಾ ಹಾದಿಮನಿ ವಂದಿಸಿದರು.