ಗದಗ 09: ಸಿ.ಕೆ. ಬಲೂಟಗಿ ಉಪತಹಶೀಲ್ದಾರರು ತಾಲೂಕಾ ದಂಡಾಧಿಕಾರಿಗಳ ಕಛೇರಿ ಗದಗ ಇವರ ನೇತೃತ್ವದಲ್ಲಿ ದಿ. 09ರಂದು ಗದಗನಗರದ ಹಾತಲಗೇರಿ ನಾಖಾ ಹಾಗೂ ಕೆ.ಸಿ.ರಾಣಿ ರೋಡ ಸುತ್ತಮುತ್ತಲಿನ ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರವ ಅಂಗಡಿಗಳ ಮೇಲೆ ದಿಢೀರ್ ಕೋಟ್ಪಾ ಕಾಯರ್ಾಚರಣೆ ನಡೆಸಿ ಕೋಟ್ಪಾ ಸೆಕ್ಷನ್ 6ಬಿ ಹಾಗೂ 4 ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು.
ಸಿ.ಕೆ.ಬಲೂಟಗಿ ಉಪತಹಶಿಲ್ದಾರರು ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಭಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರವ ಹಾಗೂ ಧೂಮಪಾನ ಮಾಡಲು ಅವಕಾಶ ಮಾಡಿಕೊಡುವ ಅಂಗಡಿಗಳ ಮಾಲೀಕರು ತಕ್ಷಣದಿಂದಲೇ ತಂಭಾಕು ಉತ್ಪನ್ನಗಳನ್ನು ಮಾರಾಟವನ್ನು ನಿಲ್ಲಿಸಿ ಅಂಗಡಿಯಿಂದ ತಂಬಾಕು ಉತ್ಪನ್ನಗಳನ್ನು ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದಲ್ಲಿ ಅಂಗಡಿ ಮಾಲಿಕರು ಪಡೆಯುತ್ತಿರು ಸರಕಾರಿ ಸವಲತ್ತುಗಳನ್ನು ರದ್ದುಗೊಳಿಸುವದಾಗಿ ಸೂಚಿಸಿದರು. ಡಾ. ಎಸ್.ಎಸ್. ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು ಗದಗ ಹಗೂ ಡಿ.ಎಸ್.ಅಂಗಡಿ ತಾಲೂಕಾ ಆಹಾರ ಸುರಕ್ಷತಾಧಿಕಾರಿಗಳು ಗದಗ ಇವರು ಅಂಗಡಿ ಲೈಸನ್ಸನ್ನು ರದ್ದುಗೊಳಿಸುವದಾಗಿ ಎಚ್ಚರಿಕೆ ನೀಡಿದರು.
ಶಾಲಾ ಆವರಣದದಿಂದ 100 ಗಜದ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತಿದ್ದ ಶಾಲಾ ಮುಖ್ಯೋಪಾಧ್ಯಾಯರಿಗೆ ಅಂಗಡಿಗಳನ್ನು ತೆರವುಗೊಳಿಸಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯನ್ನಾಗಿ ಘೋಷಿಸಲು ಎಸ್.ಎಸ್. ಕೆಳದಿಮಠ ಕ್ಷೇತ್ರ ಶಿಕ್ಷಾಧಿಕಾರಿಗಳು ಗದಗ ನಗರ ಇವರು ಸೂಚಿದರು, ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಭಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುದರಿಂದಾಗಿ ಮಕ್ಕಳು ಹಾಗೂ ಯುವಪೀಳಿಗೆ ಚಟಕ್ಕೆ ಬಲಿಯಾಗಿ ಹಾಳಾಗುತ್ತಿದ್ದು ಇದರ ಪರಿಣಾಮ ನಮ್ಮ ದೇಶದ ಪ್ರಗತಿ ಮೇಲೆ ಬಿರುತ್ತಿದೆ ಎಂದು ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ, ತೀಳಿಸಿದರು, ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು. ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಕೊಳ್ಳಲಾಗಿ ಕೋಟ್ಪಾ ಕಾಯ್ದೆ 2003 ಅಡಿಯಲ್ಲಿ 8 ಪ್ರಕರಣ ದಾಖಲಿಸಿ ರೂ.3100 ಗಳ ದಂಡ ವಸೂಲಿ ಮಾಡಲಾಯಿತು.
ತಾಲೂಕಾ ಕೋಟ್ಪಾ ತನಿಕಾ ದಳದಲ್ಲಿ ಸಿ.ಕೆ.ಬಲೂಟಗಿ ಉಪತಹಶಿಲ್ದಾರರು, ಡಾ.ಎಸ್.ಎಸ್. ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು ಗದಗ, ಡಿ.ಎಸ್.ಅಂಗಡಿ ತಾಲೂಕಾ ಆಹಾರ ಸುರಕ್ಷತಾಧಿಕಾರಿಗಳು, ಶ್ರೀ ಎಸ್.ಎಸ್.ಕೆಳದಿಮಠ ಕ್ಷೇತ್ರ ಶಿಕ್ಷಾಧಿಕಾರಿಗಳು ಗದಗ ನಗರ, ಪೊಲೀಸ್ ಇಲಾಕೆಯಿಂದ ಕೆ.ಎಂ.ಮಹಾಮನಿ. ಎಂ.ಜಿ. ಗುಡ್ಡದನಾವೇರಿ ಸಿ.ಡಿ.ಪಿ.ಓ. ಗದಗ, ಶ್ರೀಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು.ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ, ಎಂಎಂ.ತಳವಾರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಗದಗ ಉಪಸ್ಥಿತಿಯಲ್ಲಿ ಕಾಯರ್ಾಚರಣೆ ಮಾಡಲಾಯಿತು.