ಇಂದು ‘ಮಂಗಳವಾರ ರಜಾದಿನ’ ಟ್ರೇಲರ್ ಬಿಡುಗಡೆ

ಬೆಂಗಳೂರು, ಮಾ 03, ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮಂಗಳವಾರ ರಜಾದಿನ‘ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಇಂದು ಬಿಡುಗಡೆಯಾಗಲಿದೆ ಇದೇ 10ರಂದು ಆಡಿಯೋ ರಿಲೀಸ್ ಆಗಲಿದ್ದು, ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ ಯುವಿನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕನಾಗಿ ಬಿಗಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯಿಸಿದ್ದು, ಕ್ಷೌರಿಕನ ಪಾತ್ರ ನಿರ್ವಹಿಸಿದ್ದಾರೆ. ವೃತ್ತಿ ಆರಂಭಿಸಿದಾಗಿನಿಂದಲೂ ನಾಯಕನಿಗೆ ಕಿಚ್ಚ ಸುದೀಪ್ ಅವರಿಗೆ ಹೇರ್ ಸ್ಟೈಲ್ ಮಾಡುವ ಆಸೆ ಇರುತ್ತದೆ. ಆತನ ಆಸೆ ಈಡೇರುತ್ತದೆಯೇ ಎಂಬುದನ್ನು ತಿಳಿಯಲು ಸಿನಿಮಾ ವೀಕ್ಷಿಸಬೇಕು ಎನುತ್ತಾರೆ ನಿರ್ದೇಶಕರು ಕ್ಷೌರಿಕನ ಸುತ್ತ ಹೆಣೆಯಲಾದ ಈ ಚಿತ್ರ ಹಾಸ್ಯಭರಿತ, ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ಬಿಗ್ಬಾಸ್ ಖ್ಯಾತಿಯ ಚಂದನ್ ಆಚಾರ್, ಲಾಸ್ಯ ನಾಗರಾಜ್, ಜಹಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ನಂದನ್ ರಾಜ್ ಮುಂತಾದವರಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ ವಿ ನಾಗೇಂದ್ರಪ್ರಸಾದ್, ಯುವಿನ್ ಹಾಡುಗಳನ್ನು ರಚಿಸಿದ್ದಾರೆ. ಋತ್ವಿಕ್ ಮುರಳಿಧರ್ ಹಿನ್ನಲೆ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.