ಇಂಡಿ 24: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರರು ಧರ್ಮದ ಅವನತಿಯನ್ನು ಸಹಿಸದೇ ಜಗಜ್ಯೋತಿ ಬಸವೇಶ್ವರರ ನಂತರ ಪರಶಿವನ ಅಪ್ಪಣೆಯ ಮೆರೆಗೆ ಬಂದಂತಹ ಶ್ರೀ ಮರುಳಸಿದ್ದೇಶ್ವರರು ತಾಯಿಯ ಉದರದಿಂದ ಶಿಲೆಯಾಕರದಲ್ಲಿ ಜನಿಸಿ, ಶಿವನಿಂದಲೇ ಮಾನವ ರೂಪ ಪಡದ ಮಾಹಾ ಶರಣರು, ತಡವಲಗಾ ಗ್ರಾಮದಲ್ಲಿ ನೆಲೆಸಿ ಪಾಮರ ಭಕ್ತಾದಿಗಳಿಗೆ ಎಲ್ಲರಿಗೂ ಶಿವಲೀಲಾಮೃತವನ್ನು ಭೋದಿಸಿ ಅನೇಕ ಪವಾಡಗಳನ್ನು ಮಾಡಿದ ಮಾಹಾಮಹಿಮಾತೀತ ಮರುಳಸಿದ್ದೇಶ್ವರರು ಗ್ರಾಮಕ್ಕೆ ಸುಖ, ಶಾಂತಿ, ನೆಮ್ಮದಿ ಸದಾ ಚಿರಾಯುವಾಗಲಿ ಎಂದು ಶಿವನಿಂದ ಅಭಯ ಪಡೆದುಕೊಂಡು ಸಮಸ್ತ ಭಕ್ತರಿಗೆಲ್ಲರಿಗೂ ನಾನೆಲ್ಲೆ ಇದ್ದರೂ ಕೂಡಾ ನಿಮ್ಮೆಲ್ಲರ ರಕ್ಷಣೆಯ ಭಾರ ಶಿವನು ನನ್ನ ಮೇಲೆ ಹಾಕಿದ್ದಾನೆ. ನಿಮ್ಮ ಸುಖ ದುಃಖ ನನ್ನನ್ನೆ ಸೇರಿದೆ.ನೀವು ಧರ್ಮವನ್ನು ಎಲ್ಲಿಯವರೆಗೆ ಕಾಪಾಡುವಿರೋ ಅಲ್ಲಿಯವರೆಗೆ ಶ್ರೀ ಮರುಳಸಿದ್ದೇಶ್ವರರು ನಿಮ್ಮ ಜೊತೆಯಲ್ಲಿರುತ್ತಾರೆ ಎಂದು ಆರ್ಶಿವಾದ ಮಾಡಿದ ಮಹಾ ಶಿವಶರಣರು ಶ್ರೀ ಮರುಳಸಿದ್ದೇಶ್ವರರು.
ಅದರಂತೆ ಇಂದು ತಡವಲಗಾ ಗ್ರಾಮದ ಜೋಡಿಗುಡಿಯ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸುಮಾರು ಮೂವತ್ತು ಐದು ಲಕ್ಷಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರಥ (ಟ್ಟೇರ್) ಕೆಲಸ ಪ್ರಗತಿಯಲ್ಲಿದೆ. ಇಂದು ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ದೇವಾಲಯದಲ್ಲಿ ಪಾದಗಟ್ಟಿ ಪೂಜೆಯನ್ನು ತಡವಲಗಾ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಮುಂಬರುವ ನವೆಂಬರ್ ತಿಂಗಳಲ್ಲಿ ನೂತನ ರಥೋತ್ಸವವನ್ನು ಉಜ್ಜೇನಿಯ ಶ್ರೀ ಶ್ರೀ ಶ್ರೀ 1008 ಜಗದ್ಗುರುಗಳ ಅವರ ದಿವ್ಯ ಸಾನ್ನಿಧ್ಯದಲ್ಲಿ ನೆರವೆರಲಿದೆ.
ಇಂದಿನ ಪಾದಗಟ್ಟಿ ಪೂಜೆಯ ಕಾರ್ಯಕ್ರಮದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ ಎಸ್ ಇಂಡಿ, ಗ್ರಾಮದ ಮುಖಂಡರಾದ ಚಂದ್ರಶೇಖರ ರೂಗಿ ,ಅಶೋಕ ಮಿರ್ಜಿ, ತಮ್ಮಣ್ಣ ಪೂಜಾರಿ, ಕಲ್ಯಾಣಿ ಗಣವಲಗಾ, ಭೀಮರಾಯ ಹಿರಾಪೂರೆ , ಕ್ರೀಷ್ಢಪ್ಪ ಮಿರ್ಜಿ, ಧರೇಪ್ಪ ಅಹಿರಸಂಗ,ಅಶೋಕ ಕಟ್ಟಿ, ಸಂತೋಷ ಸಾರವಾಡ,ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಮಳಸಿದ್ದಪ್ಪ ಖಸ್ಕಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಇಂಡಿ, ಕಾರ್ಯದರ್ಶಿ ಸಹೇಬಗೌಡ ಇಂಡಿ, ಮಲ್ಲಿಕಾರ್ಜುನ ನೇಂದ್ಯಾಳ,ಕುತ್ಬುದ್ದಿನ್ ಬಾಗವಾನ, ಶ್ರೀಶೈಲ ಕಟ್ಟಿ, ವಿಠೋಬಾ ಖಸ್ಕಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.