ಲೋಕದರ್ಶನ ವರದಿ
ತಾಲೂಕು ಆಡಳಿತದಿಂದ ಬಸವ, ಶಂಕರಾಚಾರ್ಯ, ಭಗೀರಥ,ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪೂರ್ವಭಾವಿ ಸಭೆ*
ಹುಬ್ಬಳ್ಳಿ .25: ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿಯಾಗಿ ಏ.30 ರಂದು ಬಸವ ಜಯಂತಿ, ಮೇ.02 ರಂದು, ಶಂಕರಾಚಾರ್ಯ ಜಯಂತಿ,ಮೇ.04 ರಂದು ಭಗೀರಥ, ಜಯಂತಿ, ಮತ್ತು ಮೇ.10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ನಗರ ಗ್ರೇಡ್ 2 ತಹಶೀಲ್ದಾರರಾದ ಜೇ.ವಿ.ಪಾಟೀಲ ಹೇಳಿದರು.
ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಶ್ರೀಬಸವ,ಶ್ರೀ ಶಂಕರಾಚಾರ್ಯ, ಭಗೀರಥ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಆಡಳಿತ ಸಭಾಭವನದಲ್ಲಿ ಏ.30 ರಂದು ಬಸವ ಜಯಂತಿ, ಮೇ.02 ರಂದು, ಶಂಕರಾಚಾರ್ಯ ಜಯಂತಿ,ಮೇ.04 ರಂದು ಶ್ರೀ ಭಗೀರಥ ಜಯಂತಿ, ಮತ್ತು ಮೇ.10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಜಯಂತಿ ಆಚರಣೆ ಮಾಡಲಾಗುತ್ತದೆ. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವದು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು, ಗುರು ಹಿರಿಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.