ನವದೆಹಲಿ 1: ತೈಲ ಮತ್ತು ನೈಸಗರ್ಿಕ ಅನಿಲ ಕಂಪೆನಿ ಒಎನ್ಜಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ 104 ಹೆಚ್ಚುವರಿ ಬಾವಿಗಳನ್ನು ಕೊರೆಯಲು ಅನುಮತಿ ಕೋರಿರುವುದನ್ನು ವಿರೋಧಿಸಿ ತಮಿಳುನಾಡು ರೈತರು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಡಿಎಮ್ಕೆ ಸೇರಿದಂತೆ ತಮಿಳುನಾಡಿನ ರಾಜಕೀಯ ನಾಯಕರನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇoದ್ರ ಪ್ರಧಾನ್ ಸೋಮವಾರ ಮಾತುಕತೆಗೆ ಆಹ್ವಾನಿಸಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಅವರು, ವಿಷಯ ಸಂಬಂಧ ಚರ್ಚೆಗೆ ತಮಿಳುನಾಡು ನಾಯಕರನ್ನು ಆಹ್ವಾನಿಸಲಿದ್ದು, ಒತ್ತಾಯಪೂರ್ವಕವಾಗಿ ಅಲ್ಲಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಡಿಎಂಕೆ ನಾಯಕ ಟಿ.ಆರ್.ಬಾಲು ವಿಷಯ ಪ್ರಸ್ತಾಪಿಸಿ, ಅನೇಕ ರೈತರು ಸಾರ್ವಜನಿಕ ಸಂಸ್ಥೆಯ ನಡೆಗೆ ಪ್ರತಿರೋಧ ವ್ಯಕ್ತಪಡಿಸಿರುವುದನ್ನು ತಿಳಿಸಿದರು. ಇದಕ್ಕೆ ಪೆಟ್ರೋಲಿಯಂ ಖಾತೆ ಸಚಿವರು ಪ್ರತಿಕ್ರಯಿಸಬೇಕು ಎಂದು ಆಗ್ರಹಿಸಿದ್ದು ಕನಿಮೋಳಿ, ಕೆ.ಸುರೇಶ್ ಸೇರಿದಂತೆ ಇತರ ಸಹೋದ್ಯೋಗಿಗಳು ಬೆಂಬಲ ವ್ಯಕ್ತಪಡಿಸಿದರು. ಶೂನ್ಯ ವೇಳೆಯಲ್ಲಿ ಸಚಿವರು ಉತ್ತರಿಸ ಬೇಕೆಂಬ ನಿಯಮವೇನೂ ಇಲ್ಲ. ಆದಾಗ್ಯೂ ಅವರು ಉತ್ತರಿಸಿ ಸಂಬಂಧಪಟ್ಟವರೊಂದಿಗೆ ಸಕರ್ಾರ ಮಾತುಕತೆಗೆ ಸಿದ್ಧವಿದೆ ಎಂದು ತಿಳಿಸಿದರು. ರಾಜ್ಯ ಸ್ವಾಮ್ಯದ ತೈಲ ಮತ್ತು ನೈಸಗರ್ಿಕ ಅನಿಲ ನಿಗಮ ಹೈಡ್ರೋಕಾರ್ಬನ್ ಹೊರತೆಗೆಯಲು 104 ಹೆಚ್ಚುವರಿ ಬಾವಿಗಳನ್ನು ಕೊರೆಯಲು ಕೇಂದ್ರದ ಅನುಮತಿ ಕೋರಿದೆ. ರೈತರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.