ಪ್ರತಿಭೆ ಗುರುತಿಸುವುದು ಶಿಕ್ಷಕರ, ಪಾಲಕರ ಕರ್ತವ್ಯ: ಕಾಗದಗಾರ

ರಾಣೇಬೆನ್ನೂರು:  ಪ್ರತಿಭೆ ಎಂಬುವುದು ಯಾರ ಸೊತ್ತಲ್ಲ. ಸರ್ವರಲ್ಲೂ ಒಂದೊಂದು ಬಗೆಯ ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರನ್ನು ಬೆಳೆಸುವ ಪ್ರಮಾಣಿಕ ಕಾರ್ಯವನ್ನು ಶಿಕ್ಷಕರು ಮತ್ತು ಪಾಲಕರು ಪೋಷಕರು ಮಾಡಬೇಕು ಅಂದಾಗ ಅಂತಹ ವಿದ್ಯಾಥರ್ಿಗಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯವಾಗುತ್ತದೆ ಎಂದು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವ್ಯಂಗ್ಯ ಚಿತ್ರ ಕಲಾವಿದ ನಾಮದೇವ ಕಾಗದಗಾರ ಹೇಳಿದರು.

  ಶುಕ್ರವಾರದಂದು ತಾಲೂಕಿನ ಚೌಡಯ್ಯದಾನಪುರದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು  ಕಾಗದ ಸಾಂಗತ್ತ ವೇದಿಕೆ ರಾಣೇಬೆನ್ನೂರ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಪರಿಸರ ಜಾಗೃತಿ ಕುರಿತು ಶಾಲಾ ಮಕ್ಕಳಿಗೆ ಚಿತ್ರ ಕಲಾ ಸ್ಪದರ್ೆ ಹಾಗೂ ಕಾಗದಗಾರ ಅವರ ಸಾಮಾಜಿಕ ಜಾಗೃತಿ ಬಿಂಬಿಸುವ ವ್ಯಂಗ್ಯ ಚಿತ್ರಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

  ಎಲ್ಲರಲ್ಲೂ ಒಂದೊಂದು ಬಗೆಯ ಕಲೆ ಇರುತ್ತದೆ. ಅದನ್ನು ಮೊಟಕು ಹಾಕದೆ ಹೊರಸೂಸುವ ಪ್ರಯತ್ನ ಮಾಡಬೇಕು. ಚಿತ್ರಕಲೆಯು ಅದೊಂದು ಅದ್ಭುತವಾದ ಕಲೆಯಾಗಿದೆ. ಬರೀ ಗೀಚಾಟದಲ್ಲಿಯೇ ಮಕ್ಕಳು ತಮ್ಮ ಕಲೆಯನ್ನು ಬಿತ್ತರಿಸಬಹುದು. ಗೀಚಾಟದ ಕಲೆಯಿಂದ ಮಕ್ಕಳ ಮಾನಸಿಕ ಒತ್ತಡ ಕಡಿಮೆಯಾಗುವುದರ ಮೂಲಕ ಗೀಚಾಟದಿಂದಲೇ ಉತ್ತಮ ಚಿತ್ರಗಳನ್ನು ರಚಿಸಬಹುದು. ಇಂತಹ ಕೆಲಸಕ್ಕೆ ಪಾಲಕರು ಮತ್ತು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಿ ಪ್ರೆರೇಪಿಸಬೇಕು ಎಂದರು.

  ಸೂಕ್ಷ್ಮಾಣು ಜೀವಿಗಳ ವಿಜ್ಞಾನಿ ಹರೀಶ ಬಿ.ಜಿ ಮಾತನಾಡಿ, ಪಠ್ಯಪುಸ್ತಕಗಳ ಚಿತ್ರಕ್ಕೆ ಕಲಾವಿದರು ಬೇಕು. ಚಿತ್ರಕಲೆಯಿಂದ ನಮಗಷ್ಟೇಯಲ್ಲ ಸರ್ವರ ಮನಸ್ಸನ್ನೂ ಗೆಲ್ಲುವುದರ ಮೂಲಕ ಅವರನ್ನು ಮೂಕವಿಷ್ಮಯರನ್ನಾಗಿಸುವ ಶಕ್ತಿ ಚಿತ್ರಕಲೆಗಿದೆ. ಸಾಮಾಜಿಕ ಕಳಕಳಿ, ಪರಿಸರ ಜಾಗೃತಿ, ಜನಜಾಗೃತಿ ಹೀಗೆ ನಮ್ಮ ಮುಂದೆ ಹಾದು ಹೋಗುವ ಎಲ್ಲ ವಿಚಾರಗಳ ಕುರಿತು ನಮ್ಮ ಕಲ್ಪನೆಯ ಮೂಲಕ ಚಿತ್ರಗಳನ್ನು ಬಿಡಿಸುವ ಶಕ್ತಿ ಕಲಾವಿದರಿಗೆ ಇರುತ್ತದೆ. ಅಂತಹ ಕಲಾವಿದರನ್ನು ಉಳಿಸಿ ಬೆಳೆಸುವುದರ ಜೊತೆಗೆ ಅವರನ್ನು ಪ್ರೋತ್ಸಾಹಿಸಬೇಕು ಅಂದಾಗ ಕಲಾವಿದರ ಜೊತೆಗೆ ಕಲೆಯೂ ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಗುತ್ತದೆ ಎಂದರು.

  ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ನಾಗನೂರ, ಉಪಾಧ್ಯಕ್ಷೆ ಸುನಿತಾ ಆನಿಶೆಟ್ರ, ಗ್ರಾಪಂ ಸದಸ್ಯರಾದ ಲಕ್ಷ್ಮಣ ದೀಪಾವಳಿ, ವಿಜಯಲಕ್ಷ್ಮಿ ಮಲ್ಲಾಡದ, ಶಂಬುಲಿಂಗಪ್ಪ ಭತ್ತದ, ವಿಜಯಲಕ್ಷ್ಮೀ ಬೆಳವಟಗಿ, ಯಶೋಧ ತೇಲ್ಕರ, ವನಜಾಕ್ಷಿ ಪೂಜಾರ, ಮಂಗಳಾ ಉಪ್ಪಿನ, ಮುಖ್ಯೋಪಾಧ್ಯಾಯ ಎಂ.ಎಸ್.ಹಲಗೇರಿ, ಪ್ರಶಾಂತಯ್ಯ ಹಾಲ್ವಡಿಮಠ, ಬಸವರಾಜ ಭತ್ತದ, ಜಮಾಲಸಾಬ, ಗುಡ್ಡು ಭತ್ತದ, ಚನ್ನವೀರಯ್ಯ ಪೂಜಾರ, ಮಲ್ಲಿಕಾಜರ್ುನ ದೀಪಾವಳಿ, ವೀರಣ್ಣ ಬಡಿಗೇರ, ಕೃಷ್ಣಕುಮಾರ ಎರೇಶೀಮಿ, ರಾಜು ಚಕ್ರಸಾಲಿ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಸಿಬ್ಬಂಧಿವರ್ಗದವರು ಮತ್ತು ಮಕ್ಕಳು ಇದ್ದರು.

  ಇದೇ ಸಂದರ್ಭದಲ್ಲಿ ನಡೆದ ಚಿತ್ರಕಲಾ ಸ್ಪಧರ್ೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಈಶ್ವರ ಗೋ.ದೀಪಾವಳಿ ಪ್ರಥಮ, ಗಗನ ನಾ ದೀಪಾವಳಿ ದ್ವಿತೀಯ, ಪುಟಪ್ಪ ಫ ಹೊನ್ನತ್ತಿ ತೃತಿಯ ಸ್ಥಾನ ಪಡೆದರು. ಹೈಸ್ಕೂಲ್ ವಿಭಾಗದಲ್ಲಿ ವಿನಾಯಕ ಗೋ ಕಾಗದಗಾರ ಪ್ರಥಮ, ಅಕ್ಕಮ್ಮ ಈ ಲಮಾಣಿ ದ್ವಿತೀಯ, ಶಿವಕುಮಾರ ವಡ್ಡರ ತೃತೀಯ ಸ್ಥಾನ ಪಡೆದರು.