ಗದಗ 05: ಜಾಗತಿಕ ವ್ಯವಸ್ಥೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ, ಸಾಮಾಜಿಕ, ಆರ್ಥಿ ಕ ವ್ಯವಸ್ಥೆಗೆ ಅನುಗುಣವಾಗಿ ದೇಶದ ಭವಿಷ್ಯಕ್ಕಾಗಿ ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ಗಂಭೀರವಾಗಿ ನಿರ್ವಹಿಸಬೇಕು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ನುಡಿದರು.
ಗದುಗಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 131 ನೇ ಜನ್ಮ ದಿನಾಚರಣೆ ಅಂಗವಾಗಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ರಂಗದ ವ್ಯಕ್ತಿಗಳಿಗೆ ಪರ್ಯಾಯವಿದೆ ಆದರೆ ಎಂತಹುದೇ ತಂತ್ರಜ್ಞಾನ ವ್ಯವಸ್ಥೆ ಇದ್ದರೂ ನಿಜವಾದ ಶಿಕ್ಷಕನ ಸ್ಥಾನಕ್ಕೆ ಪರ್ಯಾಯವಿಲ್ಲ. ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಗೆ ತಕ್ಕಂತೆ ಹೊಸ ಹೊಸ ರೀತಿಯಲ್ಲಿ ಮಕ್ಕಳ ಇಂದಿನ ಪ್ರತಿಭೆಗೆ ಅನುಗುಣವಾಗಿ ಪಠ್ಯದ ಹೊರತಾಗಿ ಸಾಂಸ್ಕೃತಿಕ ಕ್ರೀಡೆ , ಕಲೆ, ಸಾಮಾಜಿಕ , ಆಥರ್ಿಕ ರಂಗಗಳ ಬದಲಾವಣೆ ಅವುಗಳ ಬೇಡಿಕೆ ಗಮನದಲ್ಲಿಟ್ಟುಕೊಂಡು ವಿದ್ಯಾಥರ್ಿಗಳು ಶಿಕ್ಷಣ, ಅನುಭವ ಪಡೆಯುವಂತೆ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಸತತವಾಗಿ ಪ್ರಯತ್ನಿಸಬೇಕು. ಪ್ರತಿಯೊಬ್ಬ ಶಿಕ್ಷಕರು ರಾಷ್ಟ್ರಕ್ಕೆ ಒಳ್ಳೆಯ ನಾಗರಿಕರನ್ನು ನೀಡುವ ಮೂಲಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸುವಂತಾಗಬೇಕು ಎಂದು ನುಡಿದ ಸಚಿವ ಸಿ.ಸಿ.ಪಾಟೀಲ ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಬಹಳಷ್ಟು ಸುಧಾರಣೆ ಆಗಬೇಕಿದ್ದು ಅದಕ್ಕೆ ಅಗತ್ಯದ ಪೂರ್ವಭಾವಿ ಕ್ರಮಗಳನ್ನು ತಪ್ಪದೇ ಕೈಕೊಳ್ಳಲು ಸೂಚಿಸಿದರು. ಜಿಲ್ಲೆಯ ಶಿಕ್ಷಕರ ಕುಂದುಕೊರತೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪ್ರಾಮಾಣಿಕತೆಯಿಂದ ಬೋಧನೆ ಮಾಡಬೇಕು. ವಿಷಯದ ಮೇಲೆ ಪ್ರಭುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರಿಗೆ ಬೋಧನಾ ಕೌಶಲ್ಯ ಬಹಳ ಮುಖ್ಯ. ಪ್ರಶಸ್ತಿಯನ್ನು ಯಾರೂ ಬೆನ್ನತ್ತಿ ಹೋಗಬಾರದು. ಪ್ರಶಸ್ತಿ ನಿಮ್ಮ ಮನೆಗೆ ಬರುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಧಾರಣೆಯನ್ನು ಪ್ರತಿಯೊಬ್ಬ ಶಿಕ್ಷಕರುಅಳವಡಿಸಿಕೊಳ್ಳಬೇಕು. ದೇಶದ ಸಂಸ್ಕೃತಿಯನ್ನು ಬೆಳೆಸುವಂತೆ ಶಿಕ್ಷಕರು ಮುಂದಾಗಬೇಕು. ಜಿಲ್ಲೆಯ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಮುಂದಾಗಬೇಕೆಂದು ತಿಳಿಸಿದರು.
ವಿ.ಡಿ.ಎಸ್.ಟಿ.ಸಿ. ಪದವಿ ಪೂರ್ವ ಕಾಲೇಜ ಉಪನ್ಯಾಸಕ ದತ್ತಪ್ರಸನ್ನ ಪಾಟೀಲ ಉಪನ್ಯಾಸ ನೀಡಿ ಇಂದಿನ ದಿನಮಾನಗಳಲ್ಲಿ ವಿದ್ಯಾಥರ್ಿಗಳು ಸಾಮಾಜಿಕ ಜಾಲತಾಣಕ್ಕೆ ದಾಸರಾಗಿದ್ದಾರೆ. ಹಾಗಾಗಿ ಮಕ್ಕಳಿಗೆ ಉತ್ತಮ ಜ್ಞಾನವನ್ನು ನೀಡಬೇಕು. ರಾಧಾಕೃಷ್ಣನ್ ರಲ್ಲಿ ಇರುವಂತಹ ಜ್ಞಾನವನ್ನು ಪ್ರತಿಯೊಬ್ಬ ಶಿಕ್ಷಕರು ಅಳವಡಿಸಿಕೊಳ್ಳಬೇಕು. ಇಂದಿನ ಸಮಾಜದ ಎಲ್ಲ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪಂಚಾಯತ್ ಪ್ರಭಾರಿ ಅಧ್ಯಕ್ಷೆ ಶಕುಂತಲಾ ಮೂಲಿಮನಿ ಅವರು ಮಾತನಾಡಿ ಶಿಕ್ಷಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢ ರಾಗಿರಬೇಕು. ವಿದ್ಯಾರ್ಥಿಗಳಿಗೆ ಉನ್ನತವಾದ ಶಿಕ್ಷಣವನ್ನು ನೀಡಬೇಕು. ಶಿಕ್ಷಕರು ಒತ್ತಡದಿಂದ ಮುಕ್ತರಾಗಬೇಕು. ಶಿಕ್ಷಕರು ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಕುಂತಲಾ ಮೂಲಿಮನಿ ತಿಳಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಜ್ಞಾನವನ್ನು ಹೊಂದಿರುವರು ಭಗವಂತನಿಗಿಂತ ಶ್ರೇಷ್ಟರಾದವರು. ಸಮಾಜದಲ್ಲಿ ಗುರುವಿನ ಸ್ಥಾನ ಬಹಳ ಶ್ರೇಷ್ಟವಾದದದ್ದು. ಶಿಕ್ಷಕರು ರಚನಾತ್ಮಕ ಸೇವೆ ಸಲ್ಲಿಸುವುದರ ಜೊತೆಗೆ ಮಕ್ಕಳಿಗೆ ಪ್ರೇರಣೆ ನೀಡಬೇಕು. ಜಿಲ್ಲೆಯಲ್ಲಿ ಫಲಿತಾಂಶ ಉನ್ನತ ಸ್ಥಾನಕ್ಕೆ ಹೋಗಲು ಶಿಕ್ಷಕರು ಮಕ್ಕಳಿಗೆ ಉತ್ತಮವಾದ ಬೋಧನೆ ನೀಡಬೇಕು ಎಂದು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್.ಎಚ. ನಾಗೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಜಿಲ್ಲೆಯ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಜಿಲ್ಲಾ ಪ್ರಶಸ್ತಿ, ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು.
ಗದಗ ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಡಗೌಡ್ರ ,ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್.ಪಾಟೀಲ, ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ, ಡಯಟ್ ಉಪನಿರ್ದೇಶಕ ಎಚ್.ಎಂ. ಖಾನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎ. ರಡ್ಡೇರ, ಎಸ್.ಎಸ್. ಕೆಳದಿಮಠ, ಗದಗ ತಹಶೀಲ್ದಾರ ಶ್ರೀನಿವಾಸ ಮೂರ್ತಿ , ಟಿ.ಇ.ಓ ಡಾ. ಜನಗಿ, ಜಿಲ್ಲೆಯ ಶಿಕ್ಷಕರ ವಿವಿಧ ಸಂಘಟನೆಗಳ ಜಿಲ್ಲಾ, ತಾಲೂಕಾ ಅಧ್ಯಕ್ಷರು, ಪ್ರಧಾನ ಕಾರ್ಯದಶರ್ಿಗಳು, ಸಂಚಾಲಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಮಾರಂಭದಲ್ಲಿ ಭಾಗವಹಿಸಿದ್ದರು.