ಬೆಳಗಾವಿ, 19: ಬೂತ್ ಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿವಸ ಆಚರಿಸುವುದರ ಜೊತೆಗೆ ಮತದಾನ ಮಹತ್ವ ಸಾರುವ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕೆಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್. ರಾಮಚಂದ್ರನ್ ತಿಳಿಸಿದರು.
ಅವರು ಶುಕ್ರವಾರ(ಜ.18)ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಎಲ್ಲಾ ಸ್ವೀಪ್ ಸದಸ್ಯರಿಗೆ 9ನೇ "ರಾಷ್ಟ್ರೀಯ ಮತದಾರರ ದಿನಾಚರಣೆ" ಆಚರಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿ, ಹೊಸದಾಗಿ ನೊಂದಣಿಯಾಗಿರುವ ಮತದಾರರನ್ನು ಸನ್ಮಾನಿಸಬೇಕು. ಮತದಾನಕ್ಕೆ ಸಬಂಧಿಸಿದ ಪೋಸ್ಟರ್ ಮತ್ತು ಬ್ಯಾನರಗಳನ್ನು ಕಚೇರಿಯಲ್ಲಿ ಪ್ರದಶರ್ಿಸಬೇಕು ಮತ್ತು ಮತದಾರರ ಸಾಕ್ಷರತಾ ಕ್ಲಬ್ ರಚಿಸಿಕೊಳ್ಳಬೇಕು ಹಾಗೂ ಗಣರಾಜ್ಯೊತ್ಸವ ದಿನದಂದು "ಓಠ ಗಿಠಣಜಡಿ ಣಠ ಟಜಜಿಣ ಛಜಟಿಜ" ಎಂಬ ಪರಿಕಲ್ಪನೆಯ ಟ್ಯಾಬ್ಲೋ ಪ್ರದಶರ್ಿಸಬೇಕೆಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ ಕುರೇರ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಧಿಕಾರಿ ಶಂಕರಾನಂದ ಬನಶಂಕರಿ, ಬೆಳಗಾವಿ ಡಿ.ಡಿ.ಪಿ.ಐ. ಹಾಗೂ ಇತರರು ಹಾಜರಿದ್ದರು.