ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ


ಮೂಡಲಗಿ: ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಠಾನದಿಂದ 'ಭಜನಾ ರತ್ನ' ರಾಮಚಂದ್ರಪ್ಪ ಮುಕ್ಕಣ್ಣವರ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತವಾಗಿ ಆ. 12ರಂದು ಬೆಳಿಗ್ಗೆ 9ಕ್ಕೆ ಅನುಭಾವ ಗೋಷ್ಠಿ ಹಾಗೂ ಭಜನಾ ಸಮ್ಮೇಳನವು ಸಮೀಪದ ಗುಜನಟ್ಟಿ ಗ್ರಾಮದ ಸಿದ್ಧಾರೂಢಮಠದ ಆವರಣದಲ್ಲಿ ಜರುಗಲಿದೆ. 

ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ, ಪಾಲಭಾವಿಯ ಲೀಲಾವದೂತ ಶಿವಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯವಹಿಸುವರು. 

ಗದಗದ ಶಿವಾನಂದಮಠದ ಉತ್ತರಾಧಿಕಾರಿ ವೈವಲ್ಯಾನಂದ ಸ್ವಾಮೀಜಿ ಅವರಿಗೆ ಸನ್ಮಾನ ಇರುವುದು. ಮುಖ್ಯ ಅತಿಥಿಗಳಾಗಿ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ, ಹಡಗಿನಾಳದ ಮಲ್ಲೇಶ್ವರ ಶರಣರು ಭಾಗವಹಿಸುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ಮುಕ್ಕಣ್ಣವರ ಹಾಗೂ ಪ್ರಧಾನ ಕಾರ್ಯದಶರ್ಿ ಜಯಾನಂದ ಮಾದರ ತಿಳಿಸಿದ್ದಾರೆ.

ಭಜನಾ ಸಮ್ಮೇಳನ: 'ಗಾನ ಸುಧಾಕರ' ಮಹಾದೇವಪ್ಪ ಹುಲ್ಯಾಳ ಇವರ ನೇತೃತ್ವದಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸುವ ಭಜನಾ ಕಲಾವಿದರಿಂದ ಸಂಜೆಯವರೆಗೆ ಭಜನೆ 

ನಡೆಯುವುದು.