ವಿಜಯಪುರ: 07- ವಿಜಯಪುರ ಶ್ರೀ ಸಿದ್ದೇಶ್ವರ ಸಂಸ್ಥೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆ ವತಿಯಿಂದ ಇದೇ ಡಿಸೆಂಬರ್ 24ರಿಂದ 31ರವರೆಗೆ ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಶ್ರೀರಾಮನಗೌಡ ಬಾಪುಗೌಡ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಅವಶ್ಯಕ ಸಹಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತೋಟಗಾರಿಕೆ ಖಾತೆ ಸಚಿವರಾದ ಎಂ.ಸಿ.ಮನಗೂಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಭಾರತದ ಸಂಸ್ಕೃತಿ ವೃದ್ದಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವದಿಂದ ಜನರ ಸಾಮಾಜಿಕ ಶೈಕ್ಷಣಿಕ ಅಭಿವೃದ್ದಿಗೆ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದಯುತವಾಗಿ ಬದುಕಲು ಅವಕಾಶ ಕಲ್ಪಿಸುವ ಇಂತಹ ಉತ್ಸವಗಳಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರೊತ್ಸಾಹ ನೀಡುವ ಅವಶ್ಯಕತೆ ಇದ್ದು, ಈ ಉತ್ಸವದ ಯಶಸ್ವಿಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪಕ್ಷಭೇದ, ಜಾತಿ, ಮತ, ಪಂಥ, ಬೇಧ ಮರೆತು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಇದೇ ಡಿಸೆಂಬರ್ 24ರಂದು ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ ವಿಜಯಪುರ ನಗರದಲ್ಲಿ ಬೃಹತ್ ಶೋಭಾಯಾತ್ರೆ ಸ್ತಭ್ಧಚಿತ್ರ ಪ್ರದರ್ಶನ, ಜಾನಪದ ಹಾಗೂ ದೇಶಿಯ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾತಂಡಗಳ ವೈಭವ ಮೆರವಣಿಗೆ ಮತ್ತು ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಡಿಸೆಂಬರ್ 25ರಂದು ತಾಯಿ ಮತ್ತು ಮಗುವಿನ ಬಾಂಧ್ಯವ್ಯ ಬೆಸೆಯುವ ಮಾತೃಸಂಗಮ ಕಾರ್ಯಕ್ರಮದ ಅಂಗವಾಗಿ 1ಲಕ್ಷ ಮಕ್ಕಳಿಗೆ ಭೋಜನ ಹಾಗೂ ಮಕ್ಕಳಿಂದ ಮಾತೆಯರಿಗೆ ಪಾದಪೂಜೆ, ವಿಶೇಷ ಚಚರ್ೆ, ಗೋಷ್ಠಿಗಳು ನಡೆಯಲಿವೆ.
ಡಿಸೆಂಬರ್ 26ರಂದು ಜ್ಞಾನದ ಪ್ರಾಮುಖ್ಯತೆ ತಿಳಿ ಹೇಳುವ ಜ್ಞಾನ ಸಂಗಮ, ಡಿ.27ರಂದು ಭಾರತೀಯ ಕೃಷಿ ಪದ್ಧತಿ ಗೋ ಸಂವರ್ಧನೆ, ಆಥರ್ಿಕ ಸ್ವಾವಲಂಬನೆ, ಕೃಷಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಅರಿತು ನಿವಾರಿಸುವ ಕೃಷಿ ಸಂಗಮ, ಡಿ.28ರಂದು ಸಾತ್ವಿಕ ಜೀವನ ನಡೆಸುವ ಕುರಿತಂತೆ ಯುವಜನಾಂಗದಲ್ಲಿ ಅರಿವು ಮೂಡಿಸುವ ಯುವ ಸಂಗಮ, ಡಿ.29ರಂದು ದೇಶ ನಿಮರ್ಿಸುವಲ್ಲಿ ಕಾಯಕ ಮತ್ತು ಆರೋಗ್ಯದ ಮಹತ್ವ ತಿಳಿಹೇಳುವ ಕಾರ್ಯಕ್ರಮ, ಡಿ.30ರಂದು ನನ್ನ ಹಳ್ಳಿ, ನನ್ನ ದೇಶ ಕುರಿತ ಗ್ರಾಮ ಸಂಗಮ ಹಾಗೂ ಡಿ.31 ರಂದು ಧರ್ಮ ಮತ್ತು ಸಂಸ್ಕೃತಿಯಿಂದ ಬದುಕಿ ಜೀವನ ಮೌಲ್ಯ ಹೆಚ್ಚಿಸುವ ಕಾರ್ಯಕ್ರಮ, ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಗೋಷ್ಠಿಗೆ-1, ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-2, ಸಂವಾದ, ಪ್ರಶಸ್ತಿ ಪ್ರದಾನ, ಸನ್ಮಾನ, ಸಂಜೆ 5-30ರಿಂದ ದೇಶದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು
ಅದರಂತೆ ಮಹತ್ವದ ಈ ಕಾರ್ಯಕ್ರಮಗಳಲ್ಲಿ ದೇಶದ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ವಜುಭಾಯಿ ವಾಲಾ, ಸಿ.ವಿದ್ಯಾಸಾಗರ ರಾವ್, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಅದರಂತೆ ವಿವಿಧ ಮಠ-ಮಾನ್ಯಗಳ ಶ್ರೀಗಳು ಸಹ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪಶು ಸಂಗೋಪನಾ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸಿದ್ದೇಶ್ವರ ಸಂಸ್ಥೆಯ ಸಂಗು ಸಜ್ಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.