ಆಶ್ರಯ ನಿವೇಶನಗಳಿಗಾಗಿ ಖಾಸಗಿ ಜಮೀನು ಮಾಲೀಕರೊಂದಿಗೆ ಸಚಿವರ ಸಭೆ ಯಶಸ್ವಿ

ಗದಗ :  ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ನಿದರ್ೇಶನಗಳಿಗಾಗಿ ನರಗುಂದ ಪುರಸಭೆಗೆ ಅಗತ್ಯವಿರುವ ಖಾಸಗಿ ಜಮೀನು ಖರೀದಿಗೆ ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಹಾಗೂ ಗದಗ ಜಿಲ್ಲೆ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸಂಧಾನ ಸಭೆ ಜರುಗಿಸಿದರು. 

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಭೆಯಲ್ಲಿ ಎಂ.ಜಿ.ಹಿರೇಮಠ,  ಪ್ರಭಾರ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ನಗರಾಭಿವೃದ್ದಿ ಕೋಶ ಯೋಜನಾ ನಿದರ್ೇಶಕ ರುದ್ರೇಶ ಎಸ್. ಎನ್. ಹಾಗೂ 27 ಜಮೀನು ಮಾಲೀಕರುಗಳು ಸಭೆಯಲ್ಗಿ ಭಾಗವಹಿಸಿದ್ದರು. 

ರಾಜ್ಯ ಸರ್ಕಾರದ  ನಿರ್ದೇಶನ ಹಾಗೂ ನಿಯಮಾನುಸಾರ  ಜಮೀನು ಖರೀದಿ ಕುರಿತಂತೆ ಜಮೀನು ಮಾಲೀಕರೊಂದಿಗೆ ಚರ್ಚೆ ನಡೆಸಿದ ಸಚಿವ ಸಿ.ಸಿ.ಪಾಟೀಲ ಅಂದಾಜು 150 ಎಕರೆ ಜಮೀನು ಖರೀದಿ ಅವಶ್ಯಕವಾಗಿದೆ. ನರಗುಂದ ಪಟ್ಟಣದ ವಸತಿ ರಹಿತ  ಕುಟುಂಬಗಳಿಗೆ ಆಸರೆ ನೀಡುವ ಪೂಣ್ಯದ ಕೆಲಸವಾಗಿದೆ.  ರಾಜ್ಯ ಸರ್ಕಾರವು ಕೂಡ ಮಾರುಕಟ್ಟೆಗಿಂತಲೂ ಉತ್ತನ ದರ ನೀಡಲು ನಿಯಮಗಳನ್ವಯ ಅವಕಾಶ ನೀಡಿದೆ. ಆದುದರಿಂದ ಜಮೀನು ಮಾಲಿಕರು ವಸತಿ ನಿವೇಶನ ಯೋಜನೆಗೆ ಯೋಗ್ಯದರಕ್ಕೆ ಜಮೀನು ನೀಡಲು ಮನವಿ ಮಾಡಿದರು. ಅಂತಿಮವಾಗಿ  ನ್ಯಾಯ ಹಾಗೂ ಸರ್ವಸಮ್ಮತ ದರಕ್ಕೆ ಜಮೀನು ಖರೀದಿಗೆ ಜಮೀನು ಮಾಲೀಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸುವುದರೊಂದಿಗೆ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.