ಟಿಪ್ಪು ಜಯಂತಿ ಕಾರ್ಯಕ್ರಮ, ಬಿಜೆಪಿ ಗದ್ದಲ ಮಾಡಿದ್ದರಿಂದ ಅರ್ಧ ದಿನಕಲಾಪ ಬಲಿ

ಬೆಳಗಾವಿ, ಡಿ.13-ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೆದಿನವಾದಇಂದು ವಿಧಾನ ಪರಿಷತ್ಕಲಾಪದಲ್ಲಿ ಬಿಜೆಪಿ ಸದಸ್ಯರುಟಿಪ್ಪುಜಯಂತಿಕಾರ್ಯಕ್ರಮದಚಚರ್ೆಗೆ ಪಟ್ಟು ಹಿಡಿದುಗದ್ದಲ ಎಬ್ಬಿಸಿ,ಮೂರ್ನಾಲ್ಕುಬಾರಿಧರಣಿ ನಡೆಸಿದ್ದರಿಂದ ಅರ್ಧದಿನದ ಕಲಾಪ ಬಲಿಯಾಯಿತು.

ಪ್ರಶ್ನೋತ್ತರಕಲಾಪದ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕಕೋಟಾ ಶ್ರೀನಿವಾಸ ಪೂಜಾರಿಅವರು, ಟಿಪ್ಪುಜಯಂತಿಆಚರಣೆಯಿಂದಕೊಡಗಿನಜನತೆಯ ಭಾವನೆಗಳಿಗೆ ಧಕ್ಕೆಯುಂಟಾಗಿರುವ ವಿಷಯದಚಚರ್ೆಗೆ ಬಿಜೆಪಿ ಸೂಚನೆ ಕಳುಹಿಸಿತ್ತು.ನಿನ್ನೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ನಿಯಮ 332ರಡಿ ಈ ವಿಷಯಚಚರ್ೆಗೆ ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು.ಆದರೆಇವತ್ತಿನಕಾರ್ಯಕಲಾಪ ಪಟ್ಟಿಯಲ್ಲಿ ಆ ವಿಷಯವೇಇಲ್ಲವಾಗಿದೆಎಂದುಆಕ್ರೋಶ ವ್ಯಕ್ತ ಪಡಿಸಿದರು.ಅದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

ಮುಖ್ಯಮಂತ್ರಿ ಅವರೊಂದಿಗೆಚಚರ್ೆ ನಡೆಸಿ ಉತ್ತರಕೊಡುವುದಾಗಿ ಸಭಾನಾಯಕಿಜಯಮಾಲ ಭರವಸೆ ನೀಡಿದ್ದರೂ, ತೃಪ್ತರಾಗದ ಬಿಜೆಪಿ ಸದಸ್ಯರು ಈಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ ಸಂಜೆಯೊಳಗೆ ಉತ್ತರಕೊಡಿಸಬೇಕುಎಂದುಪಟ್ಟು ಹಿಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ಮಾತಿನಚಕಮಕಿ ನಡೆಯಿತು.ಕೋಟಾ ಶ್ರೀನಿವಾಸಪೂಜಾರಿಅವರು, ಸಕರ್ಾರ ಫಲಾಯನ ಸೂತ್ರ ಅನುಸರಿಸಿದೆ ಎಂದು ಆರೋಪಿಸಿದರೆ, ಬಿಜೆಪಿ ಸದಸ್ಯರುರಾಜಕೀಯ ಮಾಡುತ್ತಿದ್ದಾರೆಎಂದು ಆಡಳಿತ ಪಕ್ಷದ ಸದಸ್ಯರುತಿರುಗೇಟು ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಕೃಷ್ಣಬೈರೇಗೌಡಅವರು, ಬಿಜೆಪಿ ಸದಸ್ಯರು ಹಠ ಮಾಡಬಾರದು.ನಾವು ಮುಖ್ಯಮಂತ್ರಿಜೊತೆ ಮಾತುಕತೆ ನಡೆಸಿ ನಿಮಗೆ ಉತ್ತರ ನೀಡುತ್ತೇವೆಎಂದರು, ಬಿಜೆಪಿ ಶಾಸಕರುತಮ್ಮ ಪಟ್ಟು ಸಡಿಲಿಸಲಿಲ್ಲ. ಒಂದು ಹಂತದಲ್ಲಿ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು.

ಧರಣಿ ಹಿಂಪಡೆಯುವಂತೆ ಸಭಾಪತಿ ಮಾಡಿದ ಮನವಿಗೆ ಬಿಜೆಪಿ ಸದಸ್ಯರು ಸ್ಪಂದಿಸಲಿಲ್ಲ. ಗಲಾಟೆ ನಿಯಂತ್ರಣಕ್ಕೆ ಬರದೆಇದ್ದಾಗ ಸಭಾಪತಿಯವರುಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡಿದರು.

ಬೋಜನ ವಿರಾಮದ ನಂತರ ಕಲಾಪ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರುತಮ್ಮಧರಣಿಯನ್ನು ಮುಂದುವರೆಸಿದರು.ಸಕರ್ಾರದ ಪರವಾಗಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವಅವರು, ಧರಣಿ ನಿರತ ಸದಸ್ಯರುತಮ್ಮ ಸ್ವಸ್ಥಾನಕ್ಕೆ ತೆರಳುವಂತೆ ಮಾಡಿದ ಮನವಿ ವಿಫಲವಾಯಿತು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ನಡೆದು ಸದನದ ಹಾದಿ ದಿಕ್ಕು ತಪ್ಪಿದಾಗ ಸಭಾಪತಿಯವರು ಸದನವನ್ನು 10 ನಿಮಿಷಗಳ ಕಾಲ ಮತ್ತೆ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರುಧರಣಿ ಮುಂದುವರೆಸಿದರು.ಸಚಿವಕೃಷ್ಣಬೈರೇಗೌಡಅವರು ಸಕರ್ಾರ ಈ ವಿಚಾರದಲ್ಲಿ ಫಲಾಯನ ಮಾಡುತ್ತದೆ ಎಂಬ ಗ್ರಹಿಕೆ ಸತ್ಯಕ್ಕೆದೂರವಾದದ್ದು.ಸಕರ್ಾರಕ್ಕೆ ಮುಜುಗರತರುವ ಸಮಸ್ಯಇದಲ್ಲ. ಸದನ ನಡೆಸಲು ಅವಕಾಶ ಮಾಡಿಕೊಡಿ.ರೈತ ಸಮಸ್ಯೆ ಮತ್ತುಉತ್ತರಕನರ್ಾಟಕದ ಸಮಸ್ಯೆಗಳ ಬಗ್ಗೆ ಸಾಕಷ್ಟು ಚಚರ್ೆ ನಡೆಸಬೇಕಿದೆ. ಈ ವಿಚಾರವಾಗಿಧರಣಿ ನಡೆಸುವುದುಅನಗತ್ಯ.ಸಕರ್ಾರದಉತ್ತರ ನಿಮಗೆ ತೃಪ್ತಿತರದಿದ್ದರೆ ನಿಮಗೆ ಅನಿಸಿದ್ದನ್ನು ಮಾಡಿ.ಮೊದಲುಧರಣಿ ಕೈ ಬಿಟ್ಟು ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು.

ಪ್ರತಿಪಕ್ಷದ ನಾಯಕಕೋಟಾ ಶ್ರೀನಿವಾಸ ಪೂಜಾರಿ, ಸಕರ್ಾರಕ್ಕೆ ಕಷ್ಟ ಇಲ್ಲಎಂದಾದರೆಉತ್ತರ ನೀಡಲು ಏಕೆ ಇಷ್ಟವಾಗುತ್ತಿಲ್ಲ. ಸಕರ್ಾರ ಈ ಮೊದಲು ಸದನದಲ್ಲಿ ಹೇಳಿದಂತೆ ನಡೆದುಕೊಳ್ಳಿ.ರಾತ್ರಿ 10 ಗಂಟೆಗೆಉತ್ತರಕೊಟ್ಟರೂ ಸರಿ ನಾವು ಕಾಯುತ್ತೇವೆಎಂದು ಹೇಳಿದರು.

ಕೃಷ್ಣಬೈರೇಗೌಡ ಸಕರ್ಾರ ಪಲಾಯನ ಮಾಡುವ ಪ್ರಶ್ನೆಯೇಇಲ್ಲ. ಇನ್ನೂಐದಾರು ದಿನ ಸದನ ನಡೆಯುತ್ತದೆ.ರಾಜಕೀಯ ಲಾಭದ ಲೆಕ್ಕಾಚಾರಇಟ್ಟುಕೊಂಡು ಸದನದ ಒಳಗೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲಎಂದು ಪ್ರತಿವಾಗ್ಧಾಳಿ ನಡೆಸಿದರು.

ಆಗ ಮಧ್ಯ ಪ್ರವೇಶಿಸಿದ ಸಭಾಪತಿಯವರುಧರಣಿ ನಿರತ ಸದಸ್ಯರನ್ನು ಉದ್ದೇಶಿಸಿ ನಿಮಗೆ ಎರಡುಗಂಟೆಕಾಯಲು ಆಗುವುದಿಲ್ಲವೆ. ನಾನು ಸದನ ನಡೆಸುವುದಾದರೂ ಹೇಗೆ.ಮೊದಲು ಸ್ವಸ್ಥಾನಕ್ಕೆ ಬನ್ನಿ ಎಂದು ಹೇಳಿದರು.ಕೋಟಾ ಶ್ರೀನಿವಾಸ ಪೂಜಾರಿಅವರು, ಸಕರ್ಾರ ನಾಟಕಆಡುತ್ತಿದೆ.ದುರ್ಬಲವಾಗಿದೆ. ಪಲಾಯನ ಸೂತ್ರಅನುಸರಿಸುತ್ತಿದೆ ಎನ್ನುತ್ತಿದ್ದಂತೆ ಕಾಂಗ್ರೆಸ್ನಎಚ್.ಎಂ.ರೇವಣ್ಣ, ಐವಾನ್ ಡಿ ಸೋಜಾ, ರಿಜ್ವಾನ್ ಹರ್ಷದ್ ಮತ್ತಿತರರ ಸದಸ್ಯರುಆಕ್ಷೇಪ ವ್ಯಕ್ತ ಪಡಿಸಿದರು.

ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನಚಕಮಕಿ ನಡೆದುಯಾರುಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೆಅರ್ಥವಾಗದ ಪರಿಸ್ಥಿತಿ ನಿಮರ್ಾಣವಾಯಿತು.ಆಗ ಮಧ್ಯ ಪ್ರವೇಶಿಸಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈಗಾಗಲೇ ಟಿಪ್ಪುಜಯಂತಿ ಮುಗಿದಿದೆ.ಸದಸ್ಯರು ತಾಳ್ಮೆಯಿಂದ ಇರಬೇಕು.ಅಧಿವೇಶನದಅವಧಿ ಮುಗಿಯುವುದರ ಒಳಗೆ ಉತ್ತರ ನೀಡುತ್ತೇವೆಎಂದರುಧರಣಿ ನಿರತ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಆಗ ಎದ್ದು ನಿಂತ ಸಭಾಪತಿಅವರು ಸಕರ್ಾರಉತ್ತರ ನೀಡಲಿದೆಎಂದು ಭರವಸೆ ನೀಡಿದರು.ಸಭಾಪತಿಯವರ ಮಾತಿಗೆಗೌರವಕೊಟ್ಟುಧರಣಿ ಕೈ ಬಿಟ್ಟು ವಾಪಾಸಾಗುತ್ತೇವೆ. ಸಕರ್ಾರಉತ್ತರ ನೀಡಲಿ ಎಂದು ಸ್ವಸ್ಥಾನಕ್ಕೆ ತೆರಳಿದರು.

ಬಿಜೆಪಿ ಸದಸ್ಯರುಧರಣಿ ಕೈ ಬಿಟ್ಟು ಮರಳುತ್ತಿರುವ ವೇಳೆ ಆಡಳಿತ ಪಕ್ಷವಾದಕಾಂಗ್ರೆಸ್ನ ಕೆಲ ಶಾಸಕರು ಶೆಮ್ ಶೆಮ್ಎಂದುಕೂಗಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತ್ತು.ಆಗ ಮತ್ತೆಧರಣಿ ನಡೆಸಿದರು.ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಸಭಾಪತಿಯವರು ಮತ್ತೆ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.

ಸದನ ಪುನಃ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರುಧರಣಿ ಮುಂದುವರೆಸಿದರು.ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು.ಕೊನೆಗೆ ಸಭಾಪತಿ ಹಾಗೂ ಸಚಿವರ ಮನವಿಯಿಂದಾಗಿ ಬಿಜೆಪಿ ಸದಸ್ಯರುಧರಣಿ ಹಿಂಪಡೆದುಕಲಾಪದಲ್ಲಿ ಭಾಗವಹಿಸಿದರು.