ಸಂಬರಗಿ, 07 : ತಾಂವಶಿ ಗ್ರಾಮದ ಕಾಂಗ್ರೇಸ್ ಮುಖಂಡರು ಹಾಗೂ ಸಂಬರಗಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯರಾದ ಬಂಗಾರೆವ್ವಾ ಐಹೊಳೆ ಹಾಗೂ ಚಿಕ್ಕೋಡಿ ಲೋಕಸಭಾ ಪಕ್ಷ ಕಾಂಗ್ರೇಸ್ ಪಕ್ಷದ ಮಾಧ್ಯಮ ಪ್ರತಿನಿಧಿ ರಾವಸಾಹೇಬ ಐಹೊಳೆ ಇವರ ಹಸ್ತದಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕೀಹೊಳೆ ಇವರನ್ನು ಸತ್ಕರಿಸಲಾಯಿತು.
ಈ ವೇಳೆ ರಾವಸಾಹೇಬ ಐಹೊಳೆ ಮಾತನಾಡಿ ಗಡಿ ಭಾಗದ ಹಲವು ಸಮಸ್ಯೆ ಇದ್ದು, ನೀರಾವರಿ ಯೋಜನೆ ಕುರಿತು ಬಿಳಂಬವಾಗುತ್ತಿರುವ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭಮಾಡಿ ನಿರಾವರಿ ಯೋಜನೆಗೆ ಆಧ್ಯತೆನೀಡಿ ಗಡಿ ಭಾಗದ ಬರಗಾಲದ ಹಣೆಪಟ್ಟಿ ಅಳಿಸಬೇಕೆಂದು ಅವರು ವಿನಂತಿಸಿದರು.
ಈ ವೇಳೆ ಪೂರ್ವ ಸಭೇಯ ಸದಸ್ಯರಾದ ಶ್ರೀಮತಿ ವಿದ್ಯಾ ಐಹೊಳೆ, ಕಾಂಗ್ರೇಸ್ ಮುಖಂಡ ವೈಭವ ಐಹೊಳೆ, ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸಚಿನ ಬುಟಾಳಿ, ಕುಮಾರ ಗಸ್ತಿ, ಹಣಮಂತ ಅರ್ದಾಊರ ಇನ್ನೀತರರು ಉಪಸ್ಥಿತರಿದ್ದರು.