ಈಶಾನ್ಯ ವಲಯಮಟ್ಟದ ಕ್ರೀಡಾಕೂಟದ ಸಮಾರೋಪ
ಬಳ್ಳಾರಿ:ಜಿಲ್ಲಾ ಗೃಹರಕ್ಷಕದಳ ವತಿಯಿಂದ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಗೃಹರಕ್ಷಕರ ಈಶಾನ್ಯ ವಲಯಮಟ್ಟದ ವೃತ್ತಿಪರ ಹಾಗೂ ಕ್ರೀಡಾ ಕೂಟದ ಸಮಾರೋಪ ಸಮಾರಂಭ ನಡೆಯಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಮಹಾ ನಿರೀಕ್ಷಕರಾದ ನಂಜುಡಯ್ಯಸ್ವಾಮಿ ಅವರು ಈಶಾನ್ಯ ವಲಯದ ಆರು ಜಿಲ್ಲೆಗಳಿಂದ ಗೃಹರಕ್ಷಕರು ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ನಿದರ್ೆಶಕರಾದ ಡಾ.ಬಿ.ದೇವಾನಂದ ಅವರು ಮಾತನಾಡಿ, ಗೃಹರಕ್ಷಕರು ನಿಮ್ಮ ಕರ್ತವ್ಯ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಸಂತೋಷ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ಷಕೀಬ್ ಮಾತನಾಡಿ, ಈಶಾನ್ಯವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಆರು ಜಿಲ್ಲೆಗಳ ಗೃಹರಕ್ಷಕ ತಂಡಗಳಿಗೆ ಶುಭಕೋರುತ್ತಾ ರಾಜ್ಯಮಟ್ಟದಲ್ಲಿ ಚಾಂಪಿಯನ್ ಶಿಪ್ನ್ನು ಈಶಾನ್ಯ ವಲಯಕ್ಕೆ ತರುವಂತೆ ಗೃಹರಕ್ಷಕರಿಗೆ ಕರೆ ನೀಡಿದರು.
ಎಲ್ಲಾ ಆಟೋಟಗಳಲ್ಲಿ ಉತ್ತಮ ಸಾಧನೆ ಮಾಡಿರುವ ಬಳ್ಳಾರಿ ಜಿಲ್ಲಾ ಗೃಹರಕ್ಷಕರ ತಂಡಕ್ಕೆ ವಲಯ ಮಟ್ಟದ ಚಾಂಪಿಯನ್ ಶಿಫ್ ಟ್ರೋಫಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಸೆಕೆಂಡ್ ಇನ್ ಕಮಾಂಡ್ ಎನ್.ಎಸ್.ಲಕ್ಷ್ಮೀ ನರಸಿಂಹ, ನಿವೃತ್ತ ಬೊಧಕರಾದ ಎನ್.ಎನ್.ಪಾಟೀಲ್, ನಿವೃತ್ತ ಉಪ ಸಮಾದೇಷ್ಟರಾದ ಚಂದ್ರಶೇಖರ್ ಭಡಗಲ್, ಬೋಧಕರಾದ ಹೆಚ್.ತಿಪ್ಪೇಸ್ವಾಮಿ, ಗೃಹರಕ್ಷಕದಳದ ಪ್ರ.ದ.ಸ ಬಿ.ಎನ್.ಗೋಪಿನಾಥ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಹಾಗೂ ಕೊಪ್ಪಳ ರಾಯಚೂರು ಯಾದಗಿರಿ ಕಲಬುರಗಿ ಬೀದರ್ ಜಿಲ್ಲೆಯ ಅಧಿಕಾರಿಗಳು ಮತ್ತು 215 ಪುರುಷ ಮತ್ತು ಮಹಿಳಾ ಗೃಹರಕ್ಷಕರು ಭಾಗವಹಿಸಿದರು.