ಭಾರತೀಯರ ನಿತ್ಯ ಜೀವನದಲ್ಲಿಯೇ ಹಾಸ್ಯ ಹಾಸುಹೊಕ್ಕಾಗಿದೆ

ಲೋಕದರ್ಶನ ವರದಿ

ಬೆಳಗಾವಿ 12- ಭಾರತೀಯರಿಗೆ ನಗಲು ಬರುವುದಿಲ್ಲ. ಇವರು ಕೇವಲ ಟೂಥಫ್ರೇಶ್ಗೆ ಮಾತ್ರ ತಮ್ಮ ಹಲ್ಲುಗಳನ್ನು ತೋರಿಸುವವರು ಎಂಬ ಟೀಕೆಯಿತ್ತು. ಅದುಸುಳ್ಳು. ಭಾರತೀಯರು ನಗಬಲ್ಲರು ನಗಿಸಲಬಲ್ಲರು. ಜಾನಪದ ಸಾಹತ್ಯ, ಒಡಪುಗಳನ್ನು ಗಮನಿಸಿದಾಗ ಅಲ್ಲದೇ ನಮ್ಮ ಪುರಾಣ ಕಥೆ ಹಾಗೂ ಕೀರ್ತನಕಾರರ ಅಡಗತೆಗಳನ್ನು ಗಮನಿಸಿದಾಗ ನಗೆಯೆನ್ನುವುದು ಭಾರತೀಯರ ನಿತ್ಯ ಜೀವನದಲ್ಲಿಯೇ ಹಾಸ್ಯ ಹಾಸಹೊಕ್ಕಾಗಿರುವುದು ಗೊತ್ತಾಗುತ್ತದೆ. ಎಂದು ಹಿರಿಯ ಕವಿಗಳಾದ ಡಾ| ಜಿನದತ್ತ ದೇಸಾಯಿಯವರು ಇಂದಿಲ್ಲಿ ಹೇಳಿದರು.

ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ "ವಿದೇಶ ವಿನೋದ" ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ  ಡಾ. ಜಿನದತ್ತ ದೇಸಾಯಿಯವರು ಇಂದಿಲ್ಲಿ ಹೇಳಿದರು. ಸುಮಾರು ಐವತ್ತು ವರ್ಷಗಳ ಹಿಂದೆ ಯುರೋಪ ಪ್ರವಾಸ ಮಾಡಿದಾಗಿನ ಹಾಸ್ಯ ಅನುಭವಗಳನ್ನು ಹಂಚಿಕೊಳ್ಳುತ್ತ ಅವರು ಅಂದಿನ ದಿನಗಳಲ್ಲಿ ನಾವು  ವಿದೇಶಕ್ಕೆ ಹೋಗುವುದೆ ನಮ್ಮ  ಬಳಗದಲ್ಲಿ, ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಸಂಭ್ರಮವನುಂಟು ಮಾಡಿತ್ತು. ಅನೇಕ ಸಂಘ ಸಂಸ್ಥೆಗಳು ನಮಗೆ ಶಾಲುಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವಿಸಿದವು. ವಿಚಿತ್ರವೆಂದರೆ ದೆಹಲಿಗೆ ಹೋದನಂತರ ಪಾಸಪೂರ್ಟ, ವೀಸಾ ಖಚಿತವಾಗುತ್ತಿತ್ತು.  ವೀಸಾ ಸಿಗದೇ ಎಲ್ಲಿ ಮರಳುವುದಾಗುತ್ತದೆಯೋ ಎಂಬ ಅಳಕು ಕಾಡುತ್ತಲಿತ್ತು. ಯಾರೋ ಕೇಳಿದರು ನಿಮಗೆ ವೀಸಾ ಸಿಗದೇ ಏನು ಮಾಡ್ತಿರಾ ಅಂತಾ ಅದಕ್ಕೆ ನಾ ಸಂಘಸಂಸ್ಥೆಯವರ ಶಾಲು ಮಾಲೆ ಖಂಡೀತವಾಗಿ ಮರಳಸ್ತೀವಿ ಎಂಬ ಮಾತನು ಹೇಳಿ ಜನರಲ್ಲಿ ನಗೆಯಲೆ ಎಬ್ಬಿಸಿದರು. ಪ್ರೊ ಜಿ. ಕೆ. ಕುಲಕಣರ್ಿ ನಾನು ಲಂಡನ್ ಕ್ಕೆ ಹೋಗಿದ್ದೆ ಅಲ್ಲಿ ಅನುಭವದಂತೆ ಅಲ್ಲಿ ಕಾರಿನಲ್ಲಿರುವ ಜನ ಪಾದಾಚಾರಿಗಳನ್ನ ಗೌರವಿಸುತ್ತಾರೆ. ಅಲ್ಲದೇ ನಗುಮೊಗದ ಸಂಸ್ಕೃತಿಯನ್ನು ಅವರಿಂದ ನೋಡಿ ಕಲಿಯಬೇಕು. ಪರಿಚಯವಿರಲಿ, ಇಲ್ಲದಿರಲಿ ಎಲ್ಲರನೂ ನೋಡಿದೊಡೆ ನಗುವಿನಿಂದ 'ಹಾಯ್ ಅಂತಾ ಹೇಳುತ್ತಾರೆ.  ಬಹುಷಃ ಅವರ ಮುಖದಲ್ಲಿರುವ ನಗುವೇ ಅವರನ್ನು ಲವಲವಿಕೆ ಹಾಗೂ ಆರೋಗ್ಯವಂತರನ್ನಾಗಿ  ಇಟ್ಟಿದೆ ಎಂದು ಹೇಳಿದ ಅವರು  ವಿದೇಶದಲ್ಲಿ ಜರುಗಿದ ವಿನೋದ ಪ್ರಸಂಗಗಳನ್ನು ಹಂಚಿಕೊಂಡು ಅರ್ಧಗಂಟೆಗಳ ಕಾಲ ಜನರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾದರು.

ಪ್ರಾಯೋಜಕತ್ವ ವಹಿಸಿದ್ದ ಹುಕ್ಕೇರಿಯ ಗುರುಶಾಂತೇಶ್ವರ ಕಲಾ ಪೋಷಕ ಸಂಘದ ಅಧ್ಯಕ್ಷರಾಗಿರುವ  ಶಿವಾನಂದ ಝಿಲರ್ಿಯವರು  ಕಾರ್ಯಕ್ರಮ ಯಶಸ್ವಿಗೆ ಪ್ರೇಕ್ಷಕರ ಉತ್ಸಾಹವೇ ಕಾರಣ. ನೂರೆಂಟು ಮಾನಸ್ಸಿಕ ಒತ್ತಡಗಳಿಂದ ಕೂಡಿದ ನೂರಾರು ಮನಸ್ಸುಗಳಿಗೆ, ಯಾಂತ್ರಿಕ ಜೀವನದಿಂದ ಬೆಸತ್ತು ಬಂದವರನ್ನು ನಗೆಮಾತುಗಳಿಂದ ಮನಸ್ಸನ್ನು ಅರಳಿಸಿ ಮುದ ನಿಡುತ್ತಿರುವ ಹಾಸ್ಯಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸಿದ್ದನಗೌಡ ಪಾಟೀಲ ಅವರು ಸಿಂಗಾಪೂರ, ಮಲೇಶಿಯಾ ದೇಶಗಳಲ್ಲಿ ಆದ ವಿನೋದ ಪ್ರಸಂಗಗಳನ್ನು ಹೇಳಿ ಜನರನ್ನು ಜಗೆಗಡಲಲ್ಲಿ ತೇಲಿಸಿದರು. ಎಸ್. ವಿ. ದೀಕ್ಷಿತ ಹೊರದೇಶಕ್ಕೆ ಹೋಗುವವರೆ ಅನಕೂಲವಾಗುವಂಥ ಹಲವಾರು ವಿಷಯಗಳನ್ನು ತಮ್ಮ ಲಘುವಾದ ಹಾಸ್ಯದೊಂದಿಗೆ ಎಲ್ಲರಿಗೂ ತಿಳಿಸಿಕೊಟ್ಟರು. ಡಾ. ವಿ. ಎನ್. ಹೆಗಡೆ ನಗೆಸುವುದು ತುಂಬ ಕಷ್ಟದ ಕೆಲಸ ಅದೊಂದೆ ಕಲೆ ಎಂದು ಹೇಳಿದರು. 

ಗುಂಡೆನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ. ಎಸ್.  ಸೋನಾರ ನಿರೂಪಿಸಿದರು. ಆರ್. ಬಿ. ಕಟ್ಟಿ, ಅರವಿಂದ ಹುನಗುಂದ, ದೀಪಿಕಾ ಚಾಟೆ, ಅರವಿಂದ ಕಡಗದಕೈ, ಮದನ ಕಣಬೂರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.