ವಿಜಯಪುರ 07: ಇಂದು ಇಡೀ ಜಗತ್ತು ಒಂದು ಮಾರುಕಟ್ಟೆಯಾಗಿ ಮಾರ್ಪಟಟಿದ್ದು, ಭಾರತದ ಗ್ರಾಹಕ ಮಾರುಕಟ್ಟೆಯು ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತವು ಸ್ಮಾರ್ಟಫೋನ್ ಹೊಂದಿರುವವರ ಗ್ರಾಹಕರಲ್ಲಿ ವಿಶ್ವದಲ್ಲಿಯೇ ಎರಡನೇಯ ರಾಷ್ಟ್ರವಾಗಿ ಇಂದಿನ ವಾಣಿಜ್ಯ-ವ್ಯವಹಾರ, ಖರೀದಿ-ಮಾರಾಟ ಮತ್ತು ಮಾರಾಟ ಚಟುವಟಿಕೆಗಳಲ್ಲಿ ಸುಮಾರು 35ಅ ರಷ್ಟು ಇ-ಕಾಮರ್ಸ, ಇ-ಮಾರ್ಕೆಟಿಂಗ್, ಆನಲೈನ್ ಶಾಪಿಂಗ್ ಮತ್ತು ಅಂತರ್ಜಾಲ-ತಂತ್ರಜ್ಞಾನ ಆಧಾರಿತವಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಅದರಲ್ಲೂ ವಿಶೇಷವಾಗಿ ಕೃತಕ ಬುದ್ದಿಮತ್ತೆ, ಗ್ರಾಹಕ ಅನುಭವ, ಗ್ರಾಹಕರ ವರ್ತನೆ, ಟೆಂಡ್ರ್್ಸ, ಲೈಫ್ ಸ್ಟೈಲ್, ಡೇಟಾ ಎನಾಲಿಟಿಕ್ಸ್, ಸಪ್ಲೈ ಚೇನ್ ಮ್ಯಾನೇಜಮೆಂಟ್, ಹ್ಯೂಮನ್ ರಿಸೋರ್ಸ, ರಿಟೇಲ್ ಮ್ಯಾನೇಜಮೆಂಟ್ ನಂತಹ ಬದಲಾವಣೆಗಳು ವಾಣಿಜ್ಯ ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಲು ಸಹಕಾರಿಯಾಗಿದೆ ಎಂದು ಇಂಡಿ ಜಿ.ಆರ್.ಜಿ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಜಯಪ್ರಸಾದ.ಡಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದಜೇ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಾ ಕೋಶ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಡಿಯಲ್ಲಿ ಜರುಗಿದ “ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ಕ್ಷೇತ್ರದಲ್ಲಿನ ಇತ್ತೀಚಿನ ವಿದ್ಯಮಾನಗಳು” ವಿಷಯ ಕುರಿತು ಆಯೋಜಿಸಿದ್ದ ವಿಶೇಚ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗ ಮಾತನಾಡುತ್ತಿದ್ದರು.
ಅವರು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇ-ಕಾಮರ್ಸ ಕ್ಷೇತ್ರದಲ್ಲಿ ಅಮೂಲಾಗ್ರವಾದ ಬದಲಾವಣೆಗಳಾಗುತ್ತಿದ್ದು, ಇದರಿಂದ ಗ್ರಾಹಕರು ತಮ್ಮ ಬೇಕು-ಬೇಡ, ಅಪೇಕ್ಷೆ-ಆಕಾಂಕ್ಷೆ, ಅವಶ್ಯಕತೆಗಳಿಗನುಗುಣವಾಗಿ ಸರಕು-ಸೇವೆಗಳನ್ನು ಮನೆಯಿಂದಲೇ ಪಡೆಯುವ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ಮಾರಾಟ ಪ್ರಕ್ರಿಯಾ ಪರಿಸರದಲ್ಲಿ ಗ್ರಾಹಕರು ಮಳಿಗೆ-ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವ ಗೋಜು ಈಗ ಇಲ್ಲದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ಇಂದಿನ ಆಧುನಿಕ ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ಕಾರ್ೋರೇಟ್ ಜಗತ್ತು ವಿಶೇಷವಾಗಿ ತಂತ್ರಜ್ಞಾನ, ಕೌಶಲ್ಯ, ನೈಪುಣ್ಯತೆ ಮತ್ತು ಬುದ್ಧಿಮತ್ತೆಗೆ ಹೆಚ್ಚಿನ ಪ್ರಾಧ್ಯಾನತೆ ದೊರೆಯುತ್ತಿರುವುದರಿಂದ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳ ವಿಷಯ ಜ್ಞಾನದೊಂದಿಗೆ ಪ್ರಾಯೋಗಿಕತೆ, ತಾರ್ಕಿಕ ಶಕ್ತಿ, ವಿಶ್ಲೇಷಣಾ ಮನೋಭಾವನೆ, ಕ್ರಿಯಾಶೀಲತೆ, ಸೃಜನಾತ್ಮಕತೆ, ನಾವಿನ್ಯತೆ ಮತ್ತು ಸಂಪರ್ಕ-ಸಂವಹನ ಕಲೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ವಿಫುಲ ಅವಕಾಶಗಳನ್ನು ಒದಗಿಸುತ್ತಿದೆ. ಇಂದು ಬದಲಾವಣೆಯತ್ತ ಸಾಗುತ್ತಿರುವ ವಾಣಿಜ್ಯ ಮತ್ತು ಮ್ಯಾನೇಜಮೆಂಟ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್.ಎಸ್.ಕುರಿ, ವಾಣಿಜ್ಯಶಾಸ್ತ್ರ ವಿಭಾಗದ ಡಾ. ಐ.ಎಸ್.ಶಿವಶರಣರ, ಪ್ರೊ. ಆರ್.ಐ.ಜೋಗೂರ, ಪ್ರೊ. ವಲ್ಲಭ ಕಬಾಡೆ, ಶ್ರೀಮತಿ ಆಶಾ ಹಜೇರಿ, ಡಾ. ಎಸ್.ಡಿ.ಬಿರಾದಾರ ಇನ್ನಿತರರು ಸಹ ಉಪಸ್ಥಿತರಿದ್ದರು.
ಸೃಷ್ಠಿ ಗೋಂದಳಿ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ಎಂ.ಎಸ್.ಖೊದ್ನಾಪೂರ ಸ್ವಾಗತಿಸಿದರು. ಪ್ರೊ. ವಲ್ಲಭ ಕಬಾಡೆ ವಂದಿಸಿದರು. ಈ ವಿಶೇಷ ಉಪನ್ಯಾಸದಲ್ಲಿ ಬಿ.ಕಾಂ ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.