ಮಹಿಳೆಯರಿಗೆ ಹಮ್ಮಿಕೊಂಡ ತರಬೇತಿಯ ಸಮಾರೋಪ ಸಮಾರಂಭ ವಾಹನ ಚಲಾವಣೆ ಮಹಿಳೆಯರಿಗೆ ಆತ್ಮವಿಶ್ವಾಸ ತರಲಿದೆ.
ಧಾರವಾಡ 30 : ಮಹಿಳೆ ಇಂದಿನ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಲು ಅವಕಾಶಗಳಿವೆ ಅದನ್ನು ಗುರುತಿಸಿ ಆತ್ಮವಿಶ್ವಾಸದಿಂದ ಬದುಕನ್ನು ರೂಪಿಸಿಕೊಳ್ಳಬೇಕು ಹಾಗೂ ಲಘು ವಾಹನ ಚಲಾವಣೆಯನ್ನೂ ಜವಾಬ್ದಾರಿಯಿಂದ, ನಾಜೂಕಿನಿಂದ ನೆಡೆಸಿದಾಗ ಅವಳಿಗೆ ಆತ್ಮವಿಶ್ವಾಸ ತರಲಿದೆ ಎಂದು ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ. ಕೆ. ಹೇಳಿದರು. ಅವರು ಧಾರವಾಡ ಗಾಂಧಿನಗರ ರುಡ್‌ಸೆಟ್ ಸಂಸ್ಥೆಯಲ್ಲಿ ಮುಕ್ತಾಯಗೊಂಡ ಜಿಲ್ಲೆಯ ಪ್ರತಿ ಗ್ರಾಮಪಂಚಾಯತಿಯಲ್ಲಿ ಸ್ವಚ್ಛವಾಹಿನಿ ಲಘು ವಾಹನ ಚಲಾಯಿಸಲಿರುವ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ 30 ಲಘು ವಾಹನ ಚಲಾವಣೆ ತರಬೇತಿಯ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಎಲ್ಲ ಮಹಿಳಾ ಒಕ್ಕೂಟಗಳಿಗೆ ಜಿಲ್ಲಾಡಳಿದದಿಂದ ಸಕಲ ಬೆಂಬಲದೊರೆಯಲಿದೆ ಅದರ ಸದುಪಯೋಗ ಮಾಡಿಕೊಂಡು ಗ್ರಾಮ ಪಂಚಾಯತನ ಸ್ವಚ್ಛ ವಾಹಿನಿಯನ್ನು ಜವಾಬ್ದಾರಿಯುತವಾಗಿ ಚಲಾಯಿಸುವದರ ಜೊತೆಗೆ ಗ್ರಾಮಗಳನ್ನು ಸಂಪೂರ್ಣ ಸ್ವಚ್ಛವಾಗಿಡಲು ದಕ್ಷತೆಯಿಂದ ಕೆಲಸ ನಿರ್ವಹಿಸಲು ಕರೆನೀಡಿದರು. ಮುಂದುವರೆದು, ಮಹಿಳಾ ಒಕ್ಕೂಟಗಳು ವಿವಿಧ ಸ್ವ ಉದ್ಯೋಗಗಳನ್ನು ಮಾಡಲು ಜಿಲ್ಲಾ ಪಂಚಾಯತ ಧಾರವಾಡ ಎನ್‌ಆರ್‌ಎಲ್‌ಎಂ ಅಡಿಯಲ್ಲಿ ಸಹಕಾರ ನೀಡಲಿದೆ ಎಂದು ಹೇಳಿ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಅವರು ಹಾಜರಿದ್ದರು.
ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪೃಥ್ವಿರಾಜ ಗೌರಮ್ಮನ್ನವರ ಮಾತನಾಡಿ ರುಡ್‌ಸೆಟ್ ಸಂಸ್ಥೆಯು ಮಹಿಳೆಯರಿಗೆ ಉತ್ತಮ ಬದುಕನ್ನು ರೂಪಿಸಲು ವ್ಯಕ್ತಿತ್ವಗಳಿಸಿಕೊಳ್ಳಲು ಸದಾಕಾಲ ಶ್ರಮಿಸುತ್ತಿದೆ. ಪುರುಷರಂತೆ ಮಹಿಳೆಯರು ಸಮಾನ ಸಾಮರ್ಥ್ಯಹೊಂದಿದ್ದಾಳೆ ಅವರಲ್ಲಿರುವ ಕೌಶಲ್ಯವನ್ನು ಗುರುತಿಸಿ ಅದರ ಮೂಲಕ ಸ್ವಂತ ಉದ್ಯೋಗದ ವ್ಯಕ್ತಿತ್ವ ಬೆಳೆಸಲು ಸಂಸ್ಥೆ ಸಹಕರಿಸುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಧಾರವಾಡದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ ಕಂಠಿ ಹಾಗೂ ವ್ಯವಸ್ಥಾಪಕ ವಿನೋದ ಗಾಮನಗಟ್ಟಿ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಚನ್ನಪ್ಪ ದೇವಗಿರಿ ಕಾರ್ಯಕ್ರಮ ನಿರೂಪಿಸಿದರು, ಇನ್ನೋರ್ವ ಹಿರಿಯ ಉಪನ್ಯಾಸಕ ಬಸವರಾಜ ಸನಪಾ ವಂದಿಸಿದರು. ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ
ಕಾರ್ಯಕ್ರಮದಲ್ಲಿ ಒಟ್ಟು 40 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು.