ಬೆಟಗೇರಿ ಗ್ರಾಮದ ಕೃಷಿಕನ ಮಗಳು ಧಾರವಾಡ ಪಿಯು ಕಾಲೇಜಗೆ ಪ್ರಥಮ ಸ್ಥಾನ

The daughter of a farmer from Betageri village secured first place in Dharwad PU College.

ಲೋಕದರ್ಶನ ವರದಿ 

ಬೆಟಗೇರಿ ಗ್ರಾಮದ ಕೃಷಿಕನ ಮಗಳು ಧಾರವಾಡ ಪಿಯು ಕಾಲೇಜಗೆ ಪ್ರಥಮ ಸ್ಥಾನ 

ಅಡಿವೇಶ ಮುಧೋಳ. 

ಬೆಟಗೇರಿ, 14 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನೇಗಿಲಯೋಗಿ ಸಿದ್ಧೇಶ್ವರ ಭೀಮಶೆಪ್ಪ ಕುರಬೇಟ ಅವರ ಪುತ್ರಿ ಭಾರತಿ ಸಿದ್ಧೇಶ್ವರ ಕುರಬೇಟ ಪ್ರಸಕ್ತ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಶೇ.96.05 ರಷ್ಟು ಸಾಧನೆ ಮಾಡಿ ಬೆಟಗೇರಿ ಗ್ರಾಮ ಮತ್ತು ಧಾರವಾಡ ಪಿಯು ಕಾಲೇಜಕ್ಕೆ ಕೀರ್ತಿ ತಂದಿದ್ದಾಳೆ. 

      ಒಟ್ಟು 600 ಅಂಕಗಳ ಪೈಕಿ 579 ಅಂಕ ಪಡೆದ ಭಾರತಿ ಕುರಬೇಟ ಅವರು ವ್ಯಾಸಂಗ ಮಾಡಿದ ಧಾರವಾಡ ಪೂರ್ಣಾ ಪಿಯು ಕಾಲೇಜಗೆ ಪ್ರಥಮ ಸ್ಥಾನ ಗಳಿಸಿ, ಬೆಟಗೇರಿ ಗ್ರಾಮದ ಪ್ರಸಕ್ತ ಸಾಲಿನ ಪಿಯುಸಿ ವಿಜ್ಞಾನ ವಿಭಾಗ ವಿದ್ಯಾರ್ಥಿಗಳಲ್ಲಿಯೇ ಭಾರತಿ ಕುರಬೇಟ ಗರಿಷ್ಠ ಅಂಕ ಪಡೆದ ದಾಖಲೆ ತನ್ನ ಮುಡಿಗೇರಿಸಿಕೊಂಡಿದ್ದಾಳೆ. 

   ಬೆಟಗೇರಿ ಗ್ರಾಮದ ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಭಾರತಿ ಕುರಬೇಟ ಅವರ ತಾಯಿ 7 ನೇ ತರಗತಿ ಶಿಕ್ಷಣ ಕಲಿತಿಲ್ಲ, ಅವರ ತಂದೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಿದ್ಧೇಶ್ವರ ಭೀಮಶೆಪ್ಪ ಕುರಬೇಟ ಪದವಿ ಪೋರೈಸಿ ಈಗ ಕೃಷಿಕನಾಗಿದ್ದು, ಸತತ ಅಭ್ಯಾಸ, ಶಿಕ್ಷಕರ ಮಾರ್ಗದರ್ಶನ, ಪಾಲಕರ ಸಹಕಾರ, ಪ್ರೋತ್ಸಾಹದಿಂದ ಉತ್ತಮ ಅಂಕ ಗಳಿಸಲು ಸಾಧ್ಯಾವಾಯಿತು ಅಂತಾ ಭಾರತಿ ಸ್ಮರಿಸುತ್ತಾರೆ. ಗ್ರಾಮೀಣ ಪ್ರತಿಭೆಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಸಾಧ್ಯವಲ್ಲ ಅಂಬುದನ್ನು ಭಾರತಿ ಕುರಬೇಟ ಸಾಬೀತುಪಡಿಸಿದ್ದಾಳೆ. 

“ನನಗೆ ಶೈಕ್ಷಣಿಕವಾಗಿ ನೀಡುತ್ತಿರುವ ಸಹಾಯ, ಸಹಕಾರ, ಪ್ರೋತ್ಸಾಹದಿಂದ ಹಾಗೂ ಸತತ ಪರಿಶ್ರಮದ ಅಭ್ಯಾಸ, ಎಲ್ಲ ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪ್ರೇರಣೆಯಾಯಿತು. ಎಂದು ಭಾರತಿ ಕುರಬೇಟ. ಹೆಳಿದ್ದಾಳೆ.  

“ನನ್ನ ಮಗಳು ತಾನು ಕಲಿಯುವ ಧಾರವಾಡ ಪಿಯು ಕಾಲೇಜಗೆ ಪ್ರಥಮ ಸ್ಥಾನ, ಬೆಟಗೇರಿ ಗ್ರಾಮದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿಯೇ ಗರಿಷ್ಠ ಅಂಕ ಪಡೆದ ವಿಷಯ ಕೇಳಿ ತುಂಬಾ ಖುಷಿಯಾಯಿತು. ಇನ್ನೂ ಮುಂದೆ ಆಕೆ ಎಲ್ಲಿಯತನಕ ಓದುತ್ತಾಳೆ ಅಲ್ಲಿಯ ವರೆಗೆ ಓದಿಸುವ ಹಂಬಲ ನನಗಿದೆ. ಎಂದು ಅವಳ ತಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ