ಸೋದರನ ರಕ್ಷಿಸಿ ತಂದೆಗೆ ಗುಂಡಿಕ್ಕಿ ಕೊಂದ ಪುತ್ರಿ

ಮಥುರಾ, ಫೆ 11 ಕೌಟುಂಬಿಕ  ಕಲಹದಿಂದ    ಪತ್ನಿ ಹಾಗೂ ಪುತ್ರಿಯ    ಗುಂಡು ಹಾರಿಸಲು  ನಡೆಸಲು ಯತ್ನಿಸಿದ   ತಂದೆಯಿಂದ   ಪಿಸ್ತೂಲ್    ಕಸಿದು    ಅದರಿಂದಲೇ    ಗುಂಡು  ಹಾರಿಸಿ   ಆತನನ್ನು   ಕೊಲೆ  ಮಾಡಿರುವ    ಘಟನೆ ಉತ್ತರ ಪ್ರದೇಶದ  ಮಥುರಾ ಜಿಲ್ಲೆ  ಮೈಥಿಲಿಯ  ನೌಹ್ಜೀಲ್  ಪ್ರದೇಶದಲ್ಲಿ  ನಡೆದಿದೆ   ಎಂದು ಪೊಲೀಸ್ ಮೂಲಗಳು  ಮಂಗಳವಾರ  ಹೇಳಿವೆ.

ಮೈಥಿಲಿಯ ನೌಹ್ಜೀಲ್ ನ  ಪ್ರದೇಶದಲ್ಲಿ ವಾಸವಾಗಿದ್ದ    ನಿವೃತ್ತ  ಸೇನಾಯೋಧ   ಚೇತ್ರಾಮ್ (40)  ಹತ್ಯೆಗೊಳಗಾದ  ವ್ಯಕ್ತಿ.    ಕೌಟುಂಬಿಕ ವಿಷಯದಲ್ಲಿ    ಪತ್ನಿ ಹಾಗೂ ಮಕ್ಕಳ    ನಡುವೆ    ನಡೆದ ಮಾತಿನ ಚಕಮಕಿ   ತೀವ್ರ ಸ್ವರೂಪಕ್ಕೆ ತಿರುಗಿದ್ದು, ಕುಪಿತಗೊಂಡ  ನಿವೃತ್ತ  ಯೋಧ ಚೇತ್ರಾಮ್,    ಪತ್ನಿ  ರಾಜಕುಮಾರಿ(38),    18 ವರ್ಷದ ಪುತ್ರಿಯ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿ  ಹತ್ಯೆಗೆ ಯತ್ನಿಸಿದ್ದಾನೆ.   ಈ ಸಂದರ್ಭದಲ್ಲಿ   ಪ್ರತಿರೋಧ ವ್ಯಕ್ತಪಡಿಸಿದ   14 ವರ್ಷದ ಪುತ್ರನ ಮೇಲೆ  ಗುಂಡು ಹಾರಿಸಲು ಮುಂದಾದ,   ತಕ್ಷಣವೇ   ಎಚ್ಚೆತ್ತುಕೊಂಡ  ಗಾಯಗೊಂಡಿದ್ದ  ಪುತ್ರಿ,    ತಂದೆಯ ಕೈಯಿಂದ ಪಿಸ್ತೂಲ್  ಕಸಿದು  ಅದರಿಂದಲೇ  ಆತನ  ಮೇಲೆ ಗುಂಡು ಹಾರಿಸಿದ್ದಾಳೆ   ಇದರಿಂದಾಗಿ    ತಂದೆ   ಮೃತ ಪಟ್ಟಿದ್ದಾನೆ   ಎಂದು ಪೊಲೀಸರು  ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ  ಗಾಯಗೊಂಡಿರುವ ತಾಯಿ ಹಾಗೂ ಮಗಳನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆ ಬಗ್ಗೆ  ಹೆಚ್ಚಿನ ತನಿಖೆ  ಮುಂದುವರಿದಿದೆ.