13.5 ಟಿಎಂಸಿ ನೀರು ಬಳಕೆಗೆ ಬಂದಿರುವ ಆದೇಶ ತಕ್ಷಣ ಜಾರಿಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೈಲಹೊಂಗಲ, 5- ಈ ಭಾಗದ ರೈತರ ಮತ್ತು ಜನತೆಯ ಅವಿರತ ಹೋರಾಟದ ಪ್ರತಿಫಲವಾಗಿ ಮಹಾದಾಯಿ ಟ್ರಿಬುನಲ್ದಲ್ಲಿ ರಾಜ್ಯದ ಪರವಾಗಿ 13.5 ಟಿಎಂಸಿ ನೀರು ಬಳಕೆಗೆ ಬಂದಿರುವ ಆದೇಶವನ್ನು ತಕ್ಷಣ ಜಾರಿಗೊಳಿಸಲು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆಯಬೇಕೆಂದು ಆಗ್ರಹಿಸಿ ಕಳಸಾ ಬಂಡೂರಿ ನಾಲಾ ಮತ್ತು ಮಹದಾಯಿ ನದಿ ಜೋಡನಾ ಹೋರಾಟ ಸಮಿತಿ ಮುಖಂಡರು ಸೋಮವಾರ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

      ಹೋರಾಟ ಸಮಿತಿ ಮುಖಂಡರಾದ ಶಿವರಂಜನ್ ಬೋಳನ್ನವರ ಮಾತನಾಡಿ, ಅ.14 ರಂದುಟ್ರಿಬಿನಲ್ದಿಂದರಾಜ್ಯದ ಪರವಾಗಿ ಬಂದಆದೇಶವನ್ನುತಕ್ಷಣ ಅನಿಷ್ಠಾನಗೊಳಿಸಲು ಮುಂದಾಗಬೇಕು. ವಿನಾಕಾರಣ ಒಬ್ಬರ ಮೇಲೆ ಒಬ್ಬರು ಹಾಕುವದನ್ನು ಬಿಟ್ಟು ಈ ಭಾಗದರೈತರಜನತೆಯ ಹಿತದೃಷ್ಟಿಯಿಂದ ಯೋಜನೆ ಅತಿಅವಶ್ಯವಾಗಿದೆ ಎಂದರು.

ರಾಜ್ಯದ ಶಾಸಕರು, ಸಂಸದರನ್ನು ಸೇರಿಸಿಕೊಂಡು ಪಕ್ಷ ಬೇದ ಮರೆತುರಾಜ್ಯ ಮತ್ತುಕೇಂದ್ರ ಸರಕಾರದಿಂದಅಧಿಸೂಚನೆ ಹೊರಡಿಸಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.

    ಮುಖಂಡರಾದ ಮಹಾಂತೇಶ ತುರಮರಿ, ಸಿ.ಕೆ.ಮೆಕ್ಕೇದ ಮಾತನಾಡಿ, ಇನ್ನು ಮುಂದೆಯಾವುದೇ ಕಾರಣಕ್ಕೂ ಟ್ರಿಬಿನಲ್ ನಲ್ಲಿ ಮರುಪ್ರಶ್ನಿಸಿ ಅಜರ್ಿ ಹಾಕಿದರೆಯಾವುದೇ ಪ್ರಯೋಜನವಿಲ್ಲ. ಕಾಲಹರಣ ಮಾಡದೆಯೋಜನೆಯಜಾರಿಗೆಕ್ರಮಕೈಗೊಂಡು ಹೆಚ್ಚಿನ ನೀರಿಗಾಗಿ ಸುಪರ್ಿಂಕೋಟರ್ಿನಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಚಾಲನೆ ನೀಡಬೇಕು. ಕಾವೇರಿ ಮತ್ತು ಕೃಷ್ಣಾ ನದಿಯ ಪಾತ್ರದಲ್ಲಿ ಹೆಚ್ಚಿನ ನೀರು ಬಳಕೆಗೆ ಬಂದಿರುವ ತೀಪರ್ು ಮುಂಬರುವ ದಿನಗಳಲ್ಲಿ ಕಳಸಾ ಬಂಡೂರಿ ಮತ್ತು ಮಹಾದಾಯಿಯೋಜನೆಗೆತೀಪರ್ು ಬರುವುದು ನಿಶ್ಚಿತ. ಇದರಲ್ಲಿ ಯಾವುದೇ ಸಂದೇಹವಿಲ್ಲ. ತಕ್ಷಣರಾಜ್ಯ ಸರಕಾರ ,ಕೇಂದ್ರ ಸರಕಾರಕ್ಕೆ ಪತ್ರ ಬರೆದುಯೋಜನೆಯ ಅನುಷ್ಠಾನಕ್ಕೆ ಅಧಿಸೂಚನೆ ಹೋರಡಿಸಲು ಮುಂದಾಗಬೇಕು. ಇಲ್ಲದಿದ್ದರೆಉಗ್ರ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು.

     ಹೋರಾಟ ಸಮಿತಿ ಮುಖಂಡರಾದ ಮಡಿವಾಳಪ್ಪ ಹೋಟಿ, ಮಹಾಂತೇಶ ಮತ್ತಿಕೊಪ್ಪ, ಎಫ್.ಎಸ್.ಸಿದ್ದನಗೌಡರ ಮಲ್ಲಿಕಾಜರ್ುನ ಹುಂಬಿ, ಮಹಾಂತೇಶಕಮತ, ಮಹೇಶ ಹರಕುಣಿ, ಮುರಗೇಶಗುಂಡ್ಲೂರ, ಮಹಾದೇವ ಕಲಬಾಂವಿ, ಬಸನಗೌಡ ಸಿದ್ರಾಮನಿ, ಸಿದ್ದಾರೂಡ ಹೊಂಡಪ್ಪನ್ನವರ, ಶ್ರೀಶೈಲ ಯಡಳ್ಳಿ, ಮಲ್ಲಿಕಾಜರ್ುನ ಉಳ್ಳೇಗಡ್ಡಿ, ಶ್ರೀಕಾಂತಯ್ಯ ಕುಲಕಣರ್ಿ, ಈರಣ್ಣ ಬೆಟಗೇರಿ, ಮೊದಲಾದವರು ಪಾಲ್ಗೊಂಡಿದ್ದರು.