ಬಿ.ಕೆ. ಗುಪ್ತ ಕಾಲೇಜಿನ ಇತಿಹಾಸದಲ್ಲಿಯೇ ಮೊದಲ ಗುರುವಂದನಾ ಕಾರ್ಯಕ್ರಮ
ರಾಣೇಬೆನ್ನೂರ 18: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆ ಎರೆದು, ಉನ್ನತ ಜೀವನವನ್ನು ಕಟ್ಟಿಕೊಟ್ಟ ರಾಣೇಬೆನ್ನೂರಿನ ಬಿ.ಕೆ.ಗುಪ್ತ ಪಿಯು ಮಹಾವಿದ್ಯಾಲಯದ ಇತಿಹಾಸದಲ್ಲೇ ಮೊದಲ ಗುರುವಂದನಾ ಕಾರ್ಯಕ್ರಮವಾಗಿದ್ದು ಎಂದು ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾಚಾರ್ಯರಾದ ಕುಮಾರ ಡಿ.ಕೆ ಮಾತನಾಡಿದರು.
ನಗರದ ಬಿ. ಕೆ. ಗುಪ್ತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ 2013-14 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ದಶಮಾನೋತ್ಸವ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ವೇದಿಕೆಯಲ್ಲಿದ ಗುರು ಬಳಗದ ಜೊತೆಗೆ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಒಬ್ಬ ಉಪನ್ಯಾಸಕನಿಗೆ ತನ್ನ ಜೀವನದ ಸಾರ್ಥಕ ಅಂದರೆ ತಾನು ಧಾರೆ ಎರೆದ ಶಿಕ್ಷಣವು ವಿದ್ಯಾರ್ಥಿಗಳ ಜೀವನ ಕಟ್ಟಿಕೊಂಡಗ ಮಾತ್ರ ಸಾರ್ಥಕ. ಹಿಂದಿನ ವಿದ್ಯಾರ್ಥಿಗಳು ಫ್ಯೂಚರ್ ಹಿಂದೆ ಹೋಗಿ ಜೀವನ ರೂಪಿಸಿಕೊಂಡರು. ಆದರೆ ಇಂದಿನ ವಿದ್ಯಾರ್ಥಿಗಳು ಪಿಕ್ಚರ್ ಹಿಂದೆ ಹೋಗುತ್ತಿರುವುದು ದುರಂತವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಕಾರ್ಯನಿರ್ವಹಿಸಲ್ಲಿ ಎಂದು ಶುಭಕೋರಿದರು. ತಮಗೆ ವಿದ್ಯೆ ಕಲಿಸಿದ ಗುರುಗಳನ್ನು, ತಾವು ಆಡಿ ಬೆಳೆದ ವಿದ್ಯಾಲಯದ ಸುಂದರ ಕ್ಷಣಗಳನ್ನು, ಸಹಪಾಠಿಗಳೊಂದಿಗೆ ನೋವು-ನಲಿವುಗಳನ್ನು ಪರಸ್ಪರ ಹಂಚಿಕೊಂಡು ಖುಷಿ ಕ್ಷಣ, 10 ವರ್ಷಗಳ ಬಳಿಕ ಒಂದೆಡೆ ಸೇರಿ ಚದುರಿ ಹೋಗಿದ್ದ ನೆನಪುಗಳನ್ನು ಒಂದುಗೂಡಿಸಲು ನಗರದ ಬಿ.ಕೆ.ಗುಪ್ತಾ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಮಹಾಸಂಗಮ ಸಾಕ್ಷಿಯಾಯಿತು.
ಗುರುವಂದನೆ ಸ್ವೀಕರಿಸಿದ ರಾಜ್ಯಶಾಸ್ತ್ರ ಉಪನ್ಯಾಸಕ ಎಂ ಡಿ ಹೊನ್ನಮ್ಮವರ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಡುತ್ತದೆ ಎನ್ನುವ ಸತ್ಯಕ್ಕೆ ನಮ್ಮ ವಿದ್ಯಾರ್ಥಿಗಳೆ ಸಾಕ್ಷಿ ಎಂದರು.
ಗುರುವಂದನೆ ಸ್ವೀಕರಿಸಿದ ಇತಿಹಾಸ ಉಪನ್ಯಾಸಕರು, ಜೆಸಿಐ ಅಧ್ಯಕ್ಷರಾದ ಕುಮಾರ ಬೆಣ್ಣಿ ಮಾತನಾಡಿ, ನಾವು ಕಲಿಸಿದ ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ, ಬಿ.ಕೆ ಗುಪ್ತಾ ಶಿಕ್ಷಣ ಸಂಸ್ಥೆಯು ನನ್ನೂ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆ ಎರೆತ್ತಿರುವುದು ಶ್ಲಾಘನೀಯ ಎಂದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯರಾದ ಎಸ್. ವಿ. ಹಳ್ಳಪ್ಪಗೌಡರ ಮಾತನಾಡಿ, ಗುರುವಂದನಾ ಕಾರ್ಯಕ್ರಮ ನಮ್ಮ ನಿವೃತ್ತಿ ಜೀವನದಲ್ಲಿ ಆರೋಗ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ, ಅದೇ ರೀತಿ ನಿಮ್ಮ ತಂದೆ-ತಾಯಿ ನಿಮಗೆ ಎಲ್ಲವೂ ಕೊಟ್ಟಿರುತ್ತಾರೆ ಅಂತಹವರಿಗೆ ಪ್ರೀತಿಯಿಂದ ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.ಹಳೆಯ ವಿದ್ಯಾರ್ಥಿ ಬಿರೇಶ ಬುಡ್ಡಳ್ಳರ ಮಾತನಾಡಿ, ಜ್ಞಾನ, ವಿದ್ಯೆ ಕಲಿಸಿದ ಗುರುಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು ಅಷ್ಟು ಶ್ರಮವಹಿಸಿ ನಮಗೆ ಶಿಕ್ಷಣವನ್ನು ನೀಡಿದ್ದಾರೆ. ಗುರುಬಳಗ ಹಾಗೂ ಶಿಕ್ಷಣ ಸಂಸ್ಥೆ, ನನ್ನ ಸಹಪಾಠಿಗಳು ಕೂಡಾ ನಮ್ಮ ಜೀವನಕ್ಕೆ ದಾರಿ ತೋರಿಸಿದ್ದಾರೆ. ಅನೇಕ ಗೆಳೆಯರು ಅತ್ಯುನ್ನತ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಹಳೆಯ ವಿದ್ಯಾರ್ಥಿ ಬಸವರಾಜ ಎಸ್ ಮಾತನಾಡಿ, ಕಲಾ, ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಪಡೆದ ನನ್ನ ಸಹಪಾಠಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರು ಸಂತೋಷಕರ, ಹಾಗೆ ವಿಜ್ಞಾನ ವಿಭಾಗವು ಪ್ರಾರಂಭವಾಗುವ ಮೂಲಕ ಬಿ.ಕೆ. ಗುಪ್ತಾ ಶಿಕ್ಷಣ ಸಂಸ್ಥೆಯು ಇನ್ನೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ. ಗುರುವಂದನಾ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಉತ್ತೇಜನ ನೀಡುತ್ತಿದೆ, ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿರುಬೇಕು, ಅಂದಾಗ ಗುರು ಶಿಷ್ಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತಿದೆ ಎಂದರು. ಗುರುವಂದನಾ ಸ್ವೀಕರಿಸಿ ಎಮ್. ವಾಯ್, ಕುಸಗೂರು, ಯು. ಜಿ. ಸೊರಟೂರು, ನಿವೃತ್ತ ಪ್ರಾಚಾರ್ಯರು, ವಾಯ್. ಹೆಚ್. ವಡೇರಹಳ್ಳಿ, ಪಾಂಡ್ಯಾನಾಯ್ಡ್ ಎನ್. ಪೊರೇಪ್ಪನವರ, ಗೀತಾ ಆರ್. ಸಾವಕಾರ, ಜಯಲಕ್ಷ್ಮೀ ಏ. ಪುಲ್ಲಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಮಮತಾ, ಸಚಿನ್ ಚಲವಾದಿ, ಸಂತೋಷ, ಸಿದ್ದು ಉಜ್ಜನಗೌಡರ, ಶಿವಕುಮಾರ್ ಕರಿಯಜ್ಜಿ, ಕುಮಾರ್ ಕರಡಿ, ಹೈದರ್ ಅಲಿ, ವಿನಾಯಕ ನಾಯಕ, ಉಸ್ಮಾನಖಾನ್, ದೇವರಾಜ ನೂಕಾಪುರ, ಜಗದೀಶ್ ಯಲ್ಲಾಪುರ, ಮಾಲತೇಶ ಕುರವತ್ತಿ, ಅರುಣ್ ಲಮಾಣಿ, ರೇಖಾ ರೆಡ್ಡಿ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಹಾರ, ಪುಷ್ಪಗಳಿಂದ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು.ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)ಹಾವೇರಿ ಜಿಲ್ಲಾ ಸಮಿತಿ.9845787254