ತರಗತಿ ವೀಕ್ಷಣೆಯೇ ಶಾಲಾ ಸಂದರ್ಶನದ ಗುರಿ: ಹಿರೇಮಠ

ಲೋಕದರ್ಶನವರದಿ

ಧಾರವಾಡ02 : ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳು ತಾವು ನಡೆಸುವ ಶಾಲಾ ಸಂದರ್ಶನ ಕೇವಲ ವರದಿಗೆ ಮಾತ್ರ ಸೀಮಿತವಾಗಬಾರದು. ಬಹುಮುಖ್ಯವಾಗಿ ಸಮಗ್ರವಾದ ತರಗತಿ ವೀಕ್ಷಣೆಯೇ ಶಾಲಾ ಸಂದರ್ಶನದ ಗುರಿಯಾಗಿರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಅವರು ನಗರದ ಡಯಟ್ ಹಿರಿಯ ಉಪನ್ಯಾಸಕಿ ಮಂಗಳಾ ಪಾಟೀಲ ಅವರು ಸೇವಾನಿವೃತ್ತಿ ಹೊಂದಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆಯ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಶಿಕ್ಷಣ ಇಲಾಖೆಯ ನಿದರ್ೆಶಕರ ಹುದ್ದೆಯಿಂದ ಹಿಡಿದು ಅವರ ನಂತರದ ಎಲ್ಲಾ ಹಂತದ ಅಧಿಕಾರಿಗಳು ಕಡ್ಡಾಯವಾಗಿ ಶಾಲಾ ಸಂದರ್ಶನ ನಡೆಸಿ, ಶಿಕ್ಷಕ-ಶಿಕ್ಷಕಿಯರ ತರಗತಿ ಬೋಧನೆಯ ವೀಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ ಅವರ ವ್ಯಕ್ತಿತ್ವ ವಿಕಾಸದತ್ತ ಹೆಚ್ಚು ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದರು. 

ಶಿಕ್ಷಕರು ತಮ್ಮ ವೃತ್ತಿಯೊಂದಿಗೆ ಭಾವನಾತ್ಮಕ ತನ್ಮಯತೆಯನ್ನು ಹೊಂದಿ, ಸಮರ್ಪಣಾ ಮನೋಭಾವದಿಂದ ನಾವೀನ್ಯ ತಂತ್ರಜ್ಞಾನದ ಬಳಕೆಯತ್ತ ತಮ್ಮನ್ನು ತೆರದುಕೊಳ್ಳಬೇಕು. ಪಠ್ಯಕ್ರಮವನ್ನು ಆಳವಾಗಿ ಅಧ್ಯಯನ ಮಾಡದೇ, ಪ್ರತೀ ದಿನದ ತರಗತಿ ಬೋಧನೆಗೆ ಪೂರಕವಾದ ಅಗತ್ಯ ಪಾಠೋಪಕರಣಗಳನ್ನು ಸಿದ್ಧಪಡಿಸಿಕೊಳ್ಳದೇ ಪಾಠಮಾಡಿದರೆ ಅದು ವಿದ್ಯಾಥರ್ಿಗಳನ್ನು ತಲುಪುವುದಿಲ್ಲ.  ವಿವಿಧ ಪ್ರವೃತ್ತಿಗಳನ್ನು ಹೊಂದಿರುವ ಮಂಗಳಾ ಪಾಟೀಲ ಅವರು ನಿವೃತ್ತಿಯ ನಂತರ ಅವುಗಳ ಅನುಭವವನ್ನು ವಿದ್ಯಾವಿಕಾಸಕ್ಕೆ ಸೇರಿಸುವಲ್ಲಿ ತಮ್ಮದೇ ಆದ ಚಿಂತನೆಯನ್ನು ಹೊಂದಬೇಕೆಂದು ಮೇಜರ್ ಸಿದ್ದಲಿಂಗಯ್ಯ ಸಲಹೆ ಮಾಡಿದರು. 

ಅತಿಥಿಯಾಗಿದ್ದ ಸಿಸ್ಲೆಪ್ ನಿದರ್ೆಶಕ ಬಿ.ಎಸ್. ರಘುವೀರ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಮಂಗಳಾ ಪಾಟೀಲ ಅವರು ತಮಗಿರುವ ಸೇವಾ ಅನುಭವದ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ನಿವೃತ್ತಿಯ ನಂತರವೂ ಶ್ರಮಿಸಬೇಕು ಎಂದರು. 

ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಮಾತನಾಡಿ, ಯಾವುದೇ ಅನ್ಯಥಾ ಸಮಸ್ಯೆಗಳಿಲ್ಲದೇ ತಮ್ಮ ಸೇವೆಯನ್ನು ಯಶಸ್ವಿಯಾಗಿ ಪೂರೈಸಿರುವ ಮಂಗಳಾ ಪಾಟೀಲ ಅವರ ವಿಶ್ರಾಂತ ಬದುಕೂ ಸಹ ಯಶಸ್ವಿಯಾಗಲಿ ಎಂದರು. ಡಯಟ್ ಹಿರಿಯ ಉಪನ್ಯಾಸಕಿ ಜಯಶ್ರೀ ಕಾರೇಕರ, ನಿವೃತ್ತ ಹಿರಿಯ ಉಪನ್ಯಾಸಕ ಆರ್.ಎಚ್. ಶಿವಳ್ಳಿ ಮಾತನಾಡಿದರು. 

ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಉಪನಿದರ್ೆಶಕರುಗಳಾದ ಆರ್.ಎಸ್.ಮುಳ್ಳೂರ ಹಾಗೂ ಮೃತ್ಯುಂಜಯ ಕುಂದಗೋಳ, ಹಿರಿಯ ಸಹಾಯಕ ನಿದರ್ೆಶಕ ಅಜರ್ುನ ಕಂಬೋಗಿ, ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ವಿದ್ಯಾ ನಾಡಗೇರ, ಎಂ.ಎಸ್. ಹುಡೇದಮನಿ, ಗಿರೀಶ ಮಠಪತಿ, ಎ.ಎ. ಖಾಜಿ, ಶಾಂತಾ ಮೀಶಿ, ಸುಜಾತಾ ತಿಮ್ಮಾಪೂರ, ನಫೀಜಾ ದಾವಲಸಾಬನವರ, ಸಿಸ್ಲೆಪ್ ಸಂಸ್ಥೆ ಹಾಗೂ ಡಯಟ್ ಉಪನ್ಯಾಸಕರು ಮತ್ತು ಇತರೇ ನೌಕರರು ಇದ್ದರು. 

         ಬೀಳ್ಕೊಡುಗೆಯ ಗೌರವ : ಸೇವಾನಿವೃತ್ತಿ ಹೊಂದಿದ ಮಂಗಳಾ ಪಾಟೀಲ ಅವರಿಗೆ ಡಯಟ್, ಸಿಸ್ಲೆಪ್, ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಸಂಸ್ಥೆಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಶಾಲು ಹೊದಿಸಿ ಗೌರವಿಸಿ ಬೀಳ್ಕೊಡುಗೆಯ ಗೌರವ ನೀಡಲಾಯಿತು. 

ಎಂ.ಎ.ಕುಲಕಣರ್ಿ ಸ್ವಾಗತಿಸಿದರು. ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ಡಾ.ರೇಣುಕಾ ಅಮಲಝರಿ ವಂದಿಸಿದರು.