ಇಂದಿನಿಂದ ಮೈತ್ರಿ ಸಕರ್ಾರದ ಬಹುನಿರೀಕ್ಷಿತ ವಿಧಾನಸಭೆ ಅಧಿವೇಶನ

ಬೆಳಗಾವಿ, ಡಿ.9- ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಸಕರ್ಾರದ ಬಹುನಿರೀಕ್ಷಿತ ಬೆಳಗಾವಿ ವಿಧಾನಸಭೆ ಅಧಿವೇಶನ ನಾಳೆಯಿಂದ ಆರಂಭಗೊಳ್ಳುತ್ತಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿನ ರಣಾಂಗಣಕ್ಕೆ ವೇದಿಕೆ ಸಿದ್ದಗೊಂಡಿದೆ.

ವಿಧಾನಸಭೆಯ  ಒಳಗೂ ಮತ್ತು ಹೊರಗೂ ಎರಡೂ ಕಡೆ ರಾಜ್ಯ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ರಣತಂತ್ರ ರೂಪಿಸಿದೆ.  ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವಾರು ಸಂಘಟನೆಗಳೂ ಕೂಡ ರಾಜ್ಯ ಸಕರ್ಾರದ ವಿರುದ್ಧ ಮುಗಿಬೀಳಲು ಮುಂದಾಗಿವೆ.

ಬೆಂಗಳೂರಿನಲ್ಲಿ ನಿರಂತರ ಪ್ರತಿಭಟನೆ ನಡೆಸಿದರೂ ಯಾವುದೇ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಬೆಳಗಾವಿಯಲ್ಲಿ ತಮ್ಮ ಹೋರಾಟ ಮುಂದುವರೆಸಲು ಮುಂದಾಗಿವೆ.

ಪ್ರಮುಖವಾಗಿ ರಾಜ್ಯದ ಜ್ವಲಂತ ಸಮಸ್ಯೆಗಳ ಪೈಕಿ ಪ್ರಮುಖವಾದ ಕಬ್ಬಿನ ಬೆಳೆ ಬಾಕಿ ಮತ್ತು ರೈತರ ಸಾಲ ಮನ್ನಾ ವಿಷಯಗಳು ಸಮ್ಮಿಶ್ರ ಸಕರ್ಾರಕ್ಕೆ ದೊಡ್ಡ ತಲೆನೋವಾಗಿದೆ.

ರೈತರ ಸಾಲ ಮನ್ನಾ ವಿಷಯದಲ್ಲಿ ನಿನ್ನೆಯಿಂದಲೇ ಋಣಮುಕ್ತ ಪತ್ರ ಹಂಚಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ರೈತರ ಸಾಲ ಮನ್ನಾದ ಗೊಂದಲ ಇತ್ಯರ್ಥಗೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ಬಗ್ಗೆ ಸ್ಪಷ್ಟತೆ ಇಲ್ಲ. ವೈಜ್ಞಾನಿಕ ಬೆಲೆ, ಮಾರುಕಟ್ಟೆ ಸಮಸ್ಯೆಗಳನ್ನು ಜತೆಯಲ್ಲಿಟ್ಟುಕೊಂಡು ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.

ಕಬ್ಬು ಬೆಳೆ ಬಾಕಿ ಪಾವತಿ ವಿಷಯದಲ್ಲಿ ರೈತರು ಮತ್ತು ಸಕ್ಕರೆ ಕಾಖರ್ಾನೆ ಮಾಲೀಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರಲ್ಲಿ ಸಕರ್ಾರದ ಪಾತ್ರ ಇಲ್ಲದೇ ಇದ್ದರೂ ಸಂಘಟನೆಗಳು ಸಕರ್ಾರ ಮಧ್ಯ ಪ್ರವೇಶಿಸಿ ರೈತರ ಹಿತ ಕಾಪಾಡಬೇಕೆಂದು ಒತ್ತಡ ಹೇರುತ್ತಿವೆ.

ನಾಳೆಯಿಂದ ಆರಂಭಗೊಳ್ಳುವ ಚಳಿಗಾಲದ ಅಧಿವೇಶನದ ಹೊರಗೆ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಲಿವೆ. ಅಧಿವೇಶನದ ಒಳಗೆ ಪ್ರತಿಪಕ್ಷ ಬಿಜೆಪಿ ಸಕರ್ಾರದ ವಿರುದ್ಧ ಹರಿಹಾಯಲು ತಯಾರಿ ನಡೆಸಿದೆ.

ರೈತರ ಸಾಲ ಮನ್ನಾಕ್ಕೆ ಕೇಂದ್ರ ಸಕರ್ಾರದಿಂದ ಯಾವುದೇ ಕೊಡುಗೆ ಸಿಗದೇ ಇರುವುದನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ಆಡಳಿತ ಪಕ್ಷವೂ ಸಜ್ಜುಗೊಂಡಿದೆ.

ಸಿದ್ದರಾಮಯ್ಯ ಸಕರ್ಾರದ ಅವಧಿಯಲ್ಲಿ ಸುಮಾರು 35ಸಾವಿರ ಕೋಟಿ ರೂ.ನಷ್ಟು ಹಣ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ. ಆದರೆ, ಇದು ದುರ್ಬಳಕೆ ಅಲ್ಲ. ಲೆಕ್ಕಕ್ಕೆ ಸಿಗದ ಅಂದಾಜು ವೆಚ್ಚ ಎಂಬ ಸಮರ್ಥನೆಯನ್ನು ಕಾಂಗ್ರೆಸ್ ನೀಡಿದೆ.

ಆದರೂ ಬಿಜೆಪಿ ಈ ವಿಷಯವನ್ನು ಸದನದಲ್ಲಿ ಚಚರ್ೆ ನಡೆಸಲು  ಮುಂದಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಂಘರ್ಷ ಏರ್ಪಡುವ ಸಾಧ್ಯತೆಗಳಿವೆ.

ಕುಡಿಯುವ ನೀರಿನ ಸಮಸ್ಯೆ, ಸುಮಾರು 100 ತಾಲ್ಲೂಕುಗಳಲ್ಲಿ ಬರ, 8 ಜಿಲ್ಲೆಗಳಲ್ಲಿ ನೆರೆ, ಪ್ರವಾಹ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸಕರ್ಾರದ ವೈಫಲ್ಯಗಳ ವಿರುದ್ಧ ಚಚರ್ೆಗೆ ಬಿಜೆಪಿ 

ಸಜ್ಜುಗೊಂಡಿದೆ.