ಶುಶ್ರೂಷಕಿ ವೃತ್ತಿಯು ನಿಜಕ್ಕೂ ಅಪ್ರತಿಮವಾದದು :ಡಾ. ರಾಜಶೇಖರ

ಲೋಕದರ್ಶನ ವರದಿ

ಬೆಳಗಾವಿ, 18: ರೋಗಿಯ ಸೇವೆ ಮಾಡುವ ಶುಶ್ರೂಷಕಿ ವೃತ್ತಿಯು ನಿಜಕ್ಕೂ ಅಪ್ರತಿಮ. ಇಂತಹ ಪವಿತ್ರವಾದ ವೃತ್ತಿಯನ್ನು ಆಯ್ಕೆಮಾಡಿಕೊಂಡಿರುವ ತಾವೆಲ್ಲರೂ ನಿಜಕ್ಕೂ ಧನ್ಯರು ಎಂದು ಯು ಎಸ್ ಎಮ್ ಕೆಎಲ್ಇ ಯ ನಿದರ್ೇಶಕ ಡಾ ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು. ಅವರು ಇಂದು ಕೆಎಲ್ಇ ಸೆಂಟಿನರಿ ಕನ್ವೆಂಷನ್ ಹಾಲ್ನಲ್ಲಿ ನಡೆದ ಕೆಎಲ್ಇ ಸೆಂಟಿನರಿ ಇನ್ಟ್ಸಿಟ್ಯುಟ್ ಆಫ್ ನಸರ್ಿಂಗ ಸೈನ್ಸನ ಪ್ರಥಮ ಬ್ಯಾಚನ ವಿದ್ಯಾಥರ್ಿಗಳ ಪ್ರಮಾಣ ವಚನ ಸ್ವೀಕಾರ ಹಾಗೂ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾಥರ್ಿಗಳನ್ನು ಕುರಿತು ಮಾತನಾಡುತ್ತಿದ್ದರು. ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಯ ವಿಷಯದಲ್ಲಿ ವೈದ್ಯರಿಗೂ ಹಾಗೂ ಶುಶ್ರೂಷಕಿಯರಿಗೂ ಅಧಿಕವಾದ ವ್ಯತ್ಯಾಸವೇನಿಲ್ಲ ವೈದ್ಯ ರೋಗಿಯ ಜೊತೆಗೆ ಕೆಲವು ಸಮಯ ಮಾತ್ರ ಕಳೆದರೆ ಶುಶ್ರೂಷಕಿಯರು  ಆಸ್ಪತ್ರೆಯಲ್ಲಿರುವಷ್ಟು ಸಮಯ ರೋಗಿಯ ಸೇವೆಯಲ್ಲಿ ಇರಬೇಕಾಗುತ್ತದೆ ಆದ್ದರಿಂದ ಶುಶ್ರೂಷಕಿಯರ ಸೇವೆಯು ಅತ್ಯುನ್ನತವಾಗಿದೆ. ಸೇವಾನಿಷ್ಠ, ದಕ್ಷ, ಮಾನವೀಯ, ತ್ಯಾಗ ಹಾಗೂ ಪ್ರೇಮಗಳಿಂದ ರೋಗಿಗಳ ಸೇವೆಯನ್ನು ನಿರ್ವಹಿಸುವಂತಹರಾಗಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾಗಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಕಾಯಕಯೋಗಿ ಬಸವಣ್ಣನವರ ವಚನವನ್ನು ನೆನಪಿಸುತ್ತ "ಕಳಬೇಡ ಕೊಲಬೇಡಾ ಹುಸಿಯ ನುಡಿಯಬೇಡ" ಎಂಬ ಮಾತನ್ನು ನೆನಪಿಸುತ್ತ ಬಸವಣ್ಣನವರು ನುಡಿದಂತೆ ಶುಶ್ರೂಷಕಿಯರ ಸೇವೆಯು  ಅತ್ಯುನ್ನತವಾಗಿದ್ದು ಸೇವಾನಿಷ್ಠರಾಗಿರಬೇಕು. ವೈದ್ಯರು, ಅನುಭವಿಗಳು ಹೇಳಿದ ಮಾತಿಗೆ ವಿಧೇಯರಾಗಿರಬೇಕು. ಸುಳ್ಳು ನುಡಿಯಬಾರದು, ವೃತ್ತಿಯ ಬಗ್ಗೆ ಅಸಹ್ಯ ಪಡಬಾರದು ಈ ರೀತಿಯ ಮನೋಭಾವನೆಗಳನ್ನು ಬೆಳೆಸಿಕೊಂಡಾಗಲೇ ಮಾತ್ರ ನೀವು ಆಯ್ಕೆಮಾಡಿಕೊಂಡಿರುವ ವೃತ್ತಿಗೆ ನ್ಯಾಯ ವದಗಿಬಹುದಾಗಿದೆ. ಇದಲ್ಲದೇ ಶುಶ್ರೂಷಕಿ ವೃತ್ತಿಯ ಪ್ರತಿಷ್ಠಾಪಕಿ ಸಿಸ್ಟರ್ ನೈಟಿಂಗೇಲ ಅವರು ಕೂಡಾ ಇದನ್ನೇ ಪ್ರತಿಪಾದಿಸಿದ್ದಾರೆ. ಅವರು ಅಂದು ಹೇಳಿದ ನುಡಿಗಳನ್ನು ಇಂದು ನೆನಪಿನಲ್ಲಿಟ್ಟುಕೊಂಡು ಸಾರ್ಥಕ ಜೀವನ ಸಾಗಿಸಿ ಎಂದು ಕರೆ ನೀಡಿದರು. 

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಶುಶ್ರೂಷಕಿ ಹಾಗೂ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಸರ್ಿಂಗ ಅಧೀಕ್ಷಕಿ ಶ್ರೀಮತಿ ಇಂದುಮತಿ ವಾಘಮಾರೆ ಮುಂಬರುವ  ಶುಶ್ರೂಷಕಿಗಳಾಗಿ ನೀವು ಪ್ರಮಾಣಿಕವಾಗಿ ಸೇವೆಯನ್ನು ಸಲ್ಲಿಸಿದಾಗ ಮಾತ್ರ ನಿಮ್ಮ ವೃತ್ತಿಗೆ ಮೌಲ್ಯ ಬರುತ್ತದೆ. ರೋಗಿಯನ್ನು ಗುಣಮುಖರನ್ನಾಗಿ ಮಾಡಲು ನಿಮ್ಮ ಪಾತ್ರವು ಕೂಡ ಪ್ರಮುಖವಾಗಿರುತ್ತದೆ ಹಾಗಾಗಿ ನಿಮ್ಮ ಸೇವೆಯನ್ನು ನಿಷ್ಟೆ ಮತ್ತು ಪ್ರಮಾಣಿಕವಾಗಿ ಮಾಡಿ ಎಂದು ಕಿವಿ ಮಾತು ಹೇಳಿದರು. 

ಈ ಸಂದರ್ಭದಲ್ಲಿ 52 ನಸರ್ಿಂಗ ವಿದ್ಯಾಥರ್ಿಗಳು ಪ್ರಮಾಣವಚನ ಸ್ವೀಕರಿಸಿದರು.  ಕೆ ಎಲ್ ಇ ಸೆಂಟಿನರಿ ಇನ್ಟ್ಸಿಟ್ಯುಟ್ ಆಫ್ ನಸರ್ಿಂಗ ಸೈನ್ಸನ ಪ್ರಾಂಶುಪಾಲ ಶ್ರೀ ವಿಕ್ರಾಂತ ನೇಸರಿ  ಸ್ವಾಗತಿಸಿದರು.ಕು ಶ್ವೇತಾ ರಾವಲ, ಶ್ರೀಮತಿ ನಾಗರತ್ನಾ ಬನ್ನೂರ ಹಾಗೂ ಶ್ರೀಮತಿ ನೇತ್ರಾ ನಾಡಗೌಡರ ನಿರೂಪಿಸಿದರು. ಕು. ಸುಮಿತ್ರಾ ನಾಯಕ ವಂದಿಸಿದರು. ವಿಧ್ಯಾಥರ್ಿಗಳ ಪಾಲಕರು, ನಸರ್ಿಂಗ್ ಶಿಕ್ಷಕರು, ಮತ್ತು ಇನ್ನೂಳಿದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.