ಲೇಖನಿ ಖಡ್ಗಕ್ಕಿಂತಲೂ ಹರಿತವಾದುದು: ಕಲ್ಲಗನೂರ

ಲೋಕದರ್ಶನ ವರದಿ

ಗಜೇಂದ್ರಗಡ 09: ಪ್ರಾಚೀನ ಕಾಲದಿಂದಲೂ ಖಡ್ಗಕಿಂತಲೂ ಲೇಖನಿ ಅರಿತವಾಗಿದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೇ ಈ ದಿಸೆಯಲ್ಲಿ ಹವ್ಯಾಸಿ ಬರಹಗಾರ ಚೆನ್ನು ಸಮಗಂಡಿಯವರ ಸತ್ಯ ಮಿಥ್ಯ ಮಾಸ ಪತ್ರಿಕೆಯನ್ನ ಆರಂಭಿಸುವ ಮೂಲಕ ಪತ್ರಿಕಾ ರಂಗವನ್ನೇ ವೃತ್ತಿಯಾಗಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ  ಎಂದು ಕಲಾವಿದ ಪುಂಡಲಿಕ ಕಲ್ಲಿಗನೂರ ಹೇಳಿದರು.

ಅವರು ಪಟ್ಟಣದ ಜಗದಾಂಬ ಕಲ್ಯಾಣ ಮಂಟಪದಲ್ಲಿ ಜರುಗಿದ ಸತ್ಯ ಮಿಥ್ಯ ಮಾಸ ಪತ್ರಿಕೆ ಬಿಡುಗಡೆಗೋಳಿಸಿ ಮಾತನಾಡಿದರಲ್ಲದೆ ಇಂದಿನ ದಿನಮಾನದಲ್ಲಿ ಪತ್ರಿಕೆಯನ್ನು ನಡೆಸುವುದು ಕಷ್ಟದಾಯಕ ಕೆಲಸ ಪ್ರತಿ ಮಾಸಕೊಮ್ಮೆ ಹೊಸ ಅಚ್ಚರಿಯೊಂದಿಗೆ ಪತ್ರಿಕೆ ಬರಲಿ ಎಂದರು.

ಸಂಪಾದಕ ಚನ್ನು ಸಮಗಂಡಿ ಮಾತನಾಡಿ ಪತ್ರಿಕಾ ರಂಗದೊಂದಿಗೆ ಪ್ರಜಾಪ್ರಭುತ್ವಕ್ಕೆ ಭದ್ರವಾದ ಬುನಾದಿ ಇಗಾಗಿ ಪತ್ರಿಕಾ ರಂಗವನ್ನು ಸಕರ್ಾರದ ನಾಲ್ಕನೇ ಅಂಗ ಎನ್ನುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದಕ್ಕೆ ಬಾರದಂತೆ ಸಾಧಕರನ್ನ  ಸಮಾಜಕ್ಕೆ  ಪರಿಚಯಿಸುತ್ತಾ ಸ್ವಸ್ಥ ಸಮಾಜ ನಿಮರ್ಾಣಕ್ಕಾಗಿಯೇ ಸತ್ಯ ಮಿಥ್ಯ ಎಂಬ ಪತ್ರಿಕೆ ಆರಂಭಿಸಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ ವಿ ಕಂಬಳ್ಯಾಳ ವಹಿಸಿದ್ದರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇ ಬ್ರ ಕಲ್ಲಿನಾಥ ಭಟ್ಟರು ವಹಿಸಿದ್ದರು. ಮಂಕೇಶ ಪತ್ರಿಕೆಯ ಸಂಪಾದಕರಾದ ಅಕ್ಬರ್ ಬೆಳಗಾಂವ್ಕರ್, ಹನುಮಂತಮ್ಮ ನಾಯಕ, ಸಿ ವ್ಹಿ ಮಾಳಗಿ, ಅರವಿಂದ ಕವಡಿಮಟ್ಟಿ, ಮಾರುತಿ  ಮಾಳೋತ್ತರ, ಮಲ್ಲು ಕಸಾಯಿ  ರಾಜು ಉಳ್ಳಾಗಡ್ಡಿ, ವಿರೇಶ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.