ಧಾರವಾಡ 30: ಕೆರೆ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ಶುಚಿಯಾಗಿ ಇಡಲು ಸಾರ್ವಜನಿಕರು ಮುಂದಾಗಬೇಕು. ಜಲ ಸಂಪನ್ಮೂಲ ಉಳಿಯಬೇಕಾದರೆ ನಮ್ಮ ಸಂಪತ್ತಾದ ಕೆರೆಗಳನ್ನು, ಅದಕ್ಕೆ ಬರತಕ್ಕಂತಹ ನೀರಿನ ಮೂಲವನ್ನು ಸ್ವಚ್ಛಗೊಳಿಸಿ ನಾವೆಲ್ಲರು ಕೆರೆಗಳನ್ನು ತುಂಬುವಂತಹ ಕೆಲಸಮಾಡಬೇಕಾಗಿದೆ. ಅಲ್ಲದೆ ಸಾರ್ವಜನಿಕರೂ ಕೂಡಾ ಕೆರೆಗಳಲ್ಲಿ ಯಾವುದೇ ನಿರುಪಯುಕ್ತ ವಸ್ತುಗಳನ್ನು ಒಗೆಯದೆ ದನಕರುಗಳಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡಬೇಕು ಎಂದು ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ವಿಜಯಕುಮಾರ ಕಡಕ್ಬಾವಿಯವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಕರ್ಾರಿ ಪದವಿಪೂರ್ವ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಹು-ಧಾ ಮಹಾನಗರ ಪಾಲಿಕೆ ಹಾಗೂ ಧಾರವಾಡ ರೌಂಡ ಟೆಬಲ್-60 ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕೆಲಗೇರಿ ಕೆರೆ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆರೆಗಳು-ಭಾವಿಗಳು ಉಳಿದರೆ ನಾವೆಲ್ಲ ಉಳಿಯುತ್ತೇವೆ. ಇಲ್ಲದೆ ಹೋದರೆ ನಮಗೆಲ್ಲ ಮುಂದೆ ಬರತಕ್ಕಂತಹ ದಿನಮಾನಗಳಲ್ಲಿ ನೀರಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸಕರ್ಾರವೂ ಕೂಡಾ ಮಹಾನಗರಕ್ಕೆ ದಾಂಡೇಲಿ ಹತ್ತಿರ ಇರುವ ಕಾಳಿಯಿಂದ ನೀರು ತರುವಂತಹ ಯೋಜನೆಯನ್ನು ಕೈಗೊಳ್ಳಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೂಡಾ ಇದಕ್ಕೆ ಸೂಕ್ತವಾದ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಕೂಡಲೇ ಸಲ್ಲಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಅಧ್ಯಕ್ಷ ಶಂಕರ ಕುಂಬಿ ಆಗ್ರಹಿಸಿದರು.
ಪ್ರಸಕ್ತ ವರ್ಷ ದುಮ್ಮವಾಡ ಹತ್ತಿರ ಇರುವ ನೀರಸಾಗರ ಕೆರೆ ಬತ್ತಿಹೋಗಿರುವುದರಿಂದ ಮುಂದಿನ ದಿನಮಾನಗಳಲ್ಲಿ ಜನರು ನೀರಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅವಳಿನಗರ ಮಹಾನಗರದಲ್ಲಿದ್ದ ಎಲ್ಲ ಕೆರೆ ಮತ್ತು ಬಾವಿಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಹಾಗೂ ದನಕರುಗಳಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರು ಸಿಗುವಂತೆ ಮಹಾನಗರ ಪಾಲಿಕೆ ಅನುಕೂಲಮಾಡಿಕೊಡಬೇಕೆಂದು ಕುಂಬಿ ಒತ್ತಾಯಿಸಿದರು. ಬರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವು ಪ್ಲಾಸ್ಟಿಕ್ ಮತ್ತು ಪಟಾಕ್ಷಿ ಮುಕ್ತ ಸಮ್ಮೇಳನ ಆಗಬೇಕು ಎಂದು ಹೇಳಿ ಜಿಲ್ಲಾಡಳಿತ ಇದಕ್ಕೆ ಸೂಕ್ತವಾದ ಕ್ರಮಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ ನಂ. 1 ರ ಸಹಾಯಕ ಆಯುಕ್ತ ಸಬರದ ಅವರು ಮಾತಮಾಡಿ ಸಾರ್ವಜನಿಕರು ರಸ್ತೆಬದಿ ಕಸಚೆಲ್ಲಿ ಹೊಲಸು ಮಾಡಿದರೆ ದಂಡವನ್ನು ಹಾಕಲು ಯೋಚಿಸುತ್ತಿದ್ದೇವೆ. ಮತ್ತು ಮಹಾನಗರ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಇದರ ಬಗ್ಗೆ ಸಾಕಷ್ಟು ಕ್ರಮ ಕೈಕೊಂಡಿದ್ದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಇದಕ್ಕೆ ಸಹಕರಿಸಿ ಮಹಾನಗರವನ್ನು ಸ್ವಚ್ಛವಾಗಿಡಲು ಎಲ್ಲರು ಮನಸ್ಸು ಮಾಡಿ ಕಾಯರ್ೋನ್ಮುಖರಾಗೋಣ ಎಂದು ಹೇಳಿದರು.
ಸರಕಾರಿ ಪದವಿಪೂರ್ಣ ಮಹಾವಿದ್ಯಾಲಯದ ನೂರಾರು ವಿದ್ಯಾಥರ್ಿಗಳೊಂದಿಗೆ ಸಹಾಯಕ ಪರಿಸರ ಅಧಿಕಾರಿ ಸೋಮಶೇಖರ ಹಿರೇಗೌಡರ ಎನ್.ಎಸ್.ಎಸ್. ಯೋಜನಾ ಅಧಿಕಾರಿ ರಾಜಕುಮಾರ ಭಜಂತ್ರಿ, ಪ್ರೊ ಮಂಜುಳಾ ಸವಡಿ ರೌಂಡ ಟೇಬಲ್ಲ್ಲಿನ ಸುಜೀತ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ, ಕೆಲಗೇರಿ ಕೆರೆಯ ಈಜುಗಾರರಾದ ಚಂದ್ರು ತಳವಾರ ಕೆರೆಯ ರಕ್ಷಕ ಕೃಷಿ ವಿಶ್ವವಿದ್ಯಾಲಯದ ಮಾರುತಿ ದಾಳಿ ಮುಂತಾದವರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕೆರೆಯಲ್ಲಿ ಬಿದ್ದ ಅನೇಕ ಪ್ಲಾಸ್ಟಿಕ್, ಕೂದಲು, ಪೂಜಾ ಸಾಮಗ್ರಿಗಳಾದ ಕಾಯಿ, ಲಿಂಬಿಹಣ್ಣು ಮುಂತಾದ ವಸ್ತುಗಳನ್ನೆಲ್ಲ ತೆಗೆದು ಹಾಕಿ ಸ್ವಚ್ಛಗೊಳಿಸಲಾಯಿತು.